ಐಪಿಎಲ್ ಸಮರಕ್ಕೆ ಕ್ಷಣಗಣನೆ ಶುರು-`ಈ ಸಲ ಕಪ್ ನಮ್ದೆ’ ಅಂತಿದಾರೆ ಆರ್‌ಸಿಬಿ ಫ್ಯಾನ್ಸ್

Public TV
1 Min Read
m chinnaswamy cricket stadium bangalore india0

ಬೆಂಗಳೂರು: ಜಾಗತಿಕ ಕ್ರಿಕೆಟಿನಲ್ಲಿ ತನ್ನದೇ ಚಾಪು ಮೂಡಿಸಿರುವ ಬಿಸಿಸಿಐ ನ ಕಲರ್ ಫುಲ್ ಹೊಡಿಬಡಿ ಚುಟುಕು ಕ್ರಿಕೆಟ್ ಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಇದರ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಕ್ರಿಕೆಟ್ ಜ್ವರ ಹೆಚ್ಚಾಗಿದ್ದು, ಆರ್‌ಸಿಬಿ ತಂಡ ಜಯಗಳಿಸಲೆಂದು ಅಭಿಮಾನಿಗಳು ಗೋ ಗ್ರೀನ್ ಮ್ಯಾರಥಾನ್ ಮೂಲಕ ತಂಡಕ್ಕೆ ಶುಭ ಹಾರೈಸಿದ್ದಾರೆ.

ನಮ್ಮ ಕರ್ನಾಟಕ ಮೆಮ್ಸ್ ಮತ್ತು ನಮ್ಮ ಆರ್ ಸಿಬಿ ಫೇಸ್ ಬುಕ್ ಪೇಜ್ ನ ಸದಸ್ಯರು ಇಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಆರ್‌ಸಿಬಿ ಗೆ ಜೈಕಾರ ಕೂಗಿ, ಈ ಬಾರಿ ಕಪ್ ನಮ್ಮದೇ ಎಂದು ಹಾರೈಸಿದರು. ಇದೇ ವೇಳೆ ಅಭಿಮಾನಿಗಳು ಆರ್ ಸಿಬಿ ತಂಡದ ಮೇಲೆ ಹಾಡನ್ನ ಕೂಡ ಸಿದ್ಧಗೊಳಿಸಿದ್ದು, ಆರ್ ಸಿಬಿಯ ಮೊದಲ ಪಂದ್ಯದ ವೇಳೆ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

ಇನ್ನು ಆರ್‌ಸಿಬಿ ತವರು ಬೆಂಗಳೂರಿನಲ್ಲಿ ಒಟ್ಟು 7 ಪಂದ್ಯಗಳನ್ನು ಆಡಲಿದೆ. ಏಪ್ರಿಲ್ 13 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆರ್ ಸಿಬಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಏಪ್ರಿಲ್ 15 ರಂದು ರಾಜಸ್ತಾನ ರಾಯಲ್ಸ್ ವಿರುದ್ಧ ಆಡಲಿದ್ದು, ಬಳಿಕ ಸತತ 4 ಪಂದ್ಯಗಳು ಕ್ರಮವಾಗಿ ಏಪ್ರಿಲ್ 21, ಏಪ್ರಿಲ್ 25, ಏಪ್ರಿಲ್ 29 ಮತ್ತು ಮೇ 1 ರ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿದೆ.

ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಹಲವು ಆಟಗಾರರು ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಏ.8ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡ, ಆತಿಥೇಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.

Share This Article
Leave a Comment

Leave a Reply

Your email address will not be published. Required fields are marked *