ಅಹಮದಾಬಾದ್: 2022ರ ಐಪಿಎಲ್ ಫೈನಲ್ ಪಂದ್ಯವನ್ನು ಗೃಹ ಸಚಿವ ಅಮಿತ್ ಶಾ ದಂಪತಿ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿ ವೀಕ್ಷಿಸಿದ್ದಾರೆ.
Advertisement
ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವೆ ಫೈನಲ್ ಪಂದ್ಯ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂ ಅಹಮದಾಬಾದ್‍ನಲ್ಲಿ ನಡೆಯುತ್ತಿದೆ. ಪಂದ್ಯ ನೋಡಲು ಅಮಿತ್ ಶಾ ದಂಪತಿ ಆಗಮಿಸಿದ್ದಾರೆ. ಸ್ಟೇಡಿಯಂನಲ್ಲಿ ಕೂತು ಆಟ ನೋಡುತ್ತಿರುವಂತೆ ಕ್ಯಾಮೆರಾಮ್ಯಾನ್ ಅವರತ್ತ ಕ್ಯಾಮೆರಾ ತಿರುಗಿಸಿದ್ದಾನೆ. ಈ ವೇಳೆ ಸ್ಕ್ರೀನ್ ಮೇಲೆ ಅಮಿತ್ ಶಾ ದಂಪತಿ ಕಾಣಿಸಿಕೊಳ್ಳುತ್ತಿದ್ದಂತೆ ಓಹೋ ಎಂದು ಐಪಿಎಲ್ ಪ್ರೇಕ್ಷಕರು ಜೈಕಾರ ಹೊರಡಿಸಿದ್ದಾರೆ. ಇದನ್ನೂ ಓದಿ: IPL Final 2022 – ವಿಶ್ವದ ಅತಿ ದೊಡ್ಡ ಜೆರ್ಸಿ ಅನಾವರಣಗೊಳಿಸಿ ಗಿನ್ನಿಸ್ ದಾಖಲೆ
Advertisement
Advertisement
ಪ್ರೇಕ್ಷಕರು ಜೋರಾಗಿ ಕಿರುಚಾಡುತ್ತಿದ್ದಂತೆ ಅಮಿತ್ ಶಾ ವಿಕ್ಟರಿ ಸಿಂಬಲ್ ತೋರಿಸಿದರು. ಇನ್ನೂ ಪಂದ್ಯ ನೋಡಲು ಪ್ರಧಾನಿ ನರೇಂದ್ರ ಮೋದಿ ಕೂಡ ಬರುವ ಸಾಧ್ಯತೆ ಇದೆ. ಇದನ್ನೂ ಓದಿ: 2014ರ ಬಳಿಕ ಧೋನಿ, ಕೊಹ್ಲಿ, ರೋಹಿತ್ ಇಲ್ಲದೇ ಐಪಿಎಲ್ ಫೈನಲ್
Advertisement
Sonal Shah ji, wife of Union home minister Amit Shah ji with Super star #AkshayKumar #IPLFinals #IPL2022 pic.twitter.com/lwVUMP6aiI
— Tushar Kumar ???? (@PuranaChawL) May 29, 2022
ಈ ಮೊದಲು ನಡೆದ ಸಮಾರೋಪ ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರನ್ನು ಬಾಲಿವುಡ್ ನಟ ರಣವೀರ್ ಸಿಂಗ್, ಅನೇಕ ಚಿತ್ರಗಳ ಹಾಡಿಗೆ ಹೆಜ್ಜೆ ಹಾಕುವ ಮೂಲಕ ರಂಜಿಸಿದರು. ಅಲ್ಲದೇ ಕೆಜಿಎಫ್ 2 ಚಿತ್ರದ ‘ಧೀರಾ ಧೀರಾ’ ಮತ್ತು ಥೀಮ್ ಸಾಂಗ್‍ಗೆ ರಣವೀರ್ ಸಿಂಗ್ ಕುಣಿದು ಕುಪ್ಪಳಿಸಿದರು. ಅಲ್ಲದೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಪಂದ್ಯ ವೀಕ್ಷಿಸಲು ಅಕ್ಷಯ್ ಕುಮಾರ್ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಆಗಮಿಸಿದ್ದಾರೆ.