Cricket

ಹೈದರಾಬಾದ್‌ಗೆ ರೋಚಕ 4 ರನ್‌ ಜಯ – ಕೊನೆಯಲ್ಲಿ ಪಂದ್ಯ ಕೈ ಚೆಲ್ಲಿದ ಆರ್‌ಸಿಬಿ

Published

on

Share this

ಅಬುಧಾಬಿ: ರಾಯಲ್ಸ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ರೋಚಕವಾಗಿ 4 ರನ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿದೆ.

142 ರನ್‌ಗಳ ಸವಾಲು ಪಡೆದ ಬೆಂಗಳೂರು 6 ವಿಕೆಟ್‌ ನಷ್ಟಕ್ಕೆ 137 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರುವ ಅವಕಾಶವನ್ನು ಕಳೆದುಕೊಂಡಿತು.

ಕೊನೆಯ ಎರಡು ಓವರ್‌ಗಳಲ್ಲಿ 18 ರನ್‌ ಬೇಕಿತ್ತು. ಹೋಲ್ಡರ್‌ ಎಸೆದ 19ನೇ ಓವರಿನಲ್ಲಿ 5 ರನ್‌ ಬಂತು. ಕೊನೆಯ ಓವರಿನಲ್ಲಿ 13 ರನ್‌ ಬೇಕಿತ್ತು. ಭುವನೇಶ್ವರ್‌ ಕುಮಾರ್‌ ಎಸೆದ ಕೊನೆಯ ಮೂರು ಎಸೆತಗಳಲ್ಲಿ 12 ರನ್‌ ಬೇಕಿತ್ತು. ಎಬಿಡಿ ವಿಲಿಯರ್ಸ್‌ 4ನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ್ದರು. ಆದರೆ 5ನೇ ಎಸೆತದಲ್ಲಿ ಯಾವುದೇ ರನ್‌ ಬರಲಿಲ್ಲ. 6ನೇ ಎಸೆತದಲ್ಲಿ 1 ರನ್‌ ಬಂತು. 1, 3, 5ನೇ ಎಸೆತದಲ್ಲಿ ಯಾವುದೇ ರನ್‌ ಬಾರದ ಕಾರಣ ಆರ್‌ಸಿಬಿ ಪಂದ್ಯವನ್ನು ಸೋತಿತು.

ಪಡಿಕಲ್‌ 41 ರನ್‌(52 ಎಸೆತ, 4 ಬೌಂಡರಿ), ಮ್ಯಾಕ್ಸ್‌ವೆಲ್‌ 40 ರನ್‌(25 ಎಸೆತ, 3 ಬೌಂಡರಿ, 2 ಸಿಕ್ಸರ್‌), ಎಬಿಡಿ ಔಟಾಗದೇ 19 ರನ್‌(13 ಎಸೆತ, 1 ಬೌಂಡರಿ, 1 ಸಿಕ್ಸರ್‌), ಶಹಬಾಜ್‌ ಅಹ್ಮದ್‌ 14 ರನ್‌(9 ಎಸೆತ, 2 ಬೌಂಡರಿ) ಹೊಡೆದರು.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಹೈದರಬಾದ್‌ ಆರಂಭದಲ್ಲೇ ಅಭಿಷೇಕ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡರೂ ಎರಡನೇ ವಿಕೆಟಿಗೆ ಜೇಸನ್‌ ರಾಯ್‌ ಮತ್ತು ಕೇನ್‌ ವಿಲಿಯಮ್ಸನ್‌ 58 ಎಸೆತಗಳಲ್ಲಿ 70 ರನ್‌ ಜೊತೆಯಾಟವಾಡಿದರು.

ಕೇನ್‌ ವಿಲಿಯಮ್ಸನ್‌ 31 ರನ್‌(29 ಎಸೆತ, 4 ಬೌಂಡರಿ) ಹೊಡೆದು ಔಟಾದರೆ ಜೇಸನ್‌ ರಾಯ್‌ 44 ರನ್‌(38 ಎಸೆತ, 5 ಬೌಂಡರಿ) ಹೊಡೆದು ಔಟಾದರು. ಸ್ಲಾಗ್‌ ಓವರ್‌ಗಳಲ್ಲಿ ಆರ್‌ಸಿಬಿ ಬೌಲರ್‌ಗಳು ರನ್‌ಗೆ ಕಡಿವಾಣ ಹಾಕಿದ ಕಾರಣ ಹೈದರಾಬಾದ್‌ ಮೊತ್ತ ಏರಲಿಲ್ಲ.

ಹರ್ಷಲ್‌ ಪಟೇಲ್‌ 3, ಡೇನ್‌ ಕ್ರಿಸ್ಟಿಯನ್‌ 2, ಚಹಲ್‌ ಮತ್ತು ಜಾರ್ಜ್‌ ಗಾರ್ಟನ್‌ ತಲಾ ಒಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಆ ಒಂದು ಆಸೆಗಾಗಿ ಧೋನಿ ಈ ಬಾರಿ ಐಪಿಎಲ್‍ಗೆ ನಿವೃತ್ತಿ ಘೋಷಿಸಿಲ್ಲ 

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications