ಉಡುಪಿ: ಜಿಲ್ಲೆಯ ಮೂಳೂರಿನ ಸಾಯಿರಾಧಾ ರೆಸಾರ್ಟಿನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಪ್ರಧಾನಿ ದೇವೇಗೌಡರಿಗೆ ಕೃಷ್ಣಮಠದ ಪ್ರಸಾದದ ಜೊತೆಗೆ ಕೃಷ್ಣಮಠಕ್ಕೆ ಬರಲು ಆಹ್ವಾನ ನೀಡಲಾಗಿದೆ. ಹೀಗಾಗಿ ಮಠಕ್ಕೆ ಅಕ್ಷಯ ತೃತೀಯಕ್ಕೆ ಬರುವುದಾಗಿ ದೊಡ್ಡ ಗೌಡರು ಹೇಳಿದ್ದಾರೆ.
ದಳಪತಿಗಳು ಇಂದು ನಾಲ್ಕನೇ ದಿನದ ಪಂಚಕರ್ಮ ಚಿಕಿತ್ಸೆಗೆ ಮೈಯ್ಯೊಡ್ಡಿದ್ದಾರೆ. ಈ ನಡುವೆ ಉಡುಪಿ ಕೃಷ್ಣ ಮಠದಿಂದ ಕೃಷ್ಣ, ಮುಖ್ಯಪ್ರಾಣ ದೇವರ ಪ್ರಸಾದ ನೀಡಲಾಗಿದೆ. ಹಾಗೆಯೇ ಪ್ರಕೃತಿ ಚಿಕಿತ್ಸೆ ಪೂರೈಸಿ ಮಠಕ್ಕೆ ಬರುವಂತೆ ಆಹ್ವಾನಿಸಲಾಗಿದೆ. ಕೃಷ್ಣಮಠಕ್ಕೆ ಬರುವುದಾಗಿ ತಿಳಿಸಿದ ದೇವೇಗೌಡರು, ಮೇ 7ಕ್ಕೆ ಅಕ್ಷಯ ತೃತೀಯದ ದಿನ ಮಠಕ್ಕೆ ಭೇಟಿ ಕೊಡುವ ಸಾಧ್ಯತೆಯಿದೆ.
ಕೃಷ್ಣಮಠದಲ್ಲಿ 11 ಗಂಟೆಗೆ ದರ್ಶನ ವ್ಯವಸ್ಥೆ ಮಾಡಿ. ನಂತರ ಮಠದಲ್ಲೇ ಅನ್ನಪ್ರಸಾದ ಸ್ವೀಕರಿಸುವುದಾಗಿ ಹೇಳಿದ್ದಾರೆ. ಸ್ವರ್ಣ ಗೋಪುರ ಉದ್ಘಾಟನೆಗೂ ದೇವೇಗೌಡರಿಗೆ ಆಹ್ವಾನ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.