Wednesday, 21st November 2018

Recent News

ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

ಮೊಹಾಲಿ: ಕ್ರಿಕೆಟ್ ಆಡಲು ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ಆಟದಲ್ಲಿ ನಾನು ಹೆಚ್ಚು ಸೊಂಟದ ಮೇಲೆ ಒತ್ತಡವನ್ನು ನೀಡುವುದಿಲ್ಲ. ನನ್ನ ಕೈಗಳಿಗೆ ಮಾತ್ರ ಹೆಚ್ಚಿನ ಶ್ರಮ ನೀಡುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕವೂ ಚೆನ್ನೈ 4 ರನ್ ಅಂತರದಲ್ಲಿ ಸೋಲುಂಡಿತ್ತು.

ಪಂಜಾಬ್ ತಂಡದ ನೀಡಿದ್ದ 198 ರನ್ ಗುರಿಯನ್ನು ಬೆನ್ನತ್ತಿದ್ದ ಸಿಎಸ್‍ಕೆ ಗೆಲುವಿಗಾಗಿ ರೋಚಕ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಧೋನಿ 44 ಎಸೆತಗಳಲ್ಲಿ 79 ರನ್ (6 ಬೌಂಡರಿ, 5 ಸಿಕ್ಸರ್) ಸಿಡಿಸಿದ್ದರು. ಆದರೆ ಪಂದ್ಯದ ನಡುವೆ ಧೋನಿ ಬೆನ್ನು ನೋವಿನಿಂದ ಬಳಲಿದ್ದರೂ ಬಳಿಕ ಮೈದಾನದಿಂದಲೇ ಚಿಕಿತ್ಸೆ ಪಡೆದು ಆಟ ಮುಂದುವರೆಸಿದ್ದರು. ಪಂದ್ಯದ ಕೊನೆಯ ಓವರ್ ವರೆಗೂ ಗೆಲುವಿಗಾಗಿ ಧೋನಿ ನಡೆಸಿದ ಹೋರಾಟಕ್ಕೆ ಮೋಹಿತ್ ಶರ್ಮಾ ಉತ್ತಮ ಪ್ರತಿರೋಧ ನಡೆಸಿದ್ದರು. ಧೋನಿ ಪಂದ್ಯದಲ್ಲಿ ಸಮಸ್ಯೆಗೆ ಒಳಗಾದರೂ ಗೆಲುವಿಗಾಗಿ ನಡೆಸಿದ ಹೋರಾಟಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಸಿಎಸ್‍ಕೆ ನ ಎರಡು ಪಂದ್ಯಗಳ ಗೆಲುವಿಗೆ ಸ್ಯಾಮ್ ಬಿಲ್ಲಿಂಗ್ ಮತ್ತು ಬ್ರಾವೋ ಕಾರಣರಾಗಿದ್ದರು. ಆದರೆ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಬ್ರಾವೋ ಅವರ ಸ್ಥಾನದಲ್ಲಿ ಜಡೇಜಾ ಅವರನ್ನು ಬ್ಯಾಟಿಂಗ್ ಕಳುಹಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಆಲ್ ರೌಂಡರ್ ಜಡೇಜಾ ಭಾರೀ ಹೊಡೆತ ಸಿಡಿಸುವ ನಂಬಿಕೆ ಇತ್ತು. ಅದ್ದರಿಂದಲೇ ಅವರ ಬ್ಯಾಟಿಂಗ್ ಕ್ರಮದಲ್ಲಿ ಉನ್ನತಿ ನೀಡಲಾಗಿತ್ತು ಎಂದರು. ಬಳಿಕ ಮುಂದಿನ ಪಂದ್ಯಕ್ಕೆ ಮೂರು ದಿನಗಳ ಸಮಯ ಇರುವುದರಿಂದ ತಮ್ಮ ಸಮಸ್ಯೆಯಿಂದ ಬೇಗ ಹೊರ ಬರುತ್ತೇನೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *