ಭಾರತದಲ್ಲಿ ಐಫೋನ್‌ ಉತ್ಪಾದನೆ ವಿಸ್ತರಿಸಲು 13,337 ಕೋಟಿ ಹೂಡಿಕೆಗೆ ಫಾಕ್ಸ್‌ಕಾನ್‌ ಯೋಜನೆ

Public TV
1 Min Read

ನವದೆಹಲಿ: ಐಫೋನ್‌ ತಯಾರಕ ಕಂಪನಿ ಹಾನ್‌ ಹೈ ಪ್ರೆಸಿಷನ್‌ ಇಂಡಸ್ಟ್ರಿ ಕಂ. (Foxconn) ನಿರ್ಮಾಣ ಯೋಜನೆಗಳಿಗಾಗಿ 13,337 ಕೋಟಿ ರೂ. (1.6 ಬಿಲಿಯನ್‌ ಡಾಲರ್‌) ಹೂಡಿಕೆಯೊಂದಿಗೆ ಭಾರತದಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಯೋಜಿಸಿದೆ.

ಸೋಮವಾರ ಕಂಪನಿಯು ತೈವಾನ್‌ನಲ್ಲಿ ವಿನಿಮಯ ಫೈಲಿಂಗ್‌ ಅಡಿಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಕಾರ್ಯಾಚರಣೆಯ ಅಗತ್ಯಗಳನ್ನು ಪೂರೈಸಲು ಈ ಹೂಡಿಕೆ ಮಾಡಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಕಂಪನಿ ವಕ್ತಾರರು ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಬರಲ್ವಾ ಟೆಸ್ಲಾ ಉತ್ಪಾದನಾ ಘಟಕ..?

apple iphone 15

ಚೀನಾ ಮತ್ತು ಅಮೆರಿಕದ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಹಾನ್‌ ಹೈ ಮತ್ತು ಇತರೆ ತೈವಾನೀಸ್‌ ಎಲೆಕ್ಟ್ರಾನಿಕ್ಸ್‌ ಉತ್ಪಾದನಾ ಕಂಪನಿಗಳು ಚೀನಾದ ಹೊರಗೆ ಹೂಡಿಕೆ ಹೆಚ್ಚಿಸಲು ಬಯಸುತ್ತಿವೆ. ಭಾರತದಲ್ಲಿ ಹೂಡಿಕೆ ಮಾಡುವ ಫಾಕ್ಸ್‌ಕಾನ್‌ ನಿರ್ಧಾರವು ಇದಕ್ಕೆ ಅನುಗುಣವಾಗಿದೆ.

ಫಾಕ್ಸ್‌ಕಾನ್‌ನ ಅರ್ಧದಷ್ಟು ಆದಾಯವು Apple Inc ನೊಂದಿಗಿನ ವ್ಯವಹಾರದಿಂದ ಬರುತ್ತದೆ. ಕಂಪನಿಯು, iPhone 15 ಸೇರಿದಂತೆ ಹಲವಾರು ವರ್ಷಗಳಿಂದ ಭಾರತದಲ್ಲಿ ಐಫೋನ್‌ಗಳು ಮತ್ತು ಇತರ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದನ್ನೂ ಓದಿ: ಕಡಿಮೆ ಬೆಲೆಗೆ ಕ್ಲೌಡ್‌ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಲು ಮುಂದಾದ ಜಿಯೋ

ಕರ್ನಾಟಕದಲ್ಲಿ 5,000 ಕೋಟಿ ರೂ. ಮೊತ್ತದ ಬಂಡವಾಳ ಹೂಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಉದ್ದೇಶಿತ ಹೂಡಿಕೆ ಒಪ್ಪಂದ ಪತ್ರಕ್ಕೆ ಇದೇ ವರ್ಷದ ಆಗಸ್ಟ್‌ ತಿಂಗಳಲ್ಲಿ ಫಾಕ್ಸ್‌ಕಾನ್ (Foxconn) ಸಹಿ ಮಾಡಿತ್ತು. ಈ ಯೋಜನೆಗಳಿಂದ 13,000 ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

Share This Article