Cricket

ಲಾಸ್ಟ್‌ ಬಾಲಿನಲ್ಲಿ ಸಿಕ್ಸ್‌ – ಭರತ್‌, ಮ್ಯಾಕ್ಸಿ ಬೆಂಕಿಯಾಟಕ್ಕೆ ಡೆಲ್ಲಿ ಪಂಚರ್‌

Published

on

Share this

ದುಬೈ: ಕೊನೆಯ ಎಸೆತದಲ್ಲಿ ಶ್ರೀಕರ್‌ ಭರತ್‌ ಸಿಕ್ಸ್‌ ಸಿಡಿಸುವ ಮೂಲಕ ಡೆಲ್ಲಿ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ತಂಡ 7 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ.

ಗೆಲ್ಲಲು 165 ರನ್‌ಗಳ ಸವಾಲು ಪಡೆದ ಆರ್‌ಸಿಬಿ 20 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿ ಜಯಗಳಿಸಿತು.

ಆವೀಶ್‌ ಖಾನ್‌ ಎಸೆದ ಕೊನೆಯ ಓವರಿನಲ್ಲಿ 15 ರನ್‌ ಬೇಕಿತ್ತು. ಮೊದಲ ಎಸೆತದಲ್ಲಿ ಮ್ಯಾಕ್ಸ್‌ವೆಲ್‌ 4 ರನ್‌ ಹೊಡೆದರೆ ಎರಡನೇ ಎಸೆತದಲ್ಲಿ ಎರಡು ರನ್‌ ಓಡಿದರು. ಮೂರನೇ ಎಸೆತ ಲೆಗ್‌ಬೈ ಮೂಲಕ 1 ರನ್‌ ಬಂತು. 4ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 5 ನೇ ಎಸೆತದಲ್ಲಿ ಅಕ್ಷರ್‌ ಪಟೇಲ್‌ ಮಿಸ್‌ ಫೀಲ್ಡ್‌ ಮಾಡಿದ ಕಾರಣ 2 ರನ್‌ ಬಂದರೆ ನಂತರದ ಎಸೆತ ವೈಡ್‌ ಆಯ್ತು. ಕೊನೆಯ ಎಸೆತದಲ್ಲಿ 4 ರನ್‌ ಬೇಕಿದ್ದಾಗ ಭರತ್‌ ಸಿಕ್ಸ್‌ ಸಿಡಿಸಿದರು. ಇದನ್ನೂ ಓದಿ: ಇನ್ಮುಂದೆ ಚೆನ್ನೈ ಪರ ಆಡುತ್ತೀನಾ ಇಲ್ಲವೋ ಗೊತ್ತಿಲ್ಲ: ಧೋನಿ ಅಚ್ಚರಿಯ ಹೇಳಿಕೆ

ಮುರಿಯದ 4ನೇ ವಿಕೆಟಿಗೆ ಭರತ್‌ ಮತ್ತು ಮ್ಯಾಕ್ಸ್‌ವೆಲ್‌ 63 ಎಸೆತಗಳಲ್ಲಿ 111 ರನ್‌ ಹೊಡೆದು ಜಯವನ್ನು ತಂದುಕೊಟ್ಟಿದ್ದಾರೆ.

ಶ್ರೀಕರ್‌ ಭರತ್‌ 78 ರನ್‌(52 ಎಸೆತ, 3 ಬೌಂಡರಿ, 4 ಸಿಕ್ಸರ್)‌, ಮ್ಯಾಕ್ಸ್‌ವೆಲ್‌ 51 ರನ್‌(33 ಎಸೆತ, 8 ಬೌಂಡರಿ) ಹೊಡೆದರು. ಎಬಿಡಿ 26 ರನ್‌ಗಳಿಸಿ ಔಟಾದರು.

ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಪೃಥ್ವಿ ಶಾ 48 ರನ್‌(31 ಎಸೆತ, 4 ಬೌಂಡರಿ, 2 ಸಿಕ್ಸರ್‌) ಶಿಖರ್‌ ಧವನ್‌ 43 ರನ್‌(35 ಎಸೆತ, 3 ಬೌಂಡರಿ,2 ಸಿಕ್ಸರ್‌) ಹೆಟ್ಮೆಯರ್‌ 29 ರನ್‌(22 ಎಸೆತ, 2 ಬೌಂಡರಿ, 2 ಸಿಕ್ಸರ್‌) ಹೊಡೆದು ಔಟಾದರು.

ಸಿರಾಜ್‌ 2 ವಿಕೆಟ್‌ ಪಡೆದರೆ ಚಹಲ್‌, ಹರ್ಷಲ್‌ ಪಟೇಲ್‌, ಕ್ರಿಸ್ಟಿಯನ್‌ ತಲಾ ಒಂದೊಂದು ವಿಕೆಟ್‌ ಪಡೆದರು.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications