ಜೈಪುರ: 2022-23ರ ರಾಜ್ಯ ಬಜೆಟ್ ಮಂಡಿಸಿದ ಬಳಿಕ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜಸ್ಥಾನದ ಎಲ್ಲ 200 ಶಾಸಕರಿಗೆ ಉಡುಗೊರೆಯಾಗಿ ನೀಡಿದ ಐಫೋನ್-13 ಮೊಬೈಲ್‍ನನ್ನು ಹಿಂದಿರುಗಿಸುವುದಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ತಿಳಿಸಿದ್ದಾರೆ.
ಅತ್ಯಾಧುನಿಕ ಫೋನ್‍ಗಳು ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುವುದರಿಂದ ಉಡುಗೊರೆಯನ್ನು ಹಿಂದಿರುಗಿಸಲು ವಿರೋಧ ಪಕ್ಷದ ಶಾಸಕರು ನಿರ್ಧರಿಸಿದ್ದಾರೆ. ಒಂದು ಐಫೋನ್-13 ಬೆಲೆ 70,000 ರೂ. ಆಗಿದೆ. ಇದನ್ನೂ ಓದಿ: ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್
ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ತಮ್ಮ ಪಕ್ಷದ ಶಾಸಕರು ತಮ್ಮ ಐಫೋನ್‍ಗಳನ್ನು ಹಿಂದಿರುಗಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಈ ಕುರಿತಂತೆ ಸತೀಶ್ ಪೂನಿಯಾ ಅವರು, ಗುಲಾಬ್ ಕಟಾರಿಯಾ ಮತ್ತು ರಾಜೇಂದ್ರ ಮತ್ತು ಇತರ ಶಾಸಕರೊಂದಿಗೆ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಬಿಜೆಪಿ ಶಾಸಕರು ಕಾಂಗ್ರೆಸ್ ಸರ್ಕಾರ ನೀಡಿದ ಫೋನ್ ಅನ್ನು ಹಿಂದಿರುಗಿಸಲು ನಿರ್ಧರಿದ್ದಾರೆ ಎಂದು ಪೂನಿಯಾ ಟ್ವೀಟ್ ಮಾಡಿದ್ದಾರೆ.
2021ರಲ್ಲಿ ಕಾಂಗ್ರೆಸ್ ಸರ್ಕಾರವು ಬಜೆಟ್ ಮಂಡಿಸಿದ ನಂತರ ಎಲ್ಲಾ 200 ಶಾಸಕರಿಗೆ ಐ-ಪ್ಯಾಡ್‍ಗಳನ್ನು ಉಡುಗೊರೆಯಾಗಿ ನೀಡಿತ್ತು. ರಾಜಸ್ಥಾನ ಬಜೆಟ್ 2022-23ರ ಫೆಬ್ರವರಿ 23 ರಂದು ಮಂಡಿಸಲಾದ ಬಜೆಟ್ ವೇಳೆ ಎಲ್ಲ ಶಾಸಕರಿಗೆ ನಿರ್ಗಮನದ ಸಮಯದಲ್ಲಿ ಫೋನ್- 13 ನೊಂದಿಗೆ ಬ್ರೀಫ್‌ಕೇಸ್ ನೀಡಲಾಯಿತು. ಇದನ್ನೂ ಓದಿ: ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ದೊಡ್ಡತನ- ಮಾಯಾವತಿ ಮೆಚ್ಚುಗೆ