ನವದೆಹಲಿ: ಆಪಲ್ (Apple) ತನ್ನ ಲೇಟೆಸ್ಟ್ ಐಫೋನ್ 15 ಸೀರೀಸ್ (iPhone 15 Series) ಮಾರಾಟವನ್ನು ಭಾರತದಲ್ಲಿ ಶುಕ್ರವಾರ ಅಧಿಕೃತವಾಗಿ ಪ್ರಾರಂಭಿಸಿದೆ. ಉದ್ಘಾಟನಾ ದಿನದಂದೇ ಐಫೋನ್ ಖರೀದಿಗಾಗಿ ಗ್ರಾಹಕರು ಐಫೋನ್ ಸ್ಟೋರ್‌ಗಳಲ್ಲಿ ತಮ್ಮ ತುದಿಗಾಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬೆಳ್ಳಂಬೆಳಗ್ಗೆ ಗ್ರಾಹಕರು ದೆಹಲಿ (Delhi) ಹಾಗೂ ಮುಂಬೈನ (Mumbai) ಸ್ಟೋರ್‌ಗಳಲ್ಲಿ ಕ್ಯೂ ನಿಂತಿದ್ದು, ಅದರ ಫೀಚರ್‌ಗಳನ್ನು ಅನುಭವಿಸಲು ಮೊದಲಿಗರಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಮುಂಬೈನ ಬಿಕೆಸಿ ಮತ್ತು ನವದೆಹಲಿಯ ಸಾಕೇತ್‌ನಲ್ಲಿರುವ ಆಪಲ್ ಸ್ಟೋರ್‌ಗಳಲ್ಲಿ ಮುಂಜಾನೆಯಿಂದಲೇ ಉದ್ದನೆಯ ಸರದಿ ಸಾಲುಗಳು ಕಂಡುಬಂದಿದೆ. ಮಳಿಗೆಗಳು ತೆರೆಯುವ ಮೊದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನವದೆಹಲಿಯ ಸಾಕೇತ್‌ನ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿನ ಆಪಲ್ ಸ್ಟೋರ್‌ನಲ್ಲಿ ಮೊದಲ ಗ್ರಾಹಕ ರಾಹುಲ್, ನಾನು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಿದ್ದು, ನಾನು ಮುಂಜಾನೆ 4 ಗಂಟೆಯಿಂದ ಸರದಿಯಲ್ಲಿದ್ದೆ ಮತ್ತು ನಂತರ ಫೋನ್ ಖರೀದಿಸಿದೆ ಎಂದು ಹೇಳಿದ್ದಾರೆ.
Advertisement
Advertisement
ಆಪಲ್ ಇಂಡಿಯಾ ಪ್ರಸ್ತುತ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಮೇಲೆ 6,000 ರೂ. ಹಾಗೂ ಐಫೋನ್ 15 ಮತ್ತು 15 ಪ್ಲಸ್ ನಲ್ಲಿ 5,000 ರೂ. ರಿಯಾಯಿತಿಯನ್ನು ಪಡೆಯಲು ತಮ್ಮ ವೆಬ್‌ಸೈಟ್‌ನಲ್ಲಿ ಅರ್ಹ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಲು ಸೂಚಿಸಿದೆ.
Advertisement
ಈ ಮೂಲಕ ಐಫೋನ್ 15ನ ಬೆಲೆ 79,900 ರೂ.ಯಿಂದ 74,900 ರೂ.ಗೆ ಕಡಿಮೆಯಾಗಿದೆ. 89,900 ರೂ.ಯ ಐಫೋನ್ 15 ಪ್ಲಸ್ 84,900 ರೂ.ಗೆ ಲಭ್ಯವಿದೆ. ಐಫೋನ್ 15 ಪ್ರೊ 1,34,900 ರೂ.ಯಿಂದ 1,28,900 ರೂ.ಗೆ ಕಡಿಮೆಯಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 1,59,900 ರೂ. ಯಿಂದ 1,53.900 ರೂ. ಗೆ ರಿಯಾಯಿತಿಯಾಗಿದೆ. ಇದನ್ನೂ ಓದಿ: ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್ ವ್ಯವಸ್ಥೆ?
Advertisement
ಗ್ರಾಹಕರು ಇಎಂಐ ಮಾಸಿಕ ಕಂತು ಯೋಜನೆಗಳಿಂದ ಐಫೋನ್ ಖರೀದಿ ಆಯ್ಕೆ ಮಾಡಬಹುದು. ಆಯ್ದ ಬ್ಯಾಂಕ್‌ಗಳಿಂದ 3 ಅಥವಾ 6 ತಿಂಗಳುಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಯೋಜನೆಗಳ ಆಯ್ಕೆಯನ್ನು ಸಹ ಪಡೆಯಬಹುದು. ಗ್ರಾಹಕರು ತಮ್ಮ ಆಪಲ್ ಸಾಧನವನ್ನು ತಮ್ಮ ಪ್ರಸ್ತುತ ಸ್ಮಾರ್ಟ್ಫೋನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತಷ್ಟು ರಿಯಾಯಿತಿಯನ್ನು ಪಡೆಯುವ ಟ್ರೇಡ್ ಇನ್ ಸ್ಕೀಮ್ ಲಭ್ಯವಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ
Web Stories