Bengaluru CityCrimeDistrictsKarnatakaLatest

ಅಮೂಲ್ಯ ಲಿಯೊನಳನ್ನು ಕಸ್ಟಡಿಗೆ ಪಡೆಯಲಿರೋ ತನಿಖಾ ತಂಡ

ಬೆಂಗಳೂರು: ಸಿಎಎ, ಎನ್‍ಆರ್ ಸಿ ವಿರೋಧಿಸಿ ಪ್ರತಿಭಟನಾ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿ ಜೈಲಿನಲ್ಲಿ ಕಂಬಿ ಏಣಿಸುತ್ತಿರುವ ಆರೋಪಿ ಅಮೂಲ್ಯ ಲಿಯೊನಳನ್ನು ತನಿಖಾಧಿಕಾರಿಗಳು ಇಂದು ಕಸ್ಟಡಿಗೆ ಪಡೆಯಲಿದ್ದಾರೆ.

ಆರೋಪಿ ಅಮೂಲ್ಯ ಲಿಯೊನಗೆ ಹೆಚ್ಚಿನ ವಿಚಾರಣೆ ಮಾಡುವ ಆಗತ್ಯ ಇದ್ದು, 14 ದಿನಗಳ ಕಾಲ ತನಿಖಾ ತಂಡ ಕಸ್ಟಡಿಗೆ ಪಡೆದುಕೊಳ್ಳಲಿದೆ. ಆರೋಪಿ ಅಮೂಲ್ಯ ಬಂಧನವಾದ ಬಳಿಕ ಆಕೆಯ ಆಪ್ತ ಗೆಳೆಯರನ್ನು ವಿಶೇಷ ತನಿಖಾ ತಂಡ ಭಾನುವಾರ ವಿಚಾರಣೆ ಮಾಡಿದೆ. ಇದನ್ನೂ ಓದಿ: ನಾನೂ ಗೌರಿ ಲಂಕೇಶ್‍ನಂತೆ ಆಗ್ತೀನಿ ಎಂದಿದ್ದ ಅಮೂಲ್ಯ ಲಿಯೊನ

ಅಲ್ಲದೆ ಆರೋಪಿ ಅಮೂಲ್ಯಳಿಗೆ ನಕ್ಸಲ್ ನಂಟಿರುವ ಬಗ್ಗೆ ಸ್ವತಃ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ಪ್ರಸ್ತಾಪ ಮಾಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ತನಿಖಾಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಅಮೂಲ್ಯ ಕರ್ನಾಟಕದ ಬೇರೆ ಕಡೆ ಆಕ್ರೋಶ ಭರಿತವಾದ ಭಾಷಣಗಳು ಮಾಡಿರುವ ಬಗ್ಗೆ ವಿಡಿಯೋಗಳನ್ನು ಸಂಗ್ರಹಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಅಮೂಲ್ಯ ಯಾವ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾಳೆ ಎಂದು ಪರಿಶೀಲನೆ ಮಾಡಲು ಚಾಮರಾಜಪೇಟೆ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ನೇತೃತ್ವದ ತಂಡ ಪರಿಶೀಲನೆ ಮಾಡಿ ಮತ್ತಷ್ಟು ವಿಚಾರಗಳನ್ನು ಕಲೆ ಹಾಕುತ್ತಿದ್ದಾರೆ.

Leave a Reply

Your email address will not be published.

Back to top button