ಮೊಹಾಲಿ: ಕಿಂಗ್ಸ್ ಇಲೆವೆನ್ ಪಂಜಾಬಿನ ಆರಂಭಿಕ ಆಟಗಾರ ಕೆಎಲ್ ರಾಹುಲ್ ಐಪಿಎಲ್ ನಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಕೇವಲ 14 ಎಸೆತದಲ್ಲಿ ಅರ್ಧಶತಕ ಹೊಡೆದಿದ್ದಾರೆ. ಪಂದ್ಯದ ಮೊದಲ ಓವರ್ ನಲ್ಲಿ ಸಿಕ್ಸರ್ ಬೌಂಡರಿ ಸಿಡಿಸಿದ ರಾಹುಲ್ 51 ರನ್(16 ಎಸೆತ, 6 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು.
Advertisement
Advertisement
ರಾಹುಲ್ ಆರ್ಭಟ ಹೀಗಿತ್ತು:
ಟ್ರೆಂಟ್ ಬೋಲ್ಟ್ ಎಸೆದ ಮೊದಲ ಓವರ್ ನಲ್ಲಿ 2 ಬೌಂಡರಿ, ಒಂದು ಸಿಕ್ಸರ್, ಎರಡು ರನ್ ಸಿಡಿಸಿ ಒಟ್ಟು 16 ರನ್ ಚಚ್ಚಿದ್ದರು. ಶಮಿ ಎಸೆದ ಎರಡನೇ ಓವರ್ ನಲ್ಲಿ ಒಂದು ಸಿಕ್ಸರ್, ಒಂದು ಬೌಂಡರಿ ಹೊಡೆದಿದ್ದರು. ಅಮಿತ್ ಮಿಶ್ರಾ ಎಸೆದ ಮೂರನೇ ಓವರ್ ನಲ್ಲಿ ರಾಹುಲ್ 24 ರನ್ ಬಾರಿಸಿ ವೇಗದ ಅರ್ಧಶತಕ ದಾಖಲಿಸಿದರು. ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದ್ದರೆ ಎರಡು ಮತ್ತು ಮೂರನೇ ಎಸೆತವನ್ನು ಸಿಕ್ಸರ್ ಗೆ ಎತ್ತಿದ್ದರು. ನಾಲ್ಕು ಮತ್ತು ಐದನೇ ಎಸೆತವನ್ನು ಬೌಂಡರಿಗೆ ಅಟ್ಟಿದರು. ಮೊದಲ ವಿಕೆಟಿಗೆ ರಾಹುಲ್ ಮತ್ತು ಅಗರ್‍ವಾಲ್ 3.2 ಓವರ್ ಗಳಲ್ಲಿ 58 ರನ್ ಕೂಡಿಹಾಕಿದ್ದರು. 4.5ನೇ ಓವರ್ ನಲ್ಲಿ ರಾಹುಲ್ ಔಟಾದಾಗ ಪಂಜಾಬ್ ತಂಡ 2 ವಿಕೆಟ್ ನಷ್ಟಕ್ಕೆ 64 ರನ್ ಗಳಿಸಿತ್ತು.
Advertisement
Advertisement
ಯಾವ ಎಸೆತದಲ್ಲಿ ಎಷ್ಟು ರನ್?
14 ಎಸೆತ – 0, 2, 0, 6, 4, 4, 6, 4, 1, 4, 6, 6, 4, 4 ಒಟ್ಟಾರೆ 51 ರನ್
ಐಪಿಎಲ್‍ನಲ್ಲಿ ವೇಗದ ಅರ್ಧಶತಕ ಸಿಡಿಸಿದ ಆಟಗಾರರು:
2018 – ಕೆಎಲ್ ರಾಹುಲ್, 14 ಎಸೆತ
2014 – ಯೂಸೂಫ್ ಪಠಾಣ್, 15 ಎಸೆತ
2017 – ಸುನಿಲ್ ನರೈನ್, 15 ಎಸೆತ
2014 – ಸುರೇಶ್ ರೈನಾ, 16 ಎಸೆತ
ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ರಾಹುಲ್ ಅವರಿಗೆ 2 ಕೋಟಿ ರೂ. ಮೂಲ ಬೆಲೆ ನಿಗದಿಯಾಗಿತ್ತು. ಆದರೆ ಅವರ ಆಟದ ಪರಿಚವಿದ್ದ ಕಾರಣ ಮೊತ್ತ ಏರಿಕೆಯಾಗಿ ಕಿಂಗ್ಸ್ ಇಲೆವೆನ್ ತಂಡ ಬರೋಬ್ಬರಿ 11 ಕೋಟಿ ರೂ. ನೀಡಿ ಖರೀದಿ ಮಾಡಿತ್ತು.
Fastest 50 in the history of VIVO #IPL
Take a bow @klrahul11 #KXIPvDD pic.twitter.com/G7zFGXw8vY
— IndianPremierLeague (@IPL) April 8, 2018
.@lionsdenkxip batsman @klrahul11 now sits atop on the fastest fifties chart in the VIVO #IPL pic.twitter.com/Bh6yF9R4JF
— IndianPremierLeague (@IPL) April 8, 2018