ಹೈದರಾಬಾದ್: ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ಕೀರಾನ್ ಪೋಲಾರ್ಡ್ ಆನ್ ಫೀಲ್ಡ್ ನಲ್ಲಿ ತೋರಿದ ವರ್ತನೆಗೆ ಪಂದ್ಯದ ರೆಫ್ರೀ ಪಂದ್ಯದ ಶೇ.25 ರಷ್ಟು ಶುಲ್ಕವನ್ನು ದಂಡ ವಿಧಿಸಿದ್ದಾರೆ.
ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದ ಮುಂಬೈ ಇನ್ನಿಂಗ್ಸ್ ನ ಅಂತಿಮ ಓವರಿನಲ್ಲಿ ಘಟನೆ ನಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ರಾವೋ ಬೌಲ್ ಮಾಡಿದ್ದರು. ಈ ಹಂತದಲ್ಲಿ ಮೊದಲ 2 ಎಸೆತಗಳು ಡಾಟ್ ಆಗಿದ್ದು, ಆದರೆ 3ನೇ ಎಸೆತ ವೈಡ್ ಎಂದು ಭಾವಿಸಿ ಹೊಡೆಯದೇ ಬಿಟ್ಟಿದ್ದರು. ಆದರೆ ಅಂಪೈರ್ ವೈಡ್ ಘೋಷಿಸಿರಲಿಲ್ಲ. ಇದಕ್ಕೆ ಅಸಮಾಧಾನಗೊಂಡ ಪೋಲಾರ್ಡ್ ಬ್ಯಾಟನ್ನು ಮೇಲಕ್ಕೆ ಎಸೆದು ಸಿಟ್ಟು ಹೊರ ಹಾಕಿದ್ದರು.
Advertisement
— adarsh shrivastava (@adarshbihari11) May 12, 2019
Advertisement
4ನೇ ಎಸೆತದ ವೇಳೆ ಪೋಲಾರ್ಡ್ ಆಫ್ ಸೈಡ್ ವೈಡ್ ಗೆರೆ ಬಳಿ ಬ್ಯಾಟ್ ಹಿಡಿದು ನಿಂತಿದ್ದರು. ಬ್ರಾವೋ ಬೌಲಿಂಗ್ ಮಾಡುವ ವೇಳೆ ಬ್ಯಾಟಿಂಗ್ ತಯಾರಾಗಿ ನಿಂತು ಕೊನೆ ಕ್ಷಣದಲ್ಲಿ ಕ್ರೀಸಿನಿಂದ ಹೊರ ನಡೆದಿದ್ದರು. ಈ ವರ್ತನೆಯನ್ನು ನೋಡಿದ ಇಬ್ಬರು ಅಂಪೈರ್ ಪೊಲಾರ್ಡ್ ಬಳಿ ಬಂದು ಮಾತುಕತೆ ನಡೆಸಿದ್ದರು.
Advertisement
ಅಂಪೈರ್ ನಿರ್ಧಾರದ ವಿರುದ್ಧ ನಡೆದುಕೊಂಡ ಪರಿಣಾಮ ರೆಫ್ರಿ ಪಂದ್ಯದ ಶೇ.25 ರಷ್ಟು ಸಂಭಾವನೆಯನ್ನು ದಂಡವಾಗಿ ವಿಧಿಸಿದ್ದಾರೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಪೋಲಾರ್ಡ್ ಲೆವಲ್ 1 ನಿಯಮವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದಲೇ ಈ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.