ಬೆಂಗಳೂರು: ಇಲ್ಲಿಯವರೆಗೆ ಸಿಂಗಲ್ ಸಿಮ್ ಐಫೋನ್ ಗಳನ್ನು ಬಿಡುಗಡೆ ಮಾಡುತ್ತಿದ್ದ ಆಪಲ್ ಕಂಪೆನಿ ಈಗ ಡ್ಯುಯಲ್ ಸಿಮ್ ಫೋನ್ ಬಿಡುಗಡೆ ಮಾಡುತ್ತಿರುವ ಬಗ್ಗೆ ಸುಳಿವು ನೀಡಿದೆ.
ಹೌದು. ಆಪಲ್ ತನ್ನ ಮೊಬೈಲ್ ಆಪರೇಟಿಂಗ್ ಸಿಸ್ಟಂ ಐಓಎಸ್ 12ರ ಐದನೇ ಡೆವಲಪರ್ ಬೀಟಾದ ಆವೃತ್ತಿಯನ್ನು ಬಿಡುಗಡೆಮಾಡಿದೆ. ಬೀಟಾ ಐಓಎಸ್‍ನಲ್ಲಿ ಹೊಸ ಫೀಚರ್ ಗಳಿದ್ದು, ಮುಖ್ಯವಾಗಿ ಡ್ಯುಯಲ್ ಸಿಮ್ ಸ್ಟೇಟಸ್ ಮತ್ತು ಎರಡನೇ ಸಿಮ್ ಸ್ಲಾಟ್ ಬಗ್ಗೆ ಉಲ್ಲೇಖಿಸಲಾಗಿದೆ.
Advertisement
ಈ ಹಿಂದೆ ಆಪಲ್ 6.5 ಇಂಚು ಸ್ಕ್ರೀನ್ ಹೊಂದಿರುವ ಡ್ಯುಯಲ್ ಸಿಮ್ ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ಯಾವಾಗ ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಸ್ಪಷ್ಟವಾದ ವಿವರ ಸಿಕ್ಕಿರಲಿಲ್ಲ. ಆದರೆ ಈಗ ಬೀಟಾ ಆವೃತ್ತಿಯಲ್ಲಿ ಸುಳಿವು ನೀಡಿದ್ದು ಈ ವರ್ಷವೇ ಬಿಡುಗಡೆಯಾಗುವ ಸಾಧ್ಯತೆಯಿದೆ.
Advertisement
Advertisement
ಬೀಟಾ ಆವೃತ್ತಿಯಲ್ಲಿ ಡಾರ್ಕ್ ಕಂಟ್ರೋಲ್ ಸೆಂಟರ್ ನಿಯಂತ್ರಣ, ಪ್ರಿ ಲೋಡ್ ಆಗಿರುವ ಫೋಟೋಗಳ ಅಪ್ಲಿಕೇಶನ್ ಗಾಗಿ ಹೊಸ ಸ್ಪ್ಲಾಶ್ ಸ್ಕ್ರೀನ್ ಸೇರಿಸಿದೆ.
Advertisement
ವಿಶ್ವದ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಚೀನಾ ಮೊದಲನೇಯ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. ಡ್ಯುಯಲ್ ಸಿಮ್ ಸ್ಮಾರ್ಟ್ ಫೋನ್‍ಗಳ ಪ್ರಾಬಲ್ಯವೇ ಇಲ್ಲಿ ಹೆಚ್ಚಿರುವ ಹಿನ್ನೆಲೆಯಲ್ಲಿ ಆಂಡ್ರಾಯ್ಡ್ ಫೋನ್‍ಗಳಿಗೆ ಸ್ಪರ್ಧೆ ನೀಡಲು ಈಗ ಆಪಲ್ ಮುಂದಾಗಿದೆ ಎನ್ನಲಾಗಿದೆ.
ಟಾಪ್ ಕಂಪೆನಿಗಳ ಫೋನ್ ಗಳ ಪೈಕಿ ಆಪಲ್ ಒಂದನ್ನು ಹೊರತುಪಡಿಸಿ ಉಳಿದ ಎಲ್ಲ ಸ್ಮಾರ್ಟ್‍ಫೋನ್ ಕಂಪೆನಿಗಳು ಡ್ಯುಯಲ್ ಸಿಮ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಐಫೋನ್ ಬೆಲೆಯಲ್ಲಿರುವ ಆಂಡ್ರಾಯ್ಡ್ ಫೋನ್ ಗಳಲ್ಲೂ ಎರಡು ಸಿಮ್ ಹಾಕಬಹುದಾಗಿದೆ. ಆಪಲ್ ಸಹ ಈ ಮಾರುಕಟ್ಟೆಯ ಟ್ರೆಂಡ್ ಅನ್ನು ಫಾಲೋ ಮಾಡುವ ಸಲುವಾಗಿ ಡ್ಯುಯಲ್ ಸಿಮ್ ಇರುವ ಐಫೋನ್ ಬಿಡುಗಡೆ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಏನಿದು ಆಪಲ್ ಬೀಟಾ ಐಓಎಸ್?
ನೀವು ವಾಟ್ಸಪ್ ಬಳಸುತ್ತಿದ್ದರೆ ಗೂಗಲ್ ಆಂಡ್ರಾಯ್ಡ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಪ್, ವಾಟ್ಸಪ್ ಬೀಟಾ ಆವೃತ್ತಿಯ ಎರಡು ಅಪ್ಲಿಕೇಶನ್ ನೋಡಿರಬಹುದು. ವಾಟ್ಸಪ್ ಬೀಟಾ ಆವೃತ್ತಿಯನ್ನು ಡೌನ್ ಲೋಡ್ ಮಾಡಿದರೆ ನಿಮಗೆ ವಾಟ್ಸಪ್ ಹೊಸ ವಿಶೇಷತೆಗಳು ಬೇಗನೇ ಸಿಗುತ್ತದೆ. ವಾಟ್ಸಪ್ ಕಂಪೆನಿಯ ಹೊಸ ವಿಶೇಷತೆಗಳ ಪ್ರಯೋಗಗಳನ್ನು ಬೀಟಾ ಅವೃತ್ತಿ ಬಳಕೆದಾರರಲ್ಲಿ ನೋಡಿ ಬಳಿಕ ಅಂತಿಮವಾಗಿ ಎಲ್ಲ ಜನರಿಗೆ ಆ ವಿಶೇಷತೆಯನ್ನು ನೀಡುತ್ತದೆ. ಅದೇ ರೀತಿಯಾಗಿ ಆಪಲ್ ಸಹ ತನ್ನ ಐಓಎಸ್ ಹೊಸ ವಿಶೇಷತೆಯನ್ನು ಬಳಕೆದಾರರಿಗೆ ನೀಡಲು ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಇದರಲ್ಲಿ ನೀಡಿದ ಎಲ್ಲ ವಿಶೇಷತೆಗಳು ಅಂತಿಮವಾಗಿ ಬಿಡುಗಡೆ ಮಾಡಲಾಗುವ ಐಓಎಸ್‍ನಲ್ಲಿ ಇರುತ್ತದೆ ಎಂದು ಹೇಳಲು ಬರವುದಿಲ್ಲ. ಗ್ರಾಹಕ ಅಭಿಪ್ರಾಯಗಳನ್ನು ಸಂಗ್ರಹಿಸಿ, ದೋಷಗಳನ್ನು ಸರಿಪಡಿಸಿ ಅಂತಿಮವಾಗಿ ಎಲ್ಲ ವಿಶೇಷತೆಗಳನ್ನು ಸೇರಿಸಿ ಐಓಎಸ್ ಬಿಡುಗಡೆ ಮಾಡುತ್ತದೆ.