ಚೆನ್ನೈ: ಇಂಡಿಯನ್ ಪ್ರಿಮಿಯರ್ ಲೀಗ್ 13ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಅಭ್ಯಾಸ ನಡೆಸಿದೆ. ಅದರಲ್ಲೂ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ಫೋಟಕ ಬ್ಯಾಟಿಂಗ್‍ಗೆ ಕಠಿಣ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಎಂ.ಎಸ್.ಧೋನಿ ಸತತ ಐದು ಸಿಕ್ಸರ್ ಸಿಡಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೆನ್ನೈ ಸೂಪರ್ ಸಿಕ್ಸ್ ತಂಡದ ಅನುಭವಿ ಆಟಗಾರ ಸುರೇಶ್ ರೈನಾ, ಕ್ಯಾಪ್ಟನ್ ಎಂ.ಎಸ್.ಧೋನಿ ಸೇರಿದಂತೆ ಕೆಲ ಆಟಗಾರರು ಈಗಾಗಲೇ ಚೆನ್ನೈನಲ್ಲಿ ಕ್ರಿಕೆಟ್ ಅಭ್ಯಾಸ ಆರಂಭಿಸಿದ್ದಾರೆ. ನೆಟ್ ಒಳಗೆ ಬ್ಯಾಟಿಂಗ್ ನಡೆಸಿದ್ದ ಎಂಎಸ್‍ಡಿ ಸತತ ಐದು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ವೇಳೆ ನೆಟ್ ಹಿಂದೆ ನಿಂತಿದ್ದ ಸುರೇಶ್ ರೈನಾ ಫುಲ್ ಖುಷ್ ಆಗಿ ಧೋನಿ ಅಬ್ಬರ ನೋಡುತ್ತಿದ್ದರು. ಇದನ್ನೂ ಓದಿ: 37 ಎಸೆತಗಳಲ್ಲಿ ಸ್ಫೋಟಕ ಶತಕ- ಹಾರ್ದಿಕ್ ಪಾಂಡ್ಯ ಕಮ್‍ಬ್ಯಾಕ್
BALL 1⃣ – SIX
BALL 2⃣ – SIX
BALL 3⃣ – SIX
BALL 4⃣ – SIX
BALL 5⃣ – SIX
ஐந்து பந்துகளில் ஐந்து சிக்ஸர்களை பறக்கவிட்ட தல தோனி!
முழு காணொளி காணுங்கள் ????????
#⃣ "The Super Kings Show"
⏲️ 6 PM
???? ஸ்டார் ஸ்போர்ட்ஸ் 1 தமிழ்
???? மார்ச் 8
➡️ @ChennaiIPL pic.twitter.com/rIcyoGBfhE
— Star Sports Tamil (@StarSportsTamil) March 6, 2020
2019ರ ವಿಶ್ವಕಪ್‍ನಲ್ಲಿ ಸೆಮಿಫೈನಲ್‍ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಸೋತ ನಂತರ ಧೋನಿ ಅವರು ಕ್ರಿಕೆಟ್‍ನಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮಾರ್ಚ್ ನಲ್ಲಿ ಆರಂಭವಾಗುತ್ತಿರುವ ಐಪಿಲ್‍ನಲ್ಲಿ ಅವರನ್ನು ನೋಡಲು ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಮಾರ್ಚ್ ನಲ್ಲಿ ಆರಂಭವಾಗುವ ಐಪಿಎಲ್‍ನಲ್ಲಿ ಧೋನಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಮಾರ್ಚ್ 3 ರಂದು ಚೆನ್ನೈಗೆ ಬಂದಿದ್ದು, ಚಿದಂಬರಂ ಮೈದಾನದಲ್ಲಿ ಸುರೇಶ್ ರೈನಾ ಅವರ ಜೊತೆಗೆ ಅಭ್ಯಾಸ ನಡೆಸಿದ್ದಾರೆ. ಇದನ್ನೂ ಓದಿ: ಪರಿವರ್ತನೆಯೊಂದೇ ಶಾಶ್ವತವಾದದ್ದು ಎಂದ ವಿರಾಟ್
The HELICOPTER SHOT ????that worth more than million dollars ???????? #Dhoni #Yellove #Csk
.
Waiting for March 29th just to see him as a LEADER! ???????? @msdhoni pic.twitter.com/ga2aF1mDnI
— Saravanan Hari ???????????? (@CricSuperFan) March 3, 2020
ಧೋನಿ ಇತ್ತೀಚೆಗಷ್ಟೇ ತಮ್ಮ ಹುಟ್ಟೂರು ರಾಂಚಿಯ ಸ್ಟೇಡಿಯಂನಲ್ಲಿ ಕ್ರಿಕೆಟ್ ಪಿಚ್ ಅನ್ನು ಸಮತಟ್ಟಾಗಿಸಲು ಇರುವ ಪಿಚ್ ರೋಲರ್ ವಾಹನವನ್ನು ಓಡಿಸಿದ್ದರು. ಇದನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಧೋನಿ ಸರಳತೆಗೆ ಅವರ ಫ್ಯಾನ್ಸ್ ಫಿದಾ ಆಗಿದ್ದರು.