ನವದೆಹಲಿ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ಬಾರಿ ಐಪಿಎಲ್ ಟೂರ್ನಿ ಎಲ್ಲಿ ನಡೆಯುತ್ತದೆ ಎನ್ನುವ ಗೊಂದಲಕ್ಕೆ ತೆರೆ ಬಿದ್ದಿದೆ. 12ನೇ ಆವೃತ್ತಿಯ ಐಪಿಎಲ್ ಪಂದ್ಯ ಭಾರತದಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್ ನೇಮಿಸಿದ ಆಡಳಿತ ಸಮಿತಿ ಮಂಗಳವಾರ ನವದೆಹಲಿಯಲ್ಲಿ ಈ ಬಾರಿ ಐಪಿಎಲ್ ಪಂದ್ಯಾಟವನ್ನು ಎಲ್ಲಿ ನಡೆಸಬೇಕು ಎನ್ನುವುದರ ಬಗ್ಗೆ ಸಭೆ ನಡೆಸಿತು. ಅಂತಿಮವಾಗಿ ಭಾರತದಲ್ಲೇ ಟೂರ್ನಿ ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು.
Advertisement
Advertisement
ಮಾರ್ಚ್ 23 ರಿಂದ ಐಪಿಎಲ್ ಆರಂಭವಾಗಲಿದ್ದು ಮೇ ಕೊನೆಯವರೆಗೆ ನಡೆಯಲಿದೆ. ಆರಂಭದ ದಿನ ಮಾತ್ರ ಪ್ರಕಟವಾಗಿದ್ದು ಉಳಿದ ದಿನ ಮತ್ತು ಎಲ್ಲಿ ಪಂದ್ಯಗಳು ನಡೆಯಲಿದೆ ಎನ್ನುವ ವಿವರ ಪ್ರಕಟವಾಗಿಲ್ಲ. ಇದನ್ನೂ ಓದಿ: ಐಪಿಎಲ್ ಟೂರ್ನಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ಆರ್‌ಸಿಬಿ ಕೋಚ್ – ಯಾರಿಗೆ ಎಷ್ಟು ಸಂಭಾವನೆ? ಇಲ್ಲಿದೆ ಮಾಹಿತಿ
Advertisement
Advertisement
12 ನೇ ಆವೃತ್ತಿಗಾಗಿ ಈಗಾಗಲೇ ಆಟಗಾರರ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಾರ್ವತ್ರಿಕ ಚುನಾವಣೆಯ ದಿನಾಂಕಗಳು ಪ್ರಕಟವಾದ ಬಳಿಕ ಯಾವ ರಾಜ್ಯದಲ್ಲಿ, ಯಾವ ದಿನ ಐಪಿಎಲ್ ಕ್ರಿಕೆಟ್ ನಡೆಯಲಿದೆ ಎನ್ನುವುದು ಪ್ರಕಟವಾಗಲಿದೆ. ಇದನ್ನೂ ಓದಿ: 2019 ಐಪಿಎಲ್ ಹರಾಜು: ಹೆಚ್ಚು ಮೊತ್ತಕ್ಕೆ ಹರಾಜದ ಟಾಪ್ 5 ಯುವ ಆಟಗಾರರು
ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿರುವ ಕಾರಣ ಕ್ರಿಕೆಟ್ ಮತ್ತು ಚುನಾವಣೆ ಎರಡಕ್ಕೂ ರಾಜ್ಯ ಸರ್ಕಾರಗಳು ಭದ್ರತೆ ಕಲ್ಪಿಸುವುದು ಕಷ್ಟವಾಗುತ್ತದೆ. ಭದ್ರತಾ ಕಾರಣ ಮತ್ತು ಕೇಂದ್ರ ಸರ್ಕಾರ ಭಾರತದಲ್ಲೇ ಆಯೋಜನೆಗೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ ವಿದೇಶದಲ್ಲಿ ಐಪಿಎಲ್ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಾಗಿತ್ತು.
2009ರ ಲೋಕಸಭಾ ಚುನಾವಣೆಯ ಸಮಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಎಲ್ಲ ಪಂದ್ಯಗಳು ನಡೆದಿತ್ತು. 2014ರಲ್ಲಿ ಏಪ್ರಿಲ್ 16 ರಿಂದ ಏಪ್ರಿಲ್ 30ರ ವರೆಗಿನ ಪಂದ್ಯಗಳು ದುಬೈ, ಅಬುದಾಬಿ, ಶಾರ್ಜಾದಲ್ಲಿ ನಡೆದಿದ್ದರೆ ನಂತರ ಜೂನ್ 1ರವರೆಗಿನ ಪಂದ್ಯಗಳು ಭಾರತದಲ್ಲಿ ನಡೆದಿತ್ತು.
ಚುನಾವಣಾ ಆಯೋಗ ಈಗಾಗಲೇ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿದ್ದು, ಏಪ್ರಿಲ್ ಎರಡನೇ ವಾರ ಮೊದಲ ಹಂತದ ಚುನಾವಣೆ ನಡೆಯುವ ಸಾಧ್ಯತೆಯಿದೆ. 2014ರಲ್ಲಿ ಏಪ್ರಿಲ್ 7 ರಿಂದ ಆರಂಭಗೊಂಡು ಮೇ 12 ರವರೆಗೆ ಒಟ್ಟು 9 ಹಂತಗಳಲ್ಲಿ ಚುನಾವಣೆ ನಡೆದು ಮೇ 16 ರಂದು ಫಲಿತಾಂಶ ಪ್ರಕಟವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv