ಬೆಳಗಾವಿ: ರಾಷ್ಟ್ರೀಯ ಯುವ ಜನೋತ್ಸವ (National Youth Day) ಈ ಬಾರಿ ಜನವರಿ 12 ರಿಂದ 16 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ರೇಷ್ಮೆ, ಕ್ರೀಡಾ ಹಾಗೂ ಯುವಜನ ಸಬಲೀಕರಣ ಇಲಾಖೆಯ ಸಚಿವರಾದ ಡಾ.ನಾರಾಯಣಗೌಡ (Dr. Narayana Gowda) ಅವರು ತಿಳಿಸಿದರು.
Advertisement
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಯುವಜನೋತ್ಸವದಲ್ಲಿ ದೇಶದ ಎಲ್ಲ ರಾಜ್ಯಗಳಿಂದ 7,500 ಕಲಾವಿದರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ. 26ನೇ ರಾಷ್ಟ್ರೀಯ ಯುವಜನೋತ್ಸವ ಆಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದ್ದು, ಈಗಾಗಲೇ ಸಭೆ ಕೂಡ ನಡೆಸಲಾಗಿದೆ.ಯುವಜನೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಮುಂದಿನ ವಾರದಿಂದ ಭರದ ಸಿದ್ಧತೆಯನ್ನು ಆರಂಭಿಸಲಾಗುವುದು. ಊಟೋಪಹಾರ, ವಸತಿ ವ್ಯವಸ್ಥೆ ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು. ಇದನ್ನೂ ಓದಿ: ಬೆಂಗಳೂರು-ಮೈಸೂರು ಹೆದ್ದಾರಿ ಅವೈಜ್ಞಾನಿಕ – ನಿತಿನ್ ಗಡ್ಕರಿಗೆ ಮನವಿ ಸಲ್ಲಿಸಿದ ಸುಮಲತಾ ಅಂಬರೀಶ್
Advertisement
Advertisement
ಲಾಂಛನ-ಚಿಹ್ನೆ ವಿನ್ಯಾಸಗಳಿಗೆ ಆಹ್ವಾನ:
ರಾಷ್ಟ್ರೀಯ ಯುವ ಜನೋತ್ಸವದ ಲಾಂಛನ (ಲೋಗೋ) ಥೀಮ್, ಚಿಹ್ನೆ (ಮಾಸ್ಕಾಟ್) ವಿನ್ಯಾಸ ರಚನೆಗೆ ಸಾರ್ವಜನಿಕರಿಂದ ಸ್ಪರ್ಧೆಗೆ ಆಹ್ವಾನಿಸಲಾಗಿದೆ. ಉತ್ತಮ ಲೋಗೋ ರಚನೆಗೆ 50,000 ರೂ. ನಗದು ಬಹುಮಾನ ಮತ್ತು ಉತ್ತಮ ಥೀಮ್ಸ್ ರಚನೆಗೆ 25,000 ರೂ. ಬಹುಮಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಪಂಚರತ್ನ ಯಾತ್ರೆಗೆ ಹೆದರಿ ಕೊರೊನಾ ಭೂತ ಬಿಡ್ತಿದ್ದಾರೆ – ಹೆಚ್‌ಡಿಕೆ
Advertisement
ಸಾರ್ವಜನಿಕರು ಥೀಮ್ಸ್ ಲೋಗೋ ಹಾಗೂ ಮಾಸ್ಕಾಟ್ ರಚಿಸಿ ಡಿ. 28ರೊಳಗೆ ಸಲ್ಲಿಸಬೇಕು. ಸಾರ್ವಜನಿಕರು ಕಳಿಸುವ ಅತ್ಯುತ್ತಮ ಲೋಗೋ ಮತ್ತು ಥೀಮ್‍ನ್ನು ಸಮಿತಿಯ ಮೂಲಕ ಆಯ್ಕೆ ಮಾಡಿ ರಾಷ್ಟ್ರೀಯ ಯುವ ಉತ್ಸವದಲ್ಲಿ ಅಧಿಕೃತವಾಗಿ ಬಳಸಲಾಗುವುದು. ಲೋಗೋ ಮತ್ತು ಮಾಸ್ಕಾಟ್ ಪ್ರದರ್ಶಿಸುವ ತಂಡವು ತಮ್ಮ ಸಂಪರ್ಕ ವಿವರ ಹಾಗೂ ವಿನ್ಯಾಸಗಳನ್ನು ರಚಿಸಿ ಡಿಸೆಂಬರ್ 28ರ ಸಂಜೆ 6 ಗಂಟೆಯ ಒಳಗಾಗಿ [email protected] ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು ಎಂದು ಮಾಹಿತಿ ಹಂಚಿಕೊಂಡರು.