ಜೈಪುರ: ಐಪಿಎಲ್ ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿರುವ ಕನ್ನಡಿಗ ಕೆಎಲ್ ರಾಹುಲ್ ಆಟಕ್ಕೆ ಪಾಕ್ ಮೂಲದ ನಿರೂಪಕಿ ಕ್ಲೀನ್ ಬೌಲ್ಡ್ ಆಗಿದ್ದು, ಟ್ವಿಟ್ಟರ್ ನಲ್ಲಿ ವಿಶೇಷ ಸಂದೇಶ ಕಳುಹಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಎಲ್ ರಾಹುಲ್ ಅಜೇಯ 95 ರನ್ ಗಳಿಸಿದ್ದ ಬಳಿಕ ಆರೆಂಜ್ ಕ್ಯಾಪ್ ಪಡೆದಿದ್ದು, ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವೇಳೆಯೇ ರಾಹುಲ್ ಬ್ಯಾಟಿಂಗ್ ಗೆ ಪ್ರಶಂಸೆ ವ್ಯಕ್ತಪಡಿಸಿರುವ ಪಾಕ್ ನಿರೂಪಕಿ ಝೈನಭ್ ಅಬ್ಬಾಸ್, ಕೆಎಲ್ ರಾಹುಲ್ ಪ್ರಭಾವಶಾಲಿ, ಅತ್ಯುತ್ತಮ ಟೈಮಿಂಗ್ ಹೊಂದಿದ್ದು ಬ್ಯಾಟಿಂಗ್ ಶೈಲಿ ನನಗಿಷ್ಟ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
Advertisement
KL Rahul impressive,superb timing,great to watch.. #RRvKXIP
— zainab abbas (@ZAbbasOfficial) May 6, 2018
Advertisement
ಟೂರ್ನಿಯಲ್ಲಿ ಇದುವರೆಗೂ ಒಟ್ಟಾರೆ 10 ಪಂದ್ಯಗಳನ್ನು ಆಡಿರುವ ಕೆಎಲ್ ರಾಹುಲ್ 58.88 ರ ಸರಾಸರಿಯಲ್ಲಿ 471 ರನ್ ಗಳಿಸಿದ್ದಾರೆ. ಅತೀ ಹೆಚ್ಚು ರನ್ ಗಳಿಸಿದ ಪಟ್ಟಿಯ ನಂತರದ ಸ್ಥಾನದಲ್ಲಿ 423 ರನ್ ಗಳೊಂದಿಗೆ ಅಂಬಟಿ ರಾಯುಡು 2ನೇ ಸ್ಥಾನಕ್ಕೆ ಪಡೆದಿದ್ದಾರೆ.
Advertisement
ಮೇ 6 ರಂದು ನಡೆದ ರಾಜಸ್ಥಾನದ ವಿರುದ್ಧ ಪಂದ್ಯದಲ್ಲೂ ರಾಹುಲ್ ಕೇವಲ 54 ಎಸೆತಗಳಲ್ಲಿ 84 ರನ್ ಸಿಡಿಸಿ ಅಜೇಯರಾಗಿ ಉಳಿದಿದ್ದರು. ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ರಾಹುಲ್ ಪಂಜಾಬ್ ತಂಡದ ಕೀ ಬ್ಯಾಟ್ಸ್ ಮನ್ ಆಗಿದ್ದು, ಪ್ರತಿ ಪಂದ್ಯದಲ್ಲೂ ತಂಡದ ಗೆಲುವಿಗೆ ಕಾಣಿಕೆ ನೀಡುತ್ತಿದ್ದಾರೆ. ಟೂರ್ನಿಯ ಆರಂಭದ ಡೆಲ್ಲಿ ವಿರುದ್ಧ ಏಪ್ರಿಲ್ 8 ರಂದು ನಡೆದ ಪಂದ್ಯದಲ್ಲಿ ಕೇವಲ 14 ಎಸೆಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದರು.
Advertisement
https://www.instagram.com/p/BiAZygxlFyz/?taken-by=zabbasofficial
https://www.instagram.com/p/BhHSya2lHnV/?taken-by=zabbasofficial