ಬೆಂಗಳೂರು: ಮುಂಬೈ ಇಂಡಿಯನ್ಸ್ ಜೊತೆಗಿನ ಪಂದ್ಯ ಮುಗಿದ ಬಳಿಕ ಆರ್‍ಸಿಬಿ ನಾಯಕ ಕೊಹ್ಲಿ ಮ್ಯಾಚ್ ರೆಫ್ರಿ ರೂಮ್‍ಗೆ ನುಗ್ಗಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಪಂದ್ಯದ ಬಳಿಕ ಬಹಿರಂಗವಾಗಿಯೇ ಅಂಪೈರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ಕೊಹ್ಲಿ, ಆ ಬಳಿಕವೂ ಕೋಪಗೊಂಡಿದ್ದರು ಎನ್ನಲಾಗಿದೆ. ಈ ವೇಳೆ ಅಂಪೈರ್ ರವಿ ಕೊಠಡಿಗೆ ಪ್ರವೇಶದ ಮಾಡಿದ್ದ ಕೊಹ್ಲಿ ಅಂಪೈರ್ ರವಿ ವಿರುದ್ಧ ಅವಾಚ್ಯ ಪದವನ್ನು ಬಳಸಿ ನಿಂದನೆ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಂಪೈರ್ ನಿಂದನೆ ಮಾಡಿದ್ದು ಅಲ್ಲದೇ ಇದರಿಂದ ನನ್ನ ಮೇಲೆ ಯಾವುದೇ ಕ್ರಮಕೈಗೊಂಡರೂ ನನಗೆ ಚಿಂತೆ ಇಲ್ಲ ಎಂದಿದ್ದಾರೆ ಎನ್ನಲಾಗಿದೆ. ಮ್ಯಾಚ್ ರೆಫ್ರಿ ಆಗಿದ್ದ ಮನು ನಯ್ಯರ್ ವಿರುದ್ಧ ಕೂಡ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಶಿಕ್ಷೆ ನೀಡುವುದು ಅನುಮಾನ ಎನ್ನಲಾಗಿದೆ. ಆದರೆ ಫೇರ್ ಪ್ಲೇ ಅವಾರ್ಡ್ ನಲ್ಲಿ ಆರ್‍ಸಿಬಿ ಅಂಕ ಕಳೆದುಕೊಳ್ಳುವ ಸಾಧ್ಯತೆ ಇದೆ.
ಪಂದ್ಯದಲ್ಲಿ ಅಂಪೈರ್ ಮಾಡಿದ್ದ ಎಡವಿಟ್ಟಿನ ಬಗ್ಗೆ ಇತ್ತಂಡಗಳ ನಾಯಕರು ಕೂಡ ಅಸಮಾಧಾನವನ್ನು ಹೊರಹಾಕಿದ್ದರು. ಅಲ್ಲದೇ ಇದು ಕ್ಲಬ್ ಕ್ರಿಕೆಟ್ ಅಲ್ಲ, ಮತ್ತಷ್ಟು ಎಚ್ಚರಿಕೆ ವಹಿಸುವುದು ಅಗತ್ಯ. ಅಂಪೈರ್ ಕಣ್ಣು ಬಿಟ್ಟು ನೋಡಬೇಕಾಗಿತ್ತು ಎಂದು ಕೊಹ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು.