ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್, ಮುಂಬೈ ನಡುವಿನ ಪಂದ್ಯದ ಬಳಿಕ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ತಮ್ಮ ತಂಡದ ಟಿ-ಶಾರ್ಟ್ ಗಳನ್ನು ಪರಸ್ಪರ ಬದಲಿಸಿಕೊಂಡಿದ್ದಾರೆ.
ಈ ಹಿಂದೆ ಪುಟ್ಬಾಲ್ ಪಂದ್ಯವಾಳಿಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ಇಂತಹ ದೃಶ್ಯಗಳು ಕ್ರಿಕೆಟ್‍ನಲ್ಲೂ ಕಂಡಿತು. ಇದೇ ಮೊದಲ ಬಾರಿಗೆ ಆಟಗಾರರು ಪರಸ್ಪರ ಗೌರವದ ಸಂಕೇತವಾಗಿ ತಮ್ಮ ತಂಡಗಳ ಜರ್ಸಿಗಳನ್ನು ನೆರೆದಿದ್ದ ಸಾವಿರು ಅಭಿಮಾನಿಗಳ ಮುಂದೆಯೇ ಬದಲಾಯಿಸಿಕೊಂಡರು.
Advertisement
The beauty of #VIVOIPL. Check out their jerseys. pic.twitter.com/BBGCHleJEE
— IndianPremierLeague (@IPL) May 16, 2018
Advertisement
ಈ ಪಂದ್ಯದಲ್ಲಿ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡಿದ್ದ ಕನ್ನಡಿಗ ಕೆಎಲ್ ರಾಹುಲ್ ಕೇವಲ 60 ಎಸೆತಗಳಲ್ಲಿ 94 ರನ್ ಸಿಡಿಸಿದರು. ಇದರಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸೇರಿತ್ತು. ಆದರೆ ಕೆಎಲ್ ರಾಹುಲ್ ಹೋರಟದ ನಡುವೆಯೂ ಮುಂಬೈ 3 ರನ್ ಗಳ ರೋಚಕ ಗೆಲುವು ಪಡೆಯಿತು. ಈ ಮೂಲಕ ಮುಂಬೈ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಿತು.
Advertisement
ಮುಂಬೈ ಪರ ಮಿಂಚಿನ ಬೌಲಿಂಗ್ ನಡೆಸಿದ ಬುಮ್ರಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಪಂದ್ಯದಲ್ಲಿ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಕೇವಲ 15 ರನ್ ನೀಡಿ 3 ವಿಕೆಟ್ ಪಡೆದರು. ಮುಂಬೈ ತಂಡಕ್ಕೆ ಮುಳುವಾಗಿದ್ದ ಕೆಎಲ್ ರಾಹುಲ್ ವಿಕೆಟ್ ಸಹ ಬುಮ್ರಾ ಉರುಳಿಸಿದ್ದರು. ಸದ್ಯ ಪಾಂಡ್ಯ ಹಾಗೂ ಕೆಎಲ್ ರಾಹುಲ್ ತಂಡದ ಜರ್ಸಿ ಬದಲಾಯಿಸಿದ ವಿಡಿಯೋವನ್ನು ಪಾಂಡ್ಯ ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಇಬ್ಬರ ನಡೆಗೆ ಮೆಚ್ಚುಗೆ ಸೂಚಿಸಿದ್ದಾರೆ.
Advertisement
Play hard, play fair! Respect comes first. ✊????
Super knock, by a super player and an even better friend @klrahul11 #MIvKXIP @mipaltan @lionsdenkxip pic.twitter.com/dNvF7BUqn0
— hardik pandya (@hardikpandya7) May 17, 2018
https://twitter.com/prashan23S/status/996824768656556032?