ನವದೆಹಲಿ: ಆಪಲ್ (Apple) ಕಂಪನಿ 4 ಮಾದರಿಯ ಐಫೋನ್ (iPhone) ಬಿಡುಗಡೆ ಮಾಡಿದೆ. ಭಾರತದಲ್ಲಿ ಸೆ.12 ರಿಂದ ಬುಕ್ಕಿಂಗ್ ಮಾಡಬಹುದಾಗಿದ್ದು ಸೆ.19 ರಿಂದ ಐಫೋನ್ ವಿತರಣೆ ಮಾಡಲಾಗುವುದು ಎಂದು ಆಪಲ್ ಕಂಪನಿ ಹೇಳಿದೆ.
ಯಾವ ದೇಶದಲ್ಲಿ ಎಷ್ಟು ದರ?
ಐಫೋನ್ 17
256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್
ಭಾರತ: 82,900
ಅಮೆರಿಕ: 799 ಡಾಲರ್
ಜಪಾನ್ : 129,800 ಜಪಾನ್ ಯೆನ್
ಯುಎಇ: 3,099 ದಿರ್ಹಮ್
ಜರ್ಮನಿ: 949 ಯುರೋ
ಯುಕೆ: 949 ಪೌಂಡ್
ಐಫೋನ್ ಏರ್
256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್
ಭಾರತ: 1,19,990 ರೂ.
ಅಮೆರಿಕ: 999 ಡಾಲರ್
ಜಪಾನ್ : 1,59,800 ಜಪಾನ್ ಯೆನ್
ಯುಎಇ: 3,499 ದಿರ್ಹಮ್
ಜರ್ಮನಿ: 1,199 ಯುರೋ
ಯುಕೆ: 999 ಪೌಂಡ್
ಐಫೋನ್ 17 ಪ್ರೋ
6.3 ಇಂಚಿನ ಸ್ಕ್ರೀನ್, 256 ಜಿಬಿ ಆಂತರಿಕ ಮೆಮೊರಿ/ 8 ಜಿಬಿ ರ‍್ಯಾಮ್
ಭಾರತ: 1,34,990 ರೂ.
ಅಮೆರಿಕ: 1,099 ಡಾಲರ್
ಜಪಾನ್ : 1,79,800 ಜಪಾನ್ ಯೆನ್
ಯುಎಇ: 4,299 ದಿರ್ಹಮ್
ಜರ್ಮನಿ: 1299 ಯುರೋ
ಯುಕೆ: 1,099 ಪೌಂಡ್
ಐಫೋನ್ 17 ಪ್ರೋ ಮ್ಯಾಕ್ಸ್
6.9 ಇಂಚಿನ ಸ್ಕ್ರೀನ್, 256 ಜಿಬಿ ಆಂತರಿಕ ಮೆಮೊರಿ/ 12 ಜಿಬಿ ರ‍್ಯಾಮ್
ಭಾರತ: 1,49,990 ರೂ.
ಅಮೆರಿಕ: 1,999 ಡಾಲರ್
ಜಪಾನ್ : 1,94,800 ಜಪಾನ್ ಯೆನ್
ಯುಎಇ: 4,699 ದಿರ್ಹಮ್
ಜರ್ಮನಿ: 1,449 ಯುರೋ
ಯುಕೆ: 1,199 ಪೌಂಡ್ ಇದನ್ನೂ ಓದಿ: ಇದನ್ನೂ ಓದಿ: ಆಪಲ್ ಐಫೋನ್ 17, 17 ಪ್ರೋ, 17 ಮ್ಯಾಕ್ಸ್, ಐಫೋನ್ ಏರ್ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು? ಭಾರತದಲ್ಲಿ ದರ ಎಷ್ಟು?
ಯಾವ ದೇಶದಲ್ಲಿ ಕಡಿಮೆ ದರ?
ಈ ಮೇಲಿನ ದರ ನೋಡಿದರೆ ಐಫೋನ್ 17ಕ್ಕೆ ಭಾರತದಲ್ಲಿ 82,900 ರೂ. ದರ ಇದೆ. ಜಪಾನಿನ ದರಕ್ಕೆ ಹೋಲಿಕೆ ಮಾಡಿದರೆ 78,800 ರೂ, ಯುಎಇ ಅಂದಾಜು 75,000 ರೂ., ಜರ್ಮನಿಯಲ್ಲಿ ಅಂದಾಜು 98,000 ರೂ., ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಅಂದಾಜು 1,14,000 ರೂ. ಆಗಲಿದೆ.
ಐಫೋನ್ ಬೆಲೆ ಅಮೆರಿಕದಲ್ಲಿ ಕಡಿಮೆಯಿದೆ ಅಲ್ಲಿ ಅಂದಾಜು 70,432 ರೂ.ಗೆ ಐಫೋನ್ ಸಿಗುತ್ತಿದೆ. ಹೊಸ ಐಫೋನ್ ಪೈಕಿ ಇಸಿಮ್ ಮಾದರಿಯ ಫೋನ್‌ಗಳು ಅಮೆರಿಕದಲ್ಲಿ ಮಾತ್ರ ಲಭ್ಯವಿದೆ.
ಬೆಲೆ ಏರಿಕೆಗೆ ಕಾರಣ ಏನು?
ಭಾರತದಲ್ಲಿ ಐಫೋನ್ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಗ್ರಾಹಕರ ಮೇಲೆಯೇ ಹಾಕುತ್ತದೆ. ಫೋನ್‌ಗಳ ಮೇಲೆ ಶೇ.18 ಜಿಎಸ್‌ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ.
ಅಮೆರಿಕ, ಜಪಾನ್, ಚೀನಾಗೆ ಹೋಲಿಸಿದರೆ ಭಾರತದಲ್ಲಿ ಐಫೋನ್ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್‌ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.
ಆಪಲ್ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್ ದರಗಳು ಇಳಿಕೆಯಾದರೂ ಅಷ್ಟೊಂದು ದರ ಇಳಿಕೆಯಾಗುವುದಿಲ್ಲ.
ಡಾಲರ್ ಬೆಲೆ ಏರಿಕೆಯಾದಂತೆ ಇಲ್ಲೂ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣದಿಂದ ಭಾರತದಲ್ಲೂ ಐಫೋನ್ ದರ ಹೆಚ್ಚಿರುತ್ತದೆ.