ಚೆನ್ನೈ: ಎರಡು ವರ್ಷಗಳ ನಿಷೇಧದ ಬಳಿಕ ಐಪಿಎಲ್ ಟೂರ್ನಿಗೆ ಹಿಂದಿರುಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೂರ್ನಿಯ ಆರಂಭದ ಎರಡು ಪಂದ್ಯಗಳಲ್ಲಿ ಕೊನೆಯ ಓವರ್ ನಲ್ಲಿ ಜಯ ಗಳಿಸಿದೆ. ಸದ್ಯ ಈ ಎರಡು ಪಂದ್ಯಗಳಲ್ಲಿ ನಡೆದಿರುವ ಸಾಮಾನ್ಯ ಅಂಶ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
Advertisement
ಹೌದು ಸಿಎಸ್‍ಕೆ ತಂಡ ಮುಂಬೈ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಕೊನೆಯ 24 ಎಸೆತಗಳಲ್ಲಿ 51 ರನ್ ಗಳಿಸಿಬೇಕಿತ್ತು. ಕಾಕತಾಳೀಯ ಎಂಬಂತೆ ಚೆನ್ನೈ ನಲ್ಲಿ ನಡೆದ ಕೋಲ್ಕತ್ತಾ ವಿರುದ್ಧದ ಎರಡನೇ ಪಂದ್ಯದಲ್ಲೂ 24 ಎಸೆತಗಳಲ್ಲಿ ಗೆ 51 ರನ್ ಹೊಡೆಯಬೇಕಿತ್ತು.
Advertisement
ಮೊದಲ ಪಂದ್ಯದಲ್ಲಿ ಕೇರಿಬಿಯನ್ ಆಟಗಾರ ಬ್ರಾವೋ ಸ್ಫೋಟಕ ಬ್ಯಾಟಿಂಗ್ ನಡೆಸಿ 68 ರನ್(30 ಎಸೆತ, 3 ಬೌಂಡರಿ, 7 ಸಿಕ್ಸರ್) ಚಚ್ಚಿ ಪಂದ್ಯದ ಗೆಲುವಿಗೆ ಕಾರಣರಾಗಿದ್ದರು. ಎರಡನೇ ಪಂದ್ಯದಲ್ಲಿ ಸ್ಯಾಮ್ ಬಿಲ್ಲಿಂಗ್ಸ್ 56 ರನ್(23 ಎಸೆತ, 2 ಬೌಂಡರಿ, 5 ಸಿಕ್ಸರ್)ಸಿಡಿಸಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ. ಸದ್ಯ ಎರಡು ಪಂದ್ಯಗಳಲ್ಲಿ ನಡೆದಿರುವ ಕಾಕತಾಳೀಯ ಅಂಶದ ಕುರಿತು ಅಭಿಮಾನಿಗಳು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Advertisement
CSK's first 2 matches:
vs MI – 51 needed off 24 balls – Won with one ball remaining
vs KKR – 51 needed off 24 balls – Won with one ball remaining
Bravo in the first game and Billings in the second!
— Bharath Seervi (@SeerviBharath) April 10, 2018
Advertisement
ತವರಿನ ಪ್ರೇಕ್ಷಕರ ಮುಂದೆ ಮಂಗಳವಾರ ನಡೆದ ಪಂದ್ಯದಲ್ಲಿ ಮಿಂಚಿದ ಚೆನ್ನೈ ಐದು ವಿಕೆಟ್‍ಗಳಿಂದ ಗೆದ್ದಿತು. ಎಂಎ ಚಿದಂಬರಂ ಕ್ರೀಡಾಂಗಣದ ನಡೆದ ರೋಚಕ ಹಣಾಹಣಿಯಲ್ಲಿ 203 ರನ್‍ಗಳ ಗುರಿ ಬೆನ್ನತ್ತಿದ ಚೆನ್ನೈ ತಂಡ ಒಂದು ಎಸೆತ ಬಾಕಿ ಇರುವಾಗ ಗೆಲುವಿನ ರನ್ ಗಳಿಸಿತು. ಅಂತಿಮ ಓವರ್ ನಲ್ಲಿ 17 ರನ್ ಸಿಡಿಸುವ ಒತ್ತಡವನ್ನು ಚೆನ್ನೈ ಆಟಗಾರರು ಎದುರಿಸಿದ್ದರು. ಈ ವೇಳೆ ಕ್ರಿಸ್ ನಲ್ಲಿದ್ದ ಬ್ರಾವೋ, ಕೆಕೆಆರ್ ಬೌಲರ್ ವಿನಯ್ ಕುಮಾರ್ ಎಸೆದ ನೋಬಾಲ್ ಅನ್ನು ಸಿಕ್ಸರ್ ಸಿಡಿಸುವ ಮೂಲಕ ಮತ್ತೊಮ್ಮೆ ಸ್ಫೋಟಕ ಆಟವಾಡಿದರು. ಈ ವೇಳೆ ಬ್ಯಾಟ್ ಬೀಸಲು ತಡವರಿಸುತ್ತಿದ್ದ ಜಡೇಜಾ 5ನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿ 11 ರನ್(7 ಎಸೆತ, 1 ಸಿಕ್ಸರ್) ತಂಡಕ್ಕೆ ಜಯವನ್ನು ತಂದಿಟ್ಟರು. ಇದನ್ನೂ ಓದಿ: ಗೆಲುವಿನ ಆಟ ಮಾತ್ರ ನನ್ನದಾಗಿತ್ತು: ಕೊನೆಯ 11 ಎಸೆತದಲ್ಲಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಬ್ರಾವೋ ಮಾತು