ರಾಮಮಂದಿರ ಪ್ರಾಣಪ್ರತಿಷ್ಠೆಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ಗೆ ಆಹ್ವಾನ

Public TV
1 Min Read
Sachin Tendulkar Ayodhya Invitation

ನವದೆಹಲಿ: ರಾಮಮಂದಿರದಲ್ಲಿರುವ (Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಗೆ ಭರದಿಂದ ಸಿದ್ಧತೆ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗಿದೆ. ವಿರಾಟ್ ಕೊಹ್ಲಿಯ (Virat Kohli) ಬಳಿಕ ಇದೀಗ ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಅವರಿಗೂ ಅಯೋಧ್ಯೆಯ (Ayodhya) ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ.

ಕಾರ್ಯಕ್ರಮದ ಉಸ್ತುವಾರಿಯನ್ನು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಕೇವಲ 9 ದಿನಗಳು ಉಳಿದಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲಾ ವಿಶೇಷ ಅತಿಥಿಗಳಿಗೆ ಉಡುಗೊರೆಗಳನ್ನು ಒಳಗೊಂಡಂತೆ ಅವರಿಗೆ ಬೇಕಾದ ಸಕಲ ವ್ಯವಸ್ಥೆಯನ್ನು ಟ್ರಸ್ಟ್ ಮಾಡುತ್ತಿದೆ. ವಿಶೇಷ ಅತಿಥಿಗಳಿಗೆ ನೀಡಲಾಗುವ ಉಡುಗೊರೆಗಳು ದೇವಾಲಯದ ಶಂಕುಸ್ಥಾಪನೆಯ ಸಮಯದಲ್ಲಿ ತೆಗೆದ ಮಣ್ಣನ್ನು (ರಾಮ್‌ರಾಜ್) ಒಳಗೊಂಡಿದೆ. ಅಲ್ಲದೇ ಕಾರ್ಯಕ್ರಮದ ಅಂಗವಾಗಿ ಸಮಾರಂಭದ ದಿನದಂದು ಅತಿಥಿಗಳಿಗೆ ವಿಶೇಷವಾಗಿ ದೇಶಿ ತುಪ್ಪದಿಂದ ತಯಾರಿಸಲಾಗುವ ಮೋತಿಚೂರು ಲಡ್ಡನ್ನು ಪ್ರಸಾದವಾಗಿ ವಿತರಿಸಲಾಗುತ್ತದೆ. ಇದನ್ನೂ ಓದಿ: ಮೈಸೂರಿನಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅತಿಹೆಚ್ಚು ದೇಣಿಗೆ ಕೊಟ್ಟಿದ್ದು ಮುಸ್ಲಿಮರು!

ಜನವರಿ 22ರಂದು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನೇತೃತ್ವ ವಹಿಸಲಿದ್ದಾರೆ ಮತ್ತು ಜಟಾಯು ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದನ್ನೂ ಓದಿ: Ayodhya Ram Mandir: ಕಾಶಿ ಯಜ್ಞಶಾಲೆಯಲ್ಲಿ 40 ದಿನ ವಿಶೇಷ ಪೂಜೆ – ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ

 

Share This Article