ನವದೆಹಲಿ: ಕ್ಲಬ್ ಮ್ಯಾಚ್‍ನಲ್ಲಿ ಅತ್ಯುತ್ತಮ ಬೌಲಿಂಗ್ ಸಾಧನೆ ಮಾಡಿದ್ದಕ್ಕೆ 500 ರೂ. ಸಿಕ್ಕಿತ್ತು. ಇದು ಕ್ರಿಕೆಟ್ ಆಡಿದ್ದಕ್ಕೆ ಆತನಿಗೆ ದೊರೆತ ಮೊದಲ ಹಣ. ಆದರೆ ಈಗ ಆ ಕ್ರಿಕೆಟಿಗ 2.6 ಕೋಟಿ ರೂ. ಸೇಲ್ ಆಗಿದ್ದಾನೆ.
ಇದು ಹೈದರಾಬಾದ್ ಮೂಲದ ಮೊಹಮ್ಮದ್ ಸಿರಾಜ್ ಸಾಧನೆಯ ಕಥೆ. ಬೆಂಗಳೂರಿನಲ್ಲಿ ಐಪಿಎಲ್ 10ನೇ ಆವೃತ್ತಿಗಾಗಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಸಿರಾಜ್ ಅವರ ಮೂಲ ಬೆಲೆ 20 ಲಕ್ಷ ರೂ. ಇತ್ತು. ಆದರೆ ಬಿಡ್ ವೇಳೆ ಹೈದರಾಬಾದ್ ಸನ್ ರೈಸರ್ಸ್ 2.6 ಕೋಟಿ ರೂ. ನೀಡಿ ಖರೀದಿಸಿದೆ.
Advertisement
ಹೈದರಾಬಾದ್ ತಂಡವನ್ನು ಖರೀದಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮೊಹಮ್ಮದ್ ಸಿರಾಜ್ ತನ್ನ ಆರಂಭಿಕ ಕ್ರಿಕೆಟ್ ಜೀವನ ಹೇಗಿತ್ತು ಎನ್ನುವುದನ್ನು ಮೆಲುಕು ಹಾಕಿದ್ದಾರೆ.
Advertisement
“ಕ್ಲಬ್ ಮ್ಯಾಚ್‍ನಲ್ಲಿ ನನ್ನ ಮಾವ ಕ್ಯಾಪ್ಟನ್ ಆಗಿದ್ದರು. 25 ಓವರ್ ಪಂದ್ಯದಲ್ಲಿ ನಾನು 20 ರನ್ ನೀಡಿ 9 ವಿಕೆಟ್ ಪಡೆದಿದೆ. ಆ ವೇಳೆ ಮಾವ ನನ್ನ ಸಾಧನೆಗೆ 500 ರೂ. ನೀಡಿದಾಗ ಬಹಳ ಸಂತೋಷವಾಗಿತ್ತು. ಆದರೆ ಇವತ್ತು ನನಗೆ 2.6 ಕೋಟಿ ರೂ. ಬಿಡ್ ಮಾಡಿದ್ದನ್ನು ಕೇಳಿ ಮಾತೇ ಹೊರಡುತ್ತಿಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.
Advertisement
“ನನ್ನ ತಂದೆ ಆಟೋ ರಿಕ್ಷಾ ಓಡಿಸುತ್ತಿದ್ದಾರೆ. ಆದರೆ ನನ್ನ ಕ್ರಿಕೆಟ್ ಜೀವನಕ್ಕೆ ಯಾವುದೇ ಹಣಕಾಸು ಸಮಸ್ಯೆ ಬಾರದಂತೆ ನೋಡಿಕೊಂಡಿದ್ದರು. ಬೌಲಿಂಗ್ ಶೂಗಳು ಬೆಲೆ ದುಬಾರಿಯಾಗಿದ್ದರೂ ಅತ್ಯುತ್ತಮ ಶೂವನ್ನು ನನಗೆ ನೀಡಿದ್ದರು. ಈಗ ನಾನು ಕುಟುಂಬಕ್ಕೆ ಒಂದು ಮನೆಯನ್ನು ಖರೀದಿಸಿ ಕೊಡಬೇಕು” ಎಂದು ಭಾವುಕರಾಗಿ ಹೇಳಿದರು.
Advertisement
ಇದನ್ನೂ ಓದಿ: ಯಾರು, ಯಾವ ತಂಡಕ್ಕೆ, ಎಷ್ಟು ಹಣಕ್ಕೆ ಸೇಲ್: ಪೂರ್ಣ ಪಟ್ಟಿ ಓದಿ
“ನನ್ನ ಪೋಷಕರು ಬಹಳ ಕಷ್ಟ ಪಟ್ಟಿದ್ದಾರೆ. ನನ್ನ ಕಿರಿಯ ಸಹೋದರ ಪ್ರಸಿದ್ಧ ಐಟಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾನೆ. ನನಗೆ ಓದುವುದರಲ್ಲಿ ಆಸಕ್ತಿ ಇಲ್ಲದ್ದನ್ನು ನೋಡಿದಾಗ ತಾಯಿ ಸಹೋದರನ ಉದಾಹರಣೆಯನ್ನು ನೀಡುತ್ತಿದ್ದರು. ಆದರೆ ಈಗ ಅವರು ನನ್ನ ಸಾಧನೆಯನ್ನು ನೋಡಿ ಹೆಮ್ಮೆ ಪಡುತ್ತಿದ್ದಾರೆ” ಎಂದು ತಿಳಿಸಿದರು.
ಕ್ರಿಕೆಟ್ ಆಟವನ್ನು ಕಲಿತದ್ದು ಹೇಗೆ ಎಂದು ಕೇಳಿದ್ದಕ್ಕೆ, ಆರಂಭದಲ್ಲಿ ಟೆನ್ನಿಸ್ ಬಾಲ್‍ನಲ್ಲಿ ಆಡುವ ಮೂಲಕ ಸ್ವಯಂ ಕಲಿತುಕೊಂಡೆ. ನಂತರ ಹೈದರಬಾದ್ ಅಂಡರ್ 22 ತಂಡದಲ್ಲಿ ಆಡಿದೆ. ಇದಾದ ಬಳಿಕ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿ, ರಣಜಿ ಪಂದ್ಯಗಳಲ್ಲಿ ಆಡಿದ ಬಳಿಕ ಭಾರತ ಎ ತಂಡದಲ್ಲಿ ಆಡಿದ್ದು ಐಪಿಎಲ್‍ನಲ್ಲಿ ಚೆನ್ನಾಗಿ ಆಡಿ ಟೀಂ ಇಂಡಿಯಾಗೆ ಸೇರಬೇಕು ಎನ್ನುವ ಕನಸನ್ನು ಇಟ್ಟುಕೊಂಡಿದ್ದಾರೆ ಸಿರಾಜ್.
ಹೈದರಾಬಾದ್ ಸನ್ ರೈಸರ್ಸ್ ತಂಡದ ಬಗ್ಗೆ ಪ್ರತಿಕ್ರಿಯಿಸಿ, ವಿವಿಎಸ್ ಲಕ್ಷ್ಮಣ್ ಮತ್ತು ನಾಯಕ ಡೇವಿಡ್ ವಾರ್ನರ್ ಬಳಿ ನಾನು ಮತ್ತಷ್ಟು ಕಲಿಯುತ್ತೇನೆ ಎಂದು ಹೇಳಿ ತಮ್ಮ ಮಾತನ್ನು ಮೊಹಮ್ಮದ್ ಸಿರಾಜ್ ಮುಗಿಸಿದರು.
ಇದನ್ನೂ ಓದಿ: ಆರ್‍ಸಿಬಿ 12 ಕೋಟಿ ನೀಡಿ ಟೈಮಲ್ ಮಿಲ್ಸ್ ಅವರನ್ನೇ ಖರೀದಿಸಿದ್ದು ಯಾಕೆ?
A local addition to the #OrangeArmy brigade, Mohammed Siraj joins our squad to show us what he's got with the ball. #IPLAuction. pic.twitter.com/XgfVzpjAoj
— SunRisers Hyderabad (@SunRisers) February 20, 2017