ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾತ್ರಿ ನಡೆಯಲಿರುವ ಆರ್‌ಸಿಬಿ ಹಾಗೂ ಚೆನ್ನೈ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.
ನಗರದಲ್ಲಿ ದಟ್ಟ ಮೋಡ ಮುಸುಕಿದ ವಾತಾವರಣವಿದ್ದು, ಪಂದ್ಯದ ವೇಳೆಗೆ ನಗರದ ಹಲವೆಡೆ ಮಳೆ ಬರುವ ಸಾಧ್ಯತೆ ಇದೆ. ಇಂದು ರಾತ್ರಿ 8 ಗಂಟೆಗೆ ಆರಂಭವಾಗುವ ಪಂದ್ಯಕ್ಕೆ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳು ಚಿನ್ನಸ್ವಾಮಿಯತ್ತ ಮುಖ ಮಾಡಿದ್ದು, ಭರ್ಜರಿ ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ.
Advertisement
Advertisement
ಟೂರ್ನಿಯಲ್ಲಿ ಆಡಿರುವ 6 ಪಂದ್ಯಗಲ್ಲಿ 5 ರಲ್ಲಿ ಗೆಲುವು ಪಡೆದಿರುವ ಧೋನಿ ಬಳಗ ಗೆಲ್ಲುವ ವಿಶ್ವಾಸದಲ್ಲಿದೆ. ಅಷ್ಟೇ ಪಂದ್ಯಗಳನ್ನು ಅಡಿ 2 ರಲ್ಲಿ ಮಾತ್ರ ಗೆಲುವು ಪಡೆದಿರುವ ಆರ್ ಸಿಬಿ ತವರಿನ ಅಭಿಮಾನಿಗಳ ಮುಂದೇ ಗೆಲ್ಲುವ ತವಕದಲ್ಲಿದೆ.
Advertisement
ಟೂರ್ನಿಯಲ್ಲಿ ಭಾನುವಾರ ನಡೆದ ಕೊಲ್ಕತ್ತಾ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ನಡೆದ ಪಂದ್ಯದಲ್ಲಿ ಮಳೆ ಆಟಕ್ಕೆ ಅಡ್ಡಿ ಪಡಿಸಿತ್ತು. ಈ ವೇಳೆ ಡಕ್ವರ್ಥ್ ಲೂಯಿಸ್ ನಿಯಮಗಳ ಅನ್ವಯ ಪಂದ್ಯವನ್ನು 12 ಓವರ್ ಗಳಿಗೆ ನಿಗಧಿ ಪಡಿಸಲಾಯಿತು. ಈ ಪಂದ್ಯದಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಗೇಲ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಪಂದ್ಯದ ಬಳಿಕ ಕೆಕೆಆರ್ ತಂಡದ ನಾಯಕ ದಿನೇಶ್ ಕಾರ್ತಿಕ್ ಡಕ್ವರ್ಥ್ ಲೂಯಿಸ್ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.