ಸಿಕ್ಸರ್‌, ಬೌಂಡರಿಗಳ ಸುರಿಮಳೆಗೈದ ರಾಹುಲ್‌ – ಪಂಜಾಬ್‌ಗೆ 6 ವಿಕೆಟ್‌ಗಳ ಜಯ

Public TV
1 Min Read
KL Rahul e1633612147762

ದುಬೈ: ನಾಯಕ ಕೆಎಲ್‌ ರಾಹುಲ್‌ ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಪಂಜಾಬ್‌ ಕಿಂಗ್ಸ್‌ 6 ವಿಕೆಟ್‌ಗಳ ಜಯ ಸಾಧಿಸಿದೆ.

ಗೆಲ್ಲಲು 135 ರನ್‌ಗಳ ಗುರಿಯನ್ನು ಪಡೆದ ಪಂಜಾಬ್‌ 13 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 139 ರನ್‌ ಹೊಡೆಯುವ ಮೂಲಕ ಗುರಿಯನ್ನು ತಲುಪಿತು. ಇನ್ನಿಂಗ್ಸ್‌ ಆರಂಭದಿಂದಲೂ ಸ್ಫೋಟಕ ಬ್ಯಾಟಿಂಗ್‌ ಮಾಡಿದ ರಾಹುಲ್‌ ಔಟಾಗದೇ 98 ರನ್‌(42 ಎಸೆತ, 7 ಬೌಂಡರಿ, 8 ಸಿಕ್ಸರ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು.

Shardul Thakur

ಈ ಪಂದ್ಯಕ್ಕೂ ಮೊದಲು ಪಂಜಾಬ್‌ ರನ್‌ ರೆಟ್‌ -0.241ಇತ್ತು. ಈಗ ಇದು -0.001 ಏರಿಕೆಯಾಗಿದೆ. ಪಂಜಾಬ್‌ ಪರ ರಾಹುಲ್‌ ಬಿಟ್ಟರೆ ಮಯಾಂಕ್‌ ಅಗರವಾಲ್‌ 12 ರನ್‌, ಏಡನ್ ಮಾರ್ಕ್ರಮ್ 13 ರನ್‌ ಗಳಿಸಿ ಔಟಾದರು.

Punjab Kings 1

ಇಂದಿನ ಪಂದ್ಯವನ್ನು ಪಂಜಾಬ್‌ ಗೆದ್ದರೂ ಪ್ಲೇ ಆಫ್‌ಗೆ ಹೋಗುವ ಆಸೆ ಬಹಳ ಕ್ಷೀಣವಾಗಿದೆ. ಯಾಕೆಂದರೆ ರಾಜಸ್ಥಾನ ವಿರುದ್ಧ ಕೋಲ್ಕತ್ತಾ ಭಾರೀ ಅಂತರದಿಂದ ಸೋಲಬೇಕು. ಅಷ್ಟೇ ಅಲ್ಲದೇ ನಾಳೆ ನಡೆಯಲಿರುವ ಪಂದ್ಯದಲ್ಲಿ ಮುಂಬೈ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ ಗೆಲ್ಲಬೇಕು. ಸದ್ಯದ ಮಟ್ಟಿಗೆ ಈ ಫಲಿತಾಂಶ ಬರುವುದು ಬಹಳ ಕಷ್ಟ. ಇದನ್ನೂ ಓದಿ: ಟಿ20 ಕ್ರಿಕೆಟ್‍ನಲ್ಲಿ ಭಾರತದ ನೂತನ ಸಿಕ್ಸರ್ ಕಿಂಗ್ ಆದ ಹಿಟ್‍ಮ್ಯಾನ್

Faf du Plessis and ravindra jadeja

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ಚೆನ್ನೈ ಪಂಜಾಬ್‌ ಬೌಲರ್‌ಗಳ ಬಿಗಿಯಾದ ದಾಳಿಗೆ 6 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಿತು. ಫಾಫ್‌ ಡುಪ್ಲೆಸಿಸ್‌ 76 ರನ್‌(55 ಎಸೆತ, 8 ಬೌಂಡರಿ, 2 ಸಿಕ್ಸರ್‌) ಹೊಡೆದು ಪ್ರತಿರೋಧ ತೋರಿದ್ದು ಬಿಟ್ಟರೆ ಬೇರೆ ಆಟಗಾರರಿಂದ ಹೋರಾಟ ಕಂಡು ಬರಲಿಲ್ಲ.

ರವೀಂದ್ರ ಜಡೇಜಾ ಔಟಾಗದೇ 15 ರನ್‌, ಧೊನಿ ಮತ್ತು ಋತುರಾಜ್‌ ಗಾಯಕ್‌ವಾಡ್‌ 12 ರನ್‌ ಹೊಡೆದು ಔಟಾದರು. ಚೆನ್ನೈ ಪರ ಕ್ರಿಸ್‌ ಜೋರ್ಡನ್‌, ಅರ್ಶದೀಪ್‌ ಸಿಂಗ್‌ ತಲಾ 2 ವಿಕೆಟ್‌ ಪಡೆದರೆ ಮೊಹಮ್ಮದ್‌ ಶಮಿ, ರವಿ ಬಿಶ್ನೋಯಿ ತಲಾ 1 ವಿಕೆಟ್‌ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *