ಮುಂಬೈ: 2019ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಹಾನೆ ನಾಯಕತ್ವದಲ್ಲಿ ಸತತ 6 ಪಂದ್ಯಗಳಲ್ಲಿ ಸೋಲುಂಡು ಸಂಕಟ ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ತಂಡದ ನಾಯಕತ್ವ ಬದಲಾವಣೆ ಮಾಡಿ ಇಂದಿನ ಪಂದ್ಯದಲ್ಲಿ ಸ್ಮಿತ್‍ಗೆ ಕ್ಯಾಪ್ಟನ್ ಜವಾಬ್ದಾರಿ ವಹಿಸಲಾಗಿದೆ.
ಇತ್ತ ಟೂರ್ನಿಯಲ್ಲಿ ಮೊದಲ ಬಾರಿಗೆ ನಾಯಕತ್ವ ಪಡೆದ ಸ್ಮಿತ್ ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್ ಗೆಲುವಿನೊಂದಿಗೆ ಮುನ್ನಡೆಸಿದ್ದಾರೆ. ಇದರೊಂದಿಗೆ ರಾಜಸ್ಥಾನ ಆಡಿದ 9 ಪಂದ್ಯಗಳಲ್ಲಿ 3 ರಲ್ಲಿ ಗೆಲುವು ಪಡೆದಿದೆ. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಮುಂದುವರೆದಿದೆ. ನಾಯಕತ್ವ ಜವಾಬ್ದಾರಿ ಕಳೆದುಕೊಂಡರು ಕೂಡ ರಹಾನೆ ಉಪನಾಯಕನ ಪಟ್ಟದಲ್ಲಿ ತಂಡದಲ್ಲಿ ಮುಂದುವರಿದಿದ್ದಾರೆ.
Advertisement
The captains take their place as we get closer to the start of what should be another enthralling encounter!
C'mon boys! Let's get back to winning ways! ????????#HallaBol #RRvMI #RR pic.twitter.com/d44E6ODOUu
— Rajasthan Royals (@rajasthanroyals) April 20, 2019
Advertisement
ಪ್ಲೇ ಆಫ್ ಪ್ರವೇಶ ಪಡೆಯಲು ರಾಜಸ್ಥಾನ್ ತಂಡಕ್ಕೆ ಇಂದಿನ ಪಂದ್ಯದ ಗೆಲುವು ಅನಿವಾರ್ಯವಾಗಿತ್ತು. ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 35 ರನ್, ಸ್ಮಿತ್ 59 ರನ್ ಹಾಗೂ ಅಂತಿಮ ಹಂತದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ 17 ವರ್ಷದ ರಿಯಾನ್ ಪರಾಗ್ 29 ಎಸೆತಗಳಲ್ಲಿ 43 ರನ್ ಗಳಿಸಿ ತಂಡ ಗೆಲುವಿಗೆ ಕಾರಣರಾದರು. ಮುಂಬೈ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 161 ರನ್ ಗಳಿಸಿದತ್ತು. ಈ ಗುರಿ ಬೆನ್ನತ್ತಿದ್ದ ರಾಜಸ್ಥಾನ ತಂಡ 19.5 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಜಯ ಪಡೆಯಿತು.
Advertisement
ಚೆಂಡು ವಿರೂಪಗಳಿಸಿದ ಪ್ರಕರಣದಲ್ಲಿ ಒಂದು ವರ್ಷ ನಿಷೇಧ ಅನುಭವಿಸಿದ್ದ ಸ್ಮಿತ್ ಮೊದಲ ಬಾರಿಗೆ ಆರ್ ಆರ್ ನಾಯಕತ್ವ ವಹಿಸಿಕೊಂಡಿದ್ದರು. ಅಲ್ಲದೇ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಅಲ್ಲದೇ ಈ ಬಾರಿಯ ಆಸ್ಟೇಲಿಯಾ ವಿಶ್ವಕಪ್ ಟೂರ್ನಿಗೆ ಸ್ಮಿತ್ ಆಸೀಸ್ ಪರ ಆಯ್ಕೆ ಆಗಿದ್ದು, ತಂಡಕ್ಕೆ ಬಲ ತುಂಬಿದ್ದಾರೆ.
Advertisement
That winning feeling! ????????
⠀⠀⠀⠀⠀⠀⠀⠀⠀#HallaBol #RRvMI #RR pic.twitter.com/oe6786fwL8
— Rajasthan Royals (@rajasthanroyals) April 20, 2019