ಬೆಂಗಳೂರು: ಆರ್ ಸಿಬಿ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡದ ಬೌಲರ್ ಬಾಸೀಲ್ ತಂಪಿ ಪಂದ್ಯವೊಂದರಲ್ಲಿ 70 ರನ್ ನೀಡುವ ಮೂಲಕ ಇಶಾಂತ್ ಶರ್ಮಾ ಹೆಸರಿನಲ್ಲಿದ್ದ ಕೆಟ್ಟ ದಾಖಲೆಯನ್ನು ಮುರಿದ್ದಾರೆ.
ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದ ತಂಪಿ 17.50 ಎಕಾನಮಿಯಲ್ಲಿ 70 ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಐಪಿಎಲ್ ನಲ್ಲಿ ಹೆಚ್ಚು ರನ್ ನೀಡಿದ ಬೌಲರ್ ಎಂಬ ದಾಖಲೆ ಬರೆದರು. ಈ ಹಿಂದೆ 2013 ಹೈದರಾಬಾದ್ ತಂಡದ ಇಶಾಂತ್ ಶರ್ಮಾ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 4 ಓವರ್ ಎಸೆದು 66 ರನ್ ನೀಡಿದ್ದರು.
Most runs conceded in an innings in IPL:
70/0 – Basil Thampi for SRH v RCB, Bangalore, 2018*
66/0 – Ishant Sharma for SRH v CSK, Hyderabad, 2013#RCBvSRH
— Umang Pabari (@UPStatsman) May 17, 2018
ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಯಶಸ್ವಿ ಡೆತ್ ಬೌಲರ್ ಆಗಿ ಗುರುತಿಸಿಕೊಂಡಿದ್ದ ತಂಪಿ, ಆರ್ ಸಿಬಿ ವಿರುದ್ಧ ನಿರಸ ಪ್ರದರ್ಶನ ನೀಡಿದ್ದಾರೆ. ಉಳಿದಂತೆ ಆರ್ ಸಿಬಿ ವಿರುದ್ಧ ಅತೀ ಹೆಚ್ಚು ರನ್ ನೀಡಿದವರ ಪಟ್ಟಿಯಲ್ಲಿ ಸಂದೀಪ್ ಶರ್ಮಾ(1/40), ಸಿದ್ದಾರ್ಥ್ ಕೌಲ್ (2/44) ಸ್ಥಾನ ಪಡೆದಿದ್ದಾರೆ.
ಹೈದರಾಬಾದ್ ಬೌಲರ್ ಗಳನ್ನು ನಿರಂತರವಾಗಿ ದಂಡಿಸಿದ ಆರ್ ಸಿಬಿ ಬ್ಯಾಟಿಂಗ್ ಪಡೆಯ ಎಬಿ ಡಿವಿಲಿಯಸ್ಸ್ (69), ಮೊಯಿನ್ ಅಲಿ (65), ಕಾಲಿನ್ ಡೇ (40) ರನ್ ಸಿಡಿಸಿ ಮಿಂಚಿದರು. ಆರ್ ಸಿಬಿ ಬೃಹತ್ ಮೊತ್ತ ಬೆನ್ನತಿದ ಹೈದರಾಬಾದ್ ಕೇನ್ ವಿಲಿಯಮ್ಸ್ (81 ರನ್, 42 ಎಸೆತ, 7 ಬೌಂಡರಿ, 5 ಸಿಕ್ಸರ್) ಹಾಗೂ ಮನೀಷ್ ಪಾಂಡ್ಯ (ಅಜೇಯ 62 ರನ್) ಬ್ಯಾಟಿಂಗ್ ನೆರವಿನಿಂದ ಗೆಲುವಿನ ಸನಿಹದಲ್ಲಿ ಎಡವಿತು. ಆರ್ ಚಿಬಿ ವಿರುದ್ಧ ಸೋಲಿನ ಬಳಿಕವೂ ಹೈದರಾಬಾದ್ 18 ಅಂಕಗಳೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.
Basil Thampi becomes the first bowler to concede 70 runs in a T20 match played in India. The previous highest was 69 by S Arvind which he conceded against South Australia at Bangalore in 2011.#RCBvSRH
— Umang Pabari (@UPStatsman) May 17, 2018