ವಾಷಿಂಗ್ಟನ್: 15 ತಿಂಗಳು ನದಿ ನೀರಿನಲ್ಲಿದ್ದರೂ ಐಫೋನ್ ಹಾಳಾಗದೇ ಮೊದಲಿನಂತೆ ಕೆಲಸ ಮಾಡುತ್ತಿರುವ ವಿಡಿಯೋ ಈಗ ಸದ್ದು ಮಾಡುತ್ತಿದೆ.
ಈ ಘಟನೆ ಅಮೆರಿಕದ ದಕ್ಷಿಣ ಕ್ಯಾರೋಲಿನಾದಲ್ಲಿ ನಡೆದಿದ್ದು, ಎಡಿಸ್ಟೋ ನದಿಯಲ್ಲಿ ಐಫೋನ್ ಪತ್ತೆಯಾಗಿದೆ ಎಂದು ಮಿಚೇಲ್ ಬೆನ್ನೆಟ್ ಎಂಬುವರು ಐಫೋನ್ ಸಿಕ್ಕ ನಂತರ ಕಾರ್ಯನಿರ್ವಹಿಸುತ್ತಿರುವ ಕುರಿತು ವಿಡಿಯೋವನ್ನು ಅಪ್‍ಲೋಡ್ ಮಾಡಿದ್ದಾರೆ. ಈ ಐಫೋನ್‍ಗೆ ವಾಟರ್‍ಪ್ರೂಫ್ ಕವರ್ ಹಾಕಲಾಗಿತ್ತು. ಹೀಗಾಗಿ ಸುಮಾರು 15 ತಿಂಗಳುಗಳ ಕಾಲ ನೀರಿನಲ್ಲಿದ್ದರೂ ಕಾರ್ಯನಿರ್ವಹಿಸುತ್ತಿದೆ.
Advertisement
Advertisement
ಅಲ್ಲಿನ ಸ್ಥಳೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬೆನೆಟ್ ಈ ಕುರಿತು ಮಾಹಿತಿ ನೀಡಿದ್ದು, ಪ್ರಾರಂಭದಲ್ಲಿ ಈ ಐಫೋನ್‍ನ ಮಾಲೀಕರನ್ನು ಕಂಡುಹಿಡಿಯುವುದು ಕಷ್ಟಕರವಾದ ಕೆಲಸವಾಗಿತ್ತು. ಅಲ್ಲದೆ ಮೊಬೈಲ್‍ಗೆ ಪಾಸ್ವರ್ಡ್ ಹಾಕಿರುವುದರಿಂದ ಮಾಲೀಕನ ಕುರಿತು ಕೆಲ ವಿವರ ಸಿಗುವ ವರೆಗೆ ಮೊಬೈಲ್ ಬಳಕೆ ಮಾಡಲು ಅಸಾಧ್ಯವಾಗಿತ್ತು. ಹೀಗಾಗಿ ನಾನು ಐಫೋನ್‍ನಲ್ಲಿರುವ ಸಿಮ್ ಕಾರ್ಡ್‍ನ್ನು ತೆಗೆದು ಬೇರೆ ಫೋನ್‍ಗೆ ಹಾಕಿದ್ದೆ. ಈ ಮೂಲಕ ಮಾಲೀಕರ ಸಂಪರ್ಕದ ಕುರಿತು ಮಾಹಿತಿ ಪಡೆಯುವಲ್ಲಿ ಯಶಸ್ವಿಯಾದೆ ಎಂದು ಬೆನ್ನೆಟ್ ವಿವರಿಸಿದ್ದಾರೆ.
Advertisement
2018ರ ಜೂನ್ 19 ರಂದು ಕುಟುಂಬದೊಂದಿಗೆ ಪ್ರವಾಸಕ್ಕೆ ಆಗಮಿಸಿದಾಗ ಮಾಲೀಕ ಎರಿಕಾ ಬೆನ್ನೆಟ್ ಅವರು ಐಫೋನ್ ಕಳೆದುಕೊಂಡಿದ್ದರು. ವಿಶೇಷ ಏನೆಂದರೆ 15 ತಿಂಗಳ ನಂತರವೂ ಐಫೋನ್ ಕಾರ್ಯನಿರ್ವಹಿಸುವ ಸ್ಥಿತಿಯಲ್ಲಿತ್ತು ಎಂದು ಬೆನ್ನೆಟ್ ಸಂತಸ ವ್ಯಕ್ತಪಡಿಸಿದರು.