ದುಬೈ: ಕಳೆದ ಬಾರಿ ಲೀಗ್‍ನಲ್ಲೇ ಹೊರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.
ಐಪಿಎಲ್ ಫೈನಲ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಗಳಿಂದ ಜಯಗಳಿಸಿದ ಚೆನ್ನೈ 4ನೇ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಮತ್ತೊಮ್ಮೆ ತಾನೊಬ್ಬ ಯಶಸ್ವಿ ನಾಯಕ ಎಂಬುದನ್ನು ಧೋನಿ ತೋರಿಸಿಕೊಟ್ಟಿದ್ದಾರೆ.
Advertisement
193 ರನ್‍ಗಳ ಕಠಿಣ ಗುರಿಯನ್ನು ಪಡೆದ ಕೋಲ್ಕತ್ತಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಆರಂಭದಲ್ಲಿ ಬ್ಯಾಟ್ಸ್‌ಮನ್‌ಗಳು ನಂತರ ಬೌಲರ್‌ಗಳ ಅತ್ಯುತ್ತಮ ಆಟದಿಂದ 2010, 2011, 2018 ರ ಬಳಿಕ ಮತ್ತೆ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
Advertisement
Advertisement
193 ರನ್‍ಗಳ ಬೃಹತ್ ಮೊತ್ತ ಬೆನ್ನಟ್ಟಿದ ಕೋಲ್ಕತ್ತಾ ತಂಡ ಆರಂಭದಿಂದಲೇ ಅಬ್ಬರದಾಟ ಶುರುಮಾಡಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್ ಗಿಲ್ ಮತ್ತು ವೆಂಕಟೇಶ್ ಅಯ್ಯರ್ ಚೆನ್ನೈ ಬೌಲರ್‌ಗಳ ಬೆವರಿಳಿಸಿದರು. ಈ ಜೋಡಿ ಮೊದಲ ವಿಕೆಟ್‍ಗೆ 91 ರನ್ (64 ಎಸೆತ) ಜೊತೆಯಾಟವಾಡಿತು. ಆರಂಭದಲ್ಲೇ ಧೋನಿ ಬಿಟ್ಟ 2 ಕ್ಯಾಚ್‍ಗಳ ಲಾಭ ಪಡೆದ ಅಯ್ಯರ್ 50 ರನ್ (32 ಎಸೆತ, 4 ಬೌಂಡರಿ, 3 ಸಿಕ್ಸ್) ಬಾರಿಸಿ ಜಡೇಜಾ ಹಿಡಿದ ಅದ್ಭುತ ಕ್ಯಾಚ್‍ಗೆ ಬಲಿಯಾದರು. ಇವರೊಂದಿಗೆ ಗಿಲ್ ಕೂಡ 51 ರನ್ (43 ಎಸೆತ, 6 ಬೌಂಡರಿ) ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದಲ್ಲಿ ಕೋಲ್ಕತ್ತಾ ದಿಢೀರ್ ಕುಸಿತ ಕಾಣುವುದರೊಂದಿಗೆ ಪಂದ್ಯವನ್ನು ಕೈಚೆಲ್ಲಿತು.
Advertisement
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಚೆನ್ನೈ ತಂಡಕ್ಕೆ ಟೂರ್ನಿಯ ಆರಂಭದಿಂದಲೂ ಉತ್ತಮ ಜೊತೆಯಾಟ ಕೊಡುತ್ತಿದ್ದ ಋತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಜೊಡಿ ಫೈನಲ್ ಪಂದ್ಯದಲ್ಲೂ ಕೂಡ ಮೊದಲ ವಿಕೆಟ್‍ಗೆ 61 ರನ್ (50 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ದಾಳಿಗಿಳಿದ ಸುನೀಲ್ ನರೈನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಗಾಯಕ್ವಾಡ್ 32 ರನ್ (27 ಎಸೆತ 3 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಒಪ್ಪಿಸಿದರು.
ಡು ಪ್ಲೆಸಿಸ್ ಸ್ಫೋಟಕ ಆಟ
ನಂತರ ಬಂದ ರಾಬಿನ್ ಉತ್ತಪ್ಪ ಪಟಪಟನೆ ಮೂರು ಸಿಕ್ಸ್ ಬಾರಿಸಿ ಮಿಂಚಿದರು. ಈ ವೇಳೆ ಮತ್ತೆ ದಾಳಿಗಿಳಿದ ನರೈನ್ ರಾಬಿನ್‍ರನ್ನು ಪೆವಿಲಿಯನ್‍ಗಟ್ಟುವಲ್ಲಿ ಯಶಸ್ವಿಯಾದರು ಉತ್ತಪ್ಪ (31 ರನ್, 15 ಎಸೆತ, 3 ಸಿಕ್ಸ್) ಬಾರಿಸಿ ಔಟ್ ಆದರು. ಆ ಬಳಿಕ ಜೊತೆಯಾದ ಮೊಯಿನ್ ಅಲಿ ಮತ್ತ ಡು ಪ್ಲೆಸಿಸ್ ಕೋಲ್ಕತ್ತಾ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದರು. ಈ ಜೊಡಿ 3ನೇ ವಿಕೆಟ್‍ಗೆ 68 ರನ್ (39 ಎಸೆತ) ಚಚ್ಚಿ ಮಿಂಚು ಹರಿಸಿತು. ಆರಂಭಿಕನಾಗಿ ಬಂದು ಕೊನೆಯ ಎಸೆತದವರೆಗೆ ಬ್ಯಾಟಿಂಗ್ ನಡೆಸಿದ ಡು ಪ್ಲೆಸಿಸ್ 86 ರನ್ (59 ಎಸೆತ, 7 ಬೌಂಡರಿ, 3 ಸಿಕ್ಸ್) ಸಿಡಿಸಿ ಕೊನೆಯಲ್ಲಿ ಔಟ್ ಆದರು. ಇವರಿಗೆ ಉತ್ತಮ ಸಾಥ್ ನೀಡಿದ ಅಲಿ 37 ರನ್ (20 ಎಸೆತ, 2 ಬೌಂಡರಿ, 1 ಸಿಕ್ಸ್) ಬಾರಿಸಿ ಅಜೇಯರಾಗಿ ಉಳಿದರು. ಚೆನ್ನೈ 20 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 192 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಕೋಲ್ಕತ್ತಾ ಪರ ಸುನೀಲ್ ನರೈನ್ 2 ವಿಕೆಟ್ ಪಡೆದರೆ, ಶಿವಂ ಮಾವಿ 1 ವಿಕೆಟ್ ಕಿತ್ತರು.
ಚೆನ್ನೈ ರನ್ ಏರಿದ್ದು ಹೇಗೆ?
50 ರನ್ 37 ಎಸೆತ
100 ರನ್ 70 ಎಸೆತ
150 ರನ್ 103 ಎಸೆತ
192 ರನ್ 120 ಎಸೆತ