ಐಪಿಎಲ್ 2019: ಮೊದಲ ಪಂದ್ಯದಲ್ಲೇ ಆರ್‌ಸಿಬಿ-ಚೆನ್ನೈ ಹಣಾಹಣಿ

Public TV
2 Min Read
rcb 3

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2019 ಆವೃತ್ತಿಯ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮಾರ್ಚ್ 23 ರಂದು ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ.

2018 ಆವೃತಿಯ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಮೊದಲ ಪಂದ್ಯ ನಡೆಯಲಿದೆ. ಸದ್ಯ 2 ವಾರಗಳ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದ್ದು ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದ ಬಳಿಕ ಮುಂದಿನ ಐಪಿಎಲ್ ವೇಳಾಪಟ್ಟಿ ಬಿಡುಗಡೆಯಾಗಲಿದೆ.

ಸದ್ಯ ಬಿಡುಗಡೆ ಆಗಿರುವ ವೇಳಾಪಟ್ಟಿಯ ಅನ್ವಯ 17 ಪಂದ್ಯಗಳ ದಿನಾಂಕ ನಿಗದಿ ಆಗಿದೆ. ಮಾರ್ಚ್ 23 ರಿಂದ ಏಪ್ರಿಲ್ 5 ರವರೆಗೂ ಪಂದಗಳು ನಡೆಯಲಿದೆ. ಮಾರ್ಚ್ 24, 30 ಮತ್ತು 31 ರಂದು ಎರಡು ಪಂದ್ಯಗಳು ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ ತಂಡಗಳು 5 ಪಂದ್ಯಗಳನ್ನು ಈ ಅವಧಿಯಲ್ಲಿ ಆಡಲಿದ್ದು, ಉಳಿದ 6 ತಂಡಗಳು ತಲಾ 4 ಪಂದ್ಯಗಳನ್ನು ಆಡಲಿದೆ. ಉಳಿದಂತೆ ಡೆಲ್ಲಿ, ಆರ್ ಸಿಬಿ 3 ಪಂದ್ಯ ತವರಿನಲ್ಲಿ, 3 ಪಂದ್ಯ ಹೊರಗೆ ಆಡಲಿವೆ. ಇನ್ನುಳಿದ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಲಿದೆ.

ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿರುವ ಕಾರಣ ಕ್ರಿಕೆಟ್ ಮತ್ತು ಚುನಾವಣೆ ಎರಡಕ್ಕೂ ರಾಜ್ಯ ಸರ್ಕಾರಗಳು ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ. ಭದ್ರತಾ ಕಾರಣ ಮತ್ತು ಕೇಂದ್ರ ಸರ್ಕಾರ ಭಾರತದಲ್ಲೇ ಆಯೋಜನೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಈ ಹಿಂದೆ ವರದಿಯಾಗಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿ ಜನವರಿ 8 ರಂದು ನವದೆಹಲಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾಟವನ್ನು ಎಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿತ್ತು ಅಂತಿಮವಾಗಿ ಭಾರತದಲ್ಲೇ ಟೂರ್ನಿ ನಡೆಸಲು ತೀರ್ಮಾನ ತೆಗೆದುಕೊಂಡಿತ್ತು.

rcb vs srs 11 1

2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಪಂದ್ಯಗಳು ನಡೆದಿತ್ತು. 2014ರಲ್ಲಿ ಏಪ್ರಿಲ್ 16 ರಿಂದ ಏಪ್ರಿಲ್ 30ರ ವರೆಗಿನ ಪಂದ್ಯಗಳು ದುಬೈ, ಅಬುದಾಬಿ, ಶಾರ್ಜಾದಲ್ಲಿ ನಡೆದಿದ್ದರೆ ನಂತರ ಜೂನ್ 1ರವರೆಗಿನ ಪಂದ್ಯಗಳು ಭಾರತದಲ್ಲಿ ನಡೆದಿತ್ತು. ಚುನಾವಣಾ ಆಯೋಗ ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದು, ಏಪ್ರಿಲ್ ಎರಡನೇ ವಾರ ಮೊದಲ ಹಂತದ ಚುನಾವಣೆ ನಡೆಯುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 7 ರಿಂದ ಆರಂಭಗೊಂಡು ಮೇ 12 ರವರೆಗೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆದು ಮೇ 16 ರಂದು ಫಲಿತಾಂಶ ಪ್ರಕಟವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *