ಬೀಜಿಂಗ್: ಕಳೆದೆರಡು ದಿನದ ಹಿಂದೆ ಚೀನಾದ (China) ಅತಿದೊಡ್ಡ ಐಫೋನ್ ಕಾರ್ಖಾನೆಯಲ್ಲಿ (iPhone factory) ಕಾರ್ಮಿಕರು ಭಾರೀ ಪ್ರತಿಭಟನೆ ನಡೆಸಿದ್ದು, ಪೊಲೀಸರೊಂದಿಗೆ ತೀವ್ರವಾದ ವಾಗ್ವಾದ ನಡೆದು, ಪ್ರತಿಭಟನೆ ಹಿಂಸಾಚಾರಕ್ಕೂ ತಿರುಗಿತ್ತು. ಇದೀಗ ಘರ್ಷಣೆಯಾದ ಬೆನ್ನಲ್ಲೇ ಐಫೋನ್ ಕಾರ್ಖಾನೆಯ ನೆಲೆಯಾಗಿರುವ ಝೆಂಗ್‌ಝೌ (Zhengzhou) ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಕೋವಿಡ್ ಲಾಕ್‌ಡೌನ್ (Lockdown) ವಿಸ್ತರಿಸಲಾಗಿದೆ.
ವರದಿ ಪ್ರಕಾರ ನಗರದ ಪ್ರಾಧಿಕಾರ ಬುಧವಾರ ಸಂಜೆ ಡೌನ್‌ಟೌನ್ ಪ್ರದೇಶದ ನಿವಾಸಿಗಳನ್ನುದ್ದೇಶಿಸಿ ಮಾತನಾಡಿದ್ದು, ಶುಕ್ರವಾರದಿಂದ ಮುಂದಿನ ಮಂಗಳವಾರದ ವರೆಗೆ ತಮ್ಮ ಮನೆಯಲ್ಲಿಯೇ ಇರುವಂತೆ ಕೇಳಿಕೊಂಡಿದೆ. ಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆ ಈ ಆದೇಶವನ್ನು ನೀಡಲಾಗಿರುವುದಾಗಿ ತಿಳಿಸಲಾಗಿದೆ.
Advertisement
Advertisement
ಝೆಂಗ್‌ಝೌ ನಗರದಲ್ಲಿ ಫಾಕ್ಸ್‌ಕಾನ್‌ನ ಪ್ರಮುಖ ಐಫೋನ್ ಫ್ಯಾಕ್ಟರಿಯಲ್ಲಿ ಭಾರೀ ಪ್ರತಿಭಟನೆ ನಡೆದಿರುವ ಬೆನ್ನಲ್ಲೇ ಈ ಆದೇಶವನ್ನು ಹೊರಡಿಸಲಾಗಿದೆ. ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಪುರುಷ ಹಾಗೂ ಮಹಿಳಾ ಕಾರ್ಮಿಕರು ಪೊಲೀಸರೊಂದಿಗೆ ಘರ್ಷಣೆ ನಡೆಸುತ್ತಿರುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲೂ ಹರಿದಾಡಿವೆ. ಇದನ್ನೂ ಓದಿ: ಸೆನ್ಸೆಕ್ಸ್ ಹೈಜಂಪ್ – ಸಾರ್ವಕಾಲಿಕ ಎತ್ತರಕ್ಕೆ ಜಿಗಿದು ದಾಖಲೆ ಸೃಷ್ಟಿ
Advertisement
ಭಾರೀ ವೇತನದ ಆಫರ್ ನೀಡಿ, ಕೆಲಸಕ್ಕೆ ಸೇರಿದ ಬಳಿಕ ನಿಯಮಗಳನ್ನು ಬದಲಾಯಿಸಿ ವಂಚಿಸಲಾಗಿದೆ ಎಂದು ಆರೋಪಿಸಿ ಸಾವಿರಾರು ಕಾರ್ಮಿಕರು ನಗರದ ಫಾಕ್ಸ್ಕಾನ್ ಕಾರ್ಖಾನೆಯಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದಾಗಿ ವರದಿಯಾಗಿದೆ.
Advertisement
ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲೂ ಝೆಂಗ್‌ಝೌ ನಗರದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಕೋವಿಡ್ ಪ್ರಕರಣಗಳು ಹೆಚ್ಚಿದ್ದ ಝೆಂಗ್‌ಝೌ ದೇಶದ ಅತಿ ದೊಡ್ಡ ಐಫೋನ್ ಕಾರ್ಖಾನೆಯಿಂದ ವಲಸೆ ಕಾರ್ಮಿಕರ ಗುಂಪುಗುಂಪಾಗಿ ತಮ್ಮ ಊರುಗಳಿಗೆ ಪಲಾಯನ ಮಾಡಿದ್ದರು. ಇದನ್ನೂ ಓದಿ: ಮುಂಬೈನ ವಸತಿ ಪ್ರದೇಶಕ್ಕೆ ನುಗ್ಗಿ, ಕಟ್ಟಡದೊಳಗೆ ಓಡಾಡಿದ ಚಿರತೆ – ಮೂವರ ಮೇಲೆ ದಾಳಿ