ನವದೆಹಲಿ: ಬಹು ನಿರೀಕ್ಷಿತ ಐಫೋನ್ 16ಇ ಫೋನನ್ನು ಆಪಲ್ (Apple) ಕಂಪನಿ ಬಿಡುಗಡೆ ಮಾಡಿದೆ. ಆದರೆ ಅಮೆರಿಕ, ಚೀನಾ, ಜಪಾನ್, ವಿಯೆಟ್ನಾಂಗೆ ಹೋಲಿಸಿದರೆ ಭಾರತದಲ್ಲಿ iPhone 16e ದರ ಜಾಸ್ತಿ ಇದೆ.
ಕಪ್ಪು ಮತ್ತು ಬಿಳಿ ಬಣ್ಣದ ಫೋನ್ ಮೂರು ಆಂತರಿಕ ಮೆಮೋರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರತದಲ್ಲಿ (India) 128 ಜಿಬಿಗೆ 59,900 ರೂ., 256 ಜಿಬಿಗೆ 69,900 ರೂ., 512 ಜಿಬಿಗೆ 89,000 ರೂ. ದರವನ್ನು ನಿಗದಿ ಮಾಡಲಾಗಿದೆ. ಈಗ ಬಿಡುಗಡೆಯಾಗಿದ್ದರೂ ಫೆ. 28 ರಿಂದ ಈ ಫೋನಿನ ಮಾರಾಟ ಆರಂಭವಾಗಲಿದೆ.
10 ವರ್ಷದ ಮೊದಲು ವಿಶ್ವದಲ್ಲಿ ಐಫೋನ್‌ಗಳು ಬಿಡುಗಡೆಯಾದ ಕೆಲ ತಿಂಗಳ ನಂತರ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿತ್ತು. ಆದರೆ ಈಗ ವಿಶ್ವದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಮಯದಲ್ಲಿ ಭಾರತದಲ್ಲೂ ಬಿಡುಗಡೆಯಾಗುತ್ತಿದೆ. ಐಫೋನ್ 16ಇ ಫೋನನ್ನು ಭಾರತದಲ್ಲೇ ಜೋಡಣೆ ಮಾಡುತ್ತಿರುವ ಕಾರಣ ಯುಕೆ, ಯುಎಇಗೆ ಹೋಲಿಸಿದರೆ ಬೆಲೆ ಕಡಿಮೆಯಿದೆ.
ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಫೋನ್‌ಗಳನ್ನು ಭಾರತದಲ್ಲೇ ಜೋಡಣೆ ಮಾಡಲಾಗುತ್ತಿದ್ದು ಈ ಪಟ್ಟಿಗೆ ಹೊಸದಾಗಿ ಐಫೋನ್ 16ಇ ಸೇರ್ಪಡೆಯಾಗಿದೆ.
16 ಜಿಬಿಗೆ ಎಲ್ಲಿಎಷ್ಟು ದರ?
ಭಾರತ – 59,900 ರೂ.
ಅಮೆರಿಕ – 599 ಡಾಲರ್(ಅಂದಾಜು 52,000 ರೂ.)
ಚೀನಾ – 4,499 ಯುವಾನ್(ಅಂದಾಜು 53,570 ರೂ.)
ಜಪಾನ್ – 99,800 ಯೆನ್(ಅಂದಾಜು 57,600 ರೂ.)
ವಿಯೆಟ್ನಾಂ – 16,999,000 ಡಾಂಗ್ (ಅಂದಾಜು 57,800 ರೂ.)
ಯುಎಇ – 2,599 ಯುಎಡಿ( ಅಂದಾಜು 61,500 ರೂ.)
ಯುಕೆ – 599 ಪೌಂಡ್(65,500 ರೂ.)
ಬೆಲೆ ಏರಿಕೆಗೆ ಕಾರಣ ಏನು?
ಭಾರತದಲ್ಲಿ ಐಫೋನ್ ಉತ್ಪಾದನೆಯಾದರೂ ಹಲವು ಬಿಡಿ ಭಾಗಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅಬಕಾರಿ ಸುಂಕ ಪಾವತಿ ಮಾಡಿದ ಬಳಿಕ ವಸ್ತುಗಳು ಭಾರತಕ್ಕೆ ಆಮದು ಆಗುತ್ತಿದೆ. ಆಮದು ಮಾಡಿಕೊಳ್ಳುವ ವಸ್ತುಗಳಿಗೆ ತೆರಿಗೆ ಹಾಕುವುದರಿಂದ ಅದನ್ನು ಗ್ರಾಹಕರ ಮೇಲೆಯೇ ಹಾಕುತ್ತದೆ. ಫೋನ್‌ಗಳ ಮೇಲೆ ಶೇ.18 ಜಿಎಸ್‌ಟಿ ಇದೆ. ಅಬಕಾರಿ ಸುಂಕವನ್ನು ಕಂಪನಿಗಳು ಹಾಕುವ ಪರಿಣಾಮ ಫೋನ್ ಬೆಲೆ ಶೇ.35 ರಷ್ಟು ಹೆಚ್ಚಿರುತ್ತದೆ.
ಅಮೆರಿಕ, ಜಪಾನ್, ಚೀನಾಗೆ ಹೋಲಿಸಿದರೆ ಭಾರತದಲ್ಲಿ ಐಫೋನ್ ಬಳಕೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಬೇಡಿಕೆ ಜಾಸ್ತಿ ಇದ್ದಾಗ ಫೋನ್‌ಗಳ ಬೆಲೆ ಕಡಿಮೆ ಇರುವುದು ಸಾಮಾನ್ಯ. ಭಾರತದಲ್ಲಿ ಬೇಡಿಕೆ ಕಡಿಮೆ ಇರುವುದರಿಂದ ಬೆಲೆ ಜಾಸ್ತಿ ಇದೆ.
ಆಪಲ್ ಭಾರತದಲ್ಲಿ ವಿಶೇಷ ಮಾರುಕಟ್ಟೆ ತಂತ್ರವನ್ನು ಬಳಕೆ ಮಾಡುತ್ತಿದೆ. ಹೊಸ ಐಫೋನ್ ಬಿಡುಗಡೆ ಮಾಡುವ ಸಮಯದಲ್ಲಿ ಹಳೆಯ ಐಫೋನ್ ಬೆಲೆಗಳು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡುತ್ತದೆ. ಆದರೆ ಬೇರೆ ಕಂಪನಿಗಳ ಫೋನ್ ದರಗಳು ಇಳಿಕೆಯಾದರೂ ಅಷ್ಟೊಂದು ದರ ಇಳಿಕೆಯಾಗುವುದಿಲ್ಲ.
ಡಾಲರ್ ಬೆಲೆ ಏರಿಕೆಯಾದಂತೆ ಇಲ್ಲೂ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಈ ಕಾರಣದಿಂದ ಭಾರತದಲ್ಲೂ ಐಫೋನ್ ದರ ಹೆಚ್ಚಿರುತ್ತದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಆರಂಭವಾಗಲಿದೆ ಮೊಬೈಲ್ ತಯಾರಿಕಾ ಘಟಕ, ಸಿಗಲಿದೆ 50 ಸಾವಿರ ಜನರಿಗೆ ಉದ್ಯೋಗ: ಅಶ್ವಿನಿ ವೈಷ್ಣವ್
ಐಫೋನ್ 16ಇ ಗುಣವೈಶಿಷ್ಟ್ಯಗಳು:
ಬಾಡಿ:
146.7 x 71.5 x 7.8 mm, 167 ಗ್ರಾಂ, ನ್ಯಾನೋ ಸಿಮ್+ ಇ ಸಿಮ್
ಡಿಸ್ಪ್ಲೇ:
Super Retina XDR OLED, HDR10, 800 nits (HBM), 6.1 ಇಂಚಿನ ಸ್ಕ್ರೀನ್(1170 x 2532 ಪಿಕ್ಸೆಲ್, 457 ಪಿಪಿಐ)
ಪ್ಲಾಟ್‌ಫಾರಂ:
ಐಓಎಸ್ 18.4, ಆಪಲ್ ಎ18 ಚಿಪ್‌ಸೆಟ್, ಹೆಕ್ಸಾ ಕೋರ್(2×4.04 GHz + 4×2.20 GHz) , ಆಪಲ್ ಜಿಪಿಯು.
ಮೆಮೋರಿ:
ಹೆಚ್ಚುವರಿ ಕಾರ್ಡ್ ಬಳಸಿ ಮೆಮೋರಿ ವಿಸ್ತರಿಸಲು ಸಾಧ್ಯವಿಲ್ಲ, 128 ಜಿಬಿ 8ಜಿಬಿ ರಾಮ್, 256 ಜಿಬಿ 8 ಜಿಬಿ ರಾಮ್, 512 ಜಿಬಿ 8ಜಿಬಿ ರಾಮ್.
ಕ್ಯಾಮೆರಾ
ಹಿಂದುಗಡೆ- 48 MP, f/1.6, Dual-LED dual-tone flash,
ಮುಂದುಗಡೆ – 12 MP,f/1.9
ವಿಡಿಯೋ – 4K, 1080p, HDR
ಬ್ಯಾಟರಿ – ಲಿಯಾನ್ 7.5W wireless (Qi), 30 ನಿಮಿಷದಲ್ಲಿ 50% ಚಾರ್ಜ್ ಮಾಡಬಹುದು.