ಐಪಿಎಲ್ 2019: ಅಂಪೈರ್ ಮತ್ತೊಂದು ಎಡವಟ್ಟು!

Public TV
1 Min Read
ASHWIN

ಮೊಹಾಲಿ: 2019ರ ಐಪಿಎಲ್ ಆವೃತ್ತಿಯಲ್ಲಿ ಅಂಪೈರ್ ಗಳು ಮಾಡುವ ತಪ್ಪುಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಗುರುವಾರ ಮುಂಬೈ ಇಂಡಿಯನ್ಸ್, ಆರ್ ಸಿಬಿ ಪಂದ್ಯದ ಅಂತಿಮ ಓವರಿನ ಕೊನೆ ಎಸೆತವನ್ನು ಅಂಪೈರ್ ನೋಬಾಲ್ ಎಂದು ಗುರುತಿಸಲು ವಿಫಲರಾಗಿದ್ದ ಘಟನೆ ಮಾಸುವ ಮುನ್ನವೇ ಅಂಪೈರ್ ಮತ್ತೊಂದು ಎಡವಟ್ಟು ಮಾಡಿರುವ ಘಟನೆ ನಡೆದಿದೆ.

ಸದ್ಯ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲೆವೆನ್ ತಂಡ ನಡುವೆ ಪಂದ್ಯ ನಡೆಯುತ್ತಿದ್ದು, ಅಶ್ವಿನ್ ತಮ್ಮ ಮೊದಲ ಓವರಿನಲ್ಲಿ 7 ಬೌಲ್ ಮಾಡಿದ್ದಾರೆ. ಹೌದು, ಅಶ್ವಿನ್ ತಮ್ಮ ಮೊದಲ ಓವರಿನ 6 ಎಸೆತಗಳಲ್ಲಿ ಕೇವಲ ಮೂರು ರನ್ ಗಳನ್ನು ಮಾತ್ರ ನೀಡಿದ್ದರು. ಆದರೆ ನಾನ್ ಸ್ಟ್ರೈಕರ್ ಬದಿಯಲ್ಲಿದ್ದ ಅಂಪೈರ್ ಅಶ್ವಿನ್ 6 ಎಸೆತಗಳು ಪೂರ್ಣಗೊಂಡಿದೆ ಎಂಬುವುದನ್ನು ಮರೆತ ಪರಿಣಾಮ 7ನೇ ಎಸೆತ ಬೌಲ್ ಮಾಡಿದರು. ಈ ಎಸೆತದಲ್ಲಿ ಡಿಕಾಕ್ ಬೌಂಡರಿ ಸಿಡಿಸಿದರು. ಪರಿಣಾಮ 7 ಎಸೆತಗಳ ಓವರಿನಲ್ಲಿ 7 ರನ್ ಮುಂಬೈ ತಂಡ ಗಳಿಸಿತು. ಪಂದ್ಯ ಪ್ರಗತಿಯಲ್ಲಿ ಇರುವ ಪರಿಣಾಮ ಅಂಪೈರ್ ಎಡವಟ್ಟು ಪಂಜಾಬ್ ತಂಡದ ಮೇಲೆ ಹೇಗೆ ಪರಿಣಾಮ ಉಂಟು ಮಾಡಲಿದೆ ಎಂಬುವುದನ್ನು ಕಾದು ನೋಡಬೇಕಿದೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಾಯಕರಾಗಿರುವ ಆರ್ ಅಶ್ವಿನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಂಕಡ್ ರನೌಟ್ ಮಾಡಿ ಸುದ್ದಿಯಾಗಿದ್ದರು. 2ನೇ ಪಂದ್ಯದಲ್ಲಿ ಫೀಲ್ಡಿಂಗ್ ಎಡವಟ್ಟು ಮಾಡಿ ಮತ್ತೊಮ್ಮೆ ಸುದ್ದಿಯಾಗಿದ್ದು, ಸದ್ಯ ಓವರಿನಲ್ಲಿ 7  ಎಸೆತ ಎಸೆದಿದ್ದಾರೆ.

https://twitter.com/paapabutterfly/status/1111962267610832898

Share This Article
Leave a Comment

Leave a Reply

Your email address will not be published. Required fields are marked *