Connect with us

Cricket

ಮತ್ತೆ ಐಪಿಎಲ್ ಹರಾಜು ಎದುರಿಸುತ್ತಾರಾ ಯುವಿ, ಉತ್ತಪ್ಪ?

Published

on

– 2020ರ ಆವೃತ್ತಿಯ ಹರಾಜು ಡಿಸೆಂಬರ್ 19ಕ್ಕೆ ಫಿಕ್ಸ್
– 12 ಆಟಗಾರರನ್ನು ಕೈಬಿಟ್ಟ ಆರ್‌ಸಿಬಿ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದ್ದು, 2020ರ ಆವೃತ್ತಿಯ ಆಟಗಾರರ ಹರಾಜು ಕೋಲ್ಕತ್ತಾದಲ್ಲಿ ಡಿಸೆಂಬರ್ 19 ರಂದು ನಡೆಯಲಿದೆ. ಆದರೆ ಅತ್ಯಂತ ಆಶ್ಚರ್ಯವೆಂದರೆ ಸ್ಟಾರ್ ಬ್ಯಾಟ್ಸ್‌ಮನ್‌ಗಳಾದ ಯುವರಾಜ್ ಸಿಂಗ್, ಕ್ರಿಸ್ ಲೀನ್, ಡೇವಿಡ್ ಮಿಲ್ಲರ್ ಅವರನ್ನು ತಂಡಗಳು ಕೈಬಿಟ್ಟಿವೆ.

ಐಪಿಎಲ್‍ನ 8 ತಂಡಗಳ ಫ್ರಾಂಚೈಸ್ ಗಳು ಒಟ್ಟು 71 ಆಟಗಾರರನ್ನು ಕೈಬಿಟ್ಟಿದ್ದು, 127 ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಈ ಪೈಕಿ ಮುಂಬೈ ಇಂಡಿಯನ್ಸ್ ನಿಂದ ಹೊರಬಿದ್ದ ಯುವರಾಜ್ ಸಿಂಗ್ ಹಾಗೂ ಕೋಲ್ಕತ್ತಾದಿಂದ ಕೈಬಿಟ್ಟ ರಾಬಿನ್ ಉತ್ತಪ್ಪ 2020ರ ಆವೃತ್ತಿಯ ಹರಾಜು ಎದುರಿಸುತ್ತಾರಾ ಎನ್ನುವ ಚರ್ಚೆ ಶುರುವಾಗಿದೆ. ಇದನ್ನೂ ಓದಿ: 9 ವರ್ಷದ ರಾಜಸ್ಥಾನ್ ನಂಟು ಮುರಿದು ದೆಹಲಿ ಪರ ಬ್ಯಾಟ್ ಬೀಸಲಿದ್ದಾರೆ ರಹಾನೆ

2019ರಲ್ಲಿ ಕೆಕೆಆರ್ ಪರ ಉತ್ತಪ್ಪ 12 ಪಂದ್ಯಗಳನ್ನು ಆಡಿದ್ದರು. ಆದರೆ ಉತ್ತಪ್ಪ ಒಂದು ಬಾರಿ ಮಾತ್ರ ಅರ್ಧ ಶತಕ ಬಾರಿಸಿದ್ದರು. ಅವರ ಸ್ಟ್ರೈಕ್ ರೇಟ್ ಕಳೆದ 5 ವರ್ಷಗಳಲ್ಲಿ 115.10 ರಷ್ಟಿತ್ತು. ಈ ಕಾರಣದಿಂದಾಗಿ ಕೆಕೆಆರ್ ರಾಬಿನ್ ಉತ್ತಪ್ಪ ಅವರನ್ನು ಕೈಬಿಟ್ಟಿದೆ. 2019ರ ಆವೃತ್ತಿಯಲ್ಲಿ ಕೆಕೆಆರ್ ಅವರಿಗೆ 6.4 ಕೋಟಿ ಪಾವತಿಸಿತ್ತು. ಇದನ್ನೂ ಓದಿ: ಐಪಿಎಲ್ ಉದ್ಘಾಟನಾ ಸಮಾರಂಭ ‘ವೇಸ್ಟ್ ಆಫ್ ಮನಿ’ ಎಂದ ಬಿಸಿಸಿಐ

ಯಾವ ತಂಡ? ಯಾರು ಹೊರಕ್ಕೆ?:
ಕೋಲ್ಕತಾ ನೈಟ್ ರೈಡರ್ಸ್: ರಾಬಿನ್ ಉತ್ತಪ್ಪ, ಕ್ರಿಸ್ ಲೀನ್, ಜೋ ಡೆನಾಲಿ, ಎನ್ರಿಚ್ ನಾರ್ಟೇಜ್, ಪಿಯೂಷ್ ಚಾವ್ಲಾ, ಕಾರ್ಲೋಸ್ ಬ್ರಾಥ್‍ವೈಟ್, ಪೃಥ್ವಿರಾಜ್, ನಿಖಿಲ್ ನಾಯಕ್, ಕರಿಯಪ್ಪ, ಮ್ಯಾಥ್ಯೂ ಕೆಲ್ಲಿ, ಎಸ್ ಮುಂಡೆ.

ಮುಂಬೈ ಇಂಡಿಯನ್ಸ್: ಯುವರಾಜ್ ಸಿಂಗ್, ಆಡಮ್ ಮಿಲ್ನೆ, ಎಲ್ಜಾರಿ ಜೋಸೆಫ್, ಬರೀಂದರ್ ಸರನ್, ಬೆನ್ ಕಟಿಂಗ್, ಬುರೆನ್ ಹೆಂಡ್ರಿಕ್ಸ್, ಎವಿನ್ ಲೂಯಿಸ್, ಜೇಸನ್ ಬೆಹ್ರೆಂಡ್ರೂಫ್, ಪಂಕಜ್ ಜೈಸ್ವಾಲ್, ರಾಸಿಕ್ ಧಾರ್. ಇದನ್ನೂ ಓದಿ: ಬುಮ್ರಾ ಆರ್‌ಸಿಬಿಗೆ ಹೋಗ್ತಾರಾ? ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ ಮುಂಬೈ ಇಂಡಿಯನ್ಸ್

ಚೆನ್ನೈ ಸೂಪರ್ ಕಿಂಗ್ಸ್: ಚೈತನ್ಯ ಬಿಶ್ನಾಯ್, ಡೇವಿಡ್ ವಿಲ್ಲಿ, ಧ್ರುವ ಶೌರಿ, ಮೋಹಿತ್ ಶರ್ಮಾ, ಸ್ಯಾಮ್ ಬಿಲ್ಲಿಂಗ್ಸ್, ಸ್ಕಾಟ್

ಸನ್‍ರೈಸರ್ಸ್ ಹೈದರಾಬಾದ್: ಯೂಸುಫ್ ಪಠಾಣ್, ಶಕೀಬ್ ಅಲ್ ಹಸನ್, ಮಾರ್ಟಿನ್ ಗುಪ್ಟಿಲ್, ದೀಪಕ್ ಹೂಡಾ, ರಿಕಿ ಭೂಯಿ.

ದೆಹಲಿ ಕ್ಯಾಪಿಟಲ್ಸ್: ಅಂಕುಶ್ ಬೈಸ್, ಬಿ ಅಯ್ಯಪ್ಪ, ಕ್ರಿಸ್ ಮೋರಿಸ್, ಕಾಲಿನ್ ಇಂಗ್ರಾಮ್, ಕಾಲಿನ್ ಮುನ್ರೋ, ಹನುಮಾ ವಿಹಾರಿ, ಜಲಜ್ ಸಕ್ಸೇನಾ, ಮಂಜೋತ್ ಕಲ್ರಾ, ನಾಥು ಸಿಂಗ್.

ಕಿಂಗ್ಸ್ ಇಲೆವೆನ್ ಪಂಜಾಬ್: ಅಗ್ನಿವೇಶ್ ಅಯಾಚಿ, ಆಂಡ್ರ್ಯೂ ಟೈ, ಡೇವಿಡ್ ಮಿಲ್ಲರ್, ಹೆನ್ರಿಕ್ಸ್, ಪ್ರಭಾಸಿಮ್ರಾನ್ ಸಿಂಗ್, ಸ್ಯಾಮ್ ಕುರನ್, ವರುಣ್ ಚಕ್ರವರ್ತಿ.

ರಾಜಸ್ಥಾನ್ ರಾಯಲ್ಸ್: ಆರ್ಯಮನ್ ಬಿರ್ಲಾ, ಆಷ್ಟನ್ ಟರ್ನರ್, ಇಶ್ ಸೋಧಿ, ಜಯದೇವ್ ಉನಾದ್ಕಟ್, ಲಿಯಾಮ್ ಲಿವಿಂಗ್ಸ್ಟೋನ್, ಓಶೆನ್ ಥಾಮಸ್, ಪ್ರಶಾಂತ್ ಚೋಪ್ರಾ, ರಾಹುಲ್ ತ್ರಿಪಾಠಿ, ಶುಭಮ್ ರಂಜನೆ, ಸ್ಟುವರ್ಟ್ ಬಿನ್ನಿ, ಸುದೇಶನ್ ಮಿಥುನ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಕ್ಸ್‍ದೀಪ್ ನಾಥ್, ಕಾಲಿನ್ ಡಿ ಗ್ರ್ಯಾಂಡ್‍ಹೋಮ್, ಡೇಲ್ ಸ್ಟೇನ್, ಹೆನ್ರಿಕ್ ಕ್ಲಾಸೆನ್, ಹಿಮ್ಮತ್ ಸಿಂಗ್, ಕುಲ್ವಂತ್ ಕಜ್ರೋಲಿಯಾ, ಮಾರ್ಕಸ್ ಸ್ಟೊಯಿನಿಸ್, ನಾಥನ್ ಕೌಲ್ಟರ್ ನೈಲ್, ಮಿಲಿಂದ್ ಕುಮಾರ್, ಪ್ರಯಾಸ್, ಶಿಮ್ರಾನ್ ಹೆಟ್ಮಿಯರ್, ಟಿಮ್ ಸೌಥಿ.

ಆಟಗಾರರ ಖರೀದಿಯ ಬಜೆಟ್ ಏರಿಕೆ:
ಐಪಿಎಲ್ 2019ರಲ್ಲಿ, ಪ್ರತಿ ಫ್ರ್ಯಾಂಚೈಸ್ ಆಟಗಾರರನ್ನು ಖರೀದಿಸಲು 82 ಕೋಟಿ ರೂಪಾಯಿ ನಿಗದಿಪಡಿಸಲಾಗಿತ್ತು. ಈ ಮೊತ್ತದಲ್ಲಿ ಏರಿಕೆಯಾಗಿದ್ದು, 2020ರ ಆವೃತ್ತಿಯ ಹರಾಜಿನಲ್ಲಿ ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಲು 85 ಕೋಟಿ ರೂ. ಬಜೆಟ್ ಹೊಂದಬಹುದಾಗಿದೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೆಚ್ಚಿನ ಆಟಗಾರರನ್ನು ಖರೀದಿಸಲು ಅತಿ ಹೆಚ್ಚು, 42.70 ಕೋಟಿ ರೂ. ಹೊಂದಿದೆ. ಇದರ ನಂತರದ ಬಿಗ್ ಬಜೆಟ್‍ನಲ್ಲಿ ಕೆಕೆಆರ್ 35.65 ಕೋಟಿ ರೂ. ಮತ್ತು ರಾಜಸ್ಥಾನ್ ರಾಯಲ್ಸ್ 28.90 ಕೋಟಿ ರೂ. ಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹರಾಜಿನ ಮೊದಲು ಗರಿಷ್ಠ 12 ಆಟಗಾರರನ್ನು ಬಿಡುಗಡೆ ಮಾಡಿದೆ. ಸನ್‍ರೈಸರ್ಸ್ ಹೈದರಾಬಾದ್ ಹರಾಜಿನ ಮೊದಲು ಐಪಿಎಲ್ 2020ರ ಆವೃತ್ತಿಗಾಗಿ ಅತಿ ಕಡಿಮೆ 5 ಆಟಗಾರರನ್ನು ಬಿಟ್ಟಿದೆ.

Click to comment

Leave a Reply

Your email address will not be published. Required fields are marked *