ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮುಕ್ತಾಯ ಹಂತಕ್ಕೆ – ಗೃಹಸಚಿವರ ಭೇಟಿಯಾದ ತನಿಖಾಧಿಕಾರಿ

Public TV
1 Min Read
ACP CHANDAN

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ದರ್ಶನ್ (Darshan) ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬೆನ್ನಲ್ಲೇ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ತಯಾರಿ ನಡೆಸಿದ್ದಾರೆ. ಈ ಹಿನ್ನೆಲೆ ಇಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ (ACP Chandan) ಗೃಹ ಸಚಿವ ಪರಮೇಶ್ವರ್ (G Parameshwar) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಪ್ರಕರಣ ಕುರಿತ ಕೆಲ ಮಹತ್ವದ ದಾಖಲೆಗಳಿರುವ ಫೈಲ್‌ಗಳೊಂದಿಗೆ ಎಸಿಪಿ ಚಂದನ್ ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಪ್ರಕರಣದಲ್ಲಿ ದರ್ಶನ್ ಅವರನ್ನು ಎ1 ಮಾಡುವ ಬಗ್ಗೆಯೂ ಗೃಹ ಸಚಿವರ ಜೊತೆ ಎಸಿಪಿ ಚಂದನ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ತನಿಖೆಯ ಪ್ರಗತಿ ಬಗ್ಗೆಯೂ ಗೃಹ ಸಚಿವರಿಗೆ ಚಂದನ್ ಮಾಹಿತಿ ಕೊಟ್ಟಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ರಾಯಚೂರಲ್ಲಿ ಡೆತ್‌ನೋಟ್ ಬರೆದಿಟ್ಟು ಬಿಎ ವಿದ್ಯಾರ್ಥಿ ನೇಣಿಗೆ ಶರಣು

G PARAMESHWAR

ಇನ್ನು ಎಸಿಪಿ ಚಂದನ್ ಭೇಟಿ ಬಗ್ಗೆ ಮಾತನಾಡಿದ ಸಚಿವ ಪರಮೇಶ್ವರ್, ಅವರು ಬೇರೆ ಕೇಸ್ ಸಂಬಂಧ ಬಂದಿದ್ದರು. ದರ್ಶನ್ ಕೇಸ್ ಸಂಬಂಧ ಚರ್ಚೆ ಮಾಡಲಿಲ್ಲ. ಚಾರ್ಜ್‌ಶೀಟ್‌ನಲ್ಲಿ ದರ್ಶನ್‌ರನ್ನು ಎ1 ಮಾಡುವ ವಿಚಾರ ತನಿಖಾಧಿಕಾರಿಗಳಿಗೆ ಬಿಟ್ಟದ್ದು. ದರ್ಶನ್‌ರನ್ನು ಎ1 ಮಾಡಿ ಅಥವಾ ಎ2 ಮಾಡಿ ಎಂದು ನಾವು ಹೇಳಲು ಆಗಲ್ಲ. ಅದನ್ನು ಪೊಲೀಸರೇ ಮಾಡುತ್ತಾರೆ ಎಂದರು. ಇದನ್ನೂ ಓದಿ: ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

ಜೈಲಿನಲ್ಲಿ ದರ್ಶನ್ ವೀಡಿಯೋ ಕಾಲ್ ಪ್ರಕರಣದ ತನಿಖಾ ರಿಪೋರ್ಟ್ ಇನ್ನೂ ಬಂದಿಲ್ಲ. ಇದರ ತನಿಖೆಯನ್ನು ಐಪಿಎಸ್ ಅಧಿಕಾರಿ ಚಂದ್ರಗುಪ್ತ ಮಾಡುತ್ತಿದ್ದು, ತನಿಖೆ ನಂತರ ಏನು ವರದಿ ಬರುತ್ತದೆ ಎಂದು ನೋಡೋಣ ಎಂದು ತಿಳಿಸಿದರು. ಇದನ್ನೂ ಓದಿ: BMTC ನಿರ್ವಾಹಕ ಹುದ್ದೆಗೆ ಪರೀಕ್ಷೆ, ಕಟ್ಟುನಿಟ್ಟಿನ ನಿಗಾವಹಿಸುವಂತೆ ಕ್ರಮ – ಕೆಇಎ

Share This Article