ಬೆಂಗಳೂರು: ಬಿಜೆಪಿ (BJP) ಅವಧಿಯಲ್ಲಿ ನಡೆದ ಅಕ್ರಮಗಳ ತನಿಖೆಗೆ ಎಸ್‌ಐಟಿ ರಚನೆ ಮಾಡೋ ಬಗ್ಗೆ ಸಿಎಂ ಸಿದ್ದರಾಮಯ್ಯ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ವಿಧಾನಸೌಧಲ್ಲಿ ಮಾತನಾಡಿದ ಅವರು, ಬಿಜೆಪಿ ಅವಧಿಯಲ್ಲಿ ಅನೇಕ ವಿಧದಲ್ಲಿ ಅಕ್ರಮ ಆಗಿವೆ. ಕಳೆದ ಸಂಪುಟ ಸಭೆಯಲ್ಲಿ ಕೆಲವು ವಿಚಾರಗಳು ಚರ್ಚೆಯಾಗಿತ್ತು. ಸಿಎಂ, ಡಿಸಿಎಂ ಕೆಲ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಯಾವ ತಂಡಗಳಿಂದ ತನಿಖೆ ಮಾಡಿಸಬೇಕು ಎಂಬ ಚರ್ಚೆ ಆಗುತ್ತಿದೆ. ಈ ಬಗ್ಗೆ ಅಂತಿಮವಾಗಿ ಸಿಎಂ ತೀರ್ಮಾನ ಮಾಡುತ್ತಾರೆ ಎಂದರು.
Advertisement
Advertisement
ಕಳೆದ ಬಿಜೆಪಿ ಅವಧಿಯಲ್ಲಿ ಬಹಳ ವಿಭಿನ್ನವಾಗಿ ಸ್ಕ್ಯಾಮ್ ಮಾಡಿದ್ದಾರೆ. ತಂತ್ರಜ್ಞಾನ ಸ್ಕ್ಯಾಮ್ ಆಗಿದೆ. ಎಕನಾಮಿಕ್‌ನಲ್ಲೂ ಹಗರಣ ಆಗಿದೆ. ಬಿಟ್ ಕಾಯಿನ್ ಹಗರಣ ಆಗಿದೆ. ಹೀಗಾಗಿ ನಮಗೆ ಸೈಬರ್ ಎಕ್ಸ್‌ಪರ್ಟ್ ಬೇಕಾಗುತ್ತದೆ. ತಂತ್ರಜ್ಞಾನ ತಿಳಿದ ಅಧಿಕಾರಿಗಳ ಅವಶ್ಯಕತೆ ಇದೆ. ಎಕಾನಾಮಿ ಅಫೆನ್ಸ್ ನಡೆದಿದೆ. ಗಂಗಾ ಕಲ್ಯಾಣ ಹಗರಣದಲ್ಲಿ ಇನ್‌ಕಮ್ ಟ್ಯಾಕ್ಸ್ ರಿಟರ್ನ್ ಮರ್ಜ್ ಮಾಡಿದ್ದಾರೆ. ಕೆಲವು ಪ್ರಕರಣಕ್ಕೆ ಎಸ್‌ಐಟಿ ತನಿಖೆ ಇರಬಹುದು. ಕೆಲವೊಂದು ಪ್ರಕರಣಕ್ಕೆ ಎಕ್ಸ್‌ಪರ್ಟ್‌ಗಳಿಂದ ತನಿಖೆ ಮಾಡಿಸೋ ಅವಶ್ಯಕತೆ ಇದೆ ಎಂದರು. ಇದನ್ನೂ ಓದಿ: ಭಾರತ ದೇಶದ ಸಂಪತ್ತು ಎಷ್ಟು ಲೂಟಿ ಮಾಡಿದರೂ ಕರಗಲ್ಲ: ಹೆಚ್‌ಡಿಕೆ
Advertisement
ಇನ್ನು ಕೆಲವು ಪ್ರಕರಣದಲ್ಲಿ ಎಸಿಎಸ್ ಲೆವೆಲ್‌ನಲ್ಲಿ ತನಿಖಾ ತಂಡದ ಅವಶ್ಯಕತೆ ಇದೆ. ಹೀಗಾಗಿ ಒಂದೇ ಏಜೆನ್ಸಿಯಿಂದ ತನಿಖೆ ಮಾಡಿಸುವುದು ಸರಿಯಲ್ಲ. ಯಾವ ಯಾವ ತನಿಖೆಗೆ ಯಾರು ಯಾರು ತನಿಖೆ ಮಾಡಿಸಬೇಕು ಎಂಬ ತೀರ್ಮಾನ ಮಾಡುತ್ತೇವೆ. ಸಿಎಂ, ಡಿಸಿಎಂ ಇದರ ಬಗ್ಗೆ ಅಂತಿಮ ತೀರ್ಮಾನ ಮಾಡುತ್ತಾರೆ ಎಂದರು.
Advertisement
&
nbsp;ಇನ್ನು ಪ್ರಕರಣಗಳನ್ನು ಸಿಸಿಬಿ, ಸಿಐಡಿಗೆ ಒಪ್ಪಿಸೋ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಿಐಡಿ, ಸಿಸಿಬಿ ಎಂದರೆ ಕಳ್ಳನ ಕೈಗೆ ಕೀ ಕೊಟ್ಟಂತಾಗುತ್ತದೆ. ಹೀಗಾಗಿ ಯಾವ ಯಾವ ಪ್ರಕರಣಕ್ಕೆ ಯಾರಿಂದ ತನಿಖೆ ಮಾಡಿಸಬೇಕು ಎಂಬ ತನಿಖೆ ಮಾಡಿಸುತ್ತೇವೆ. ಈ ಬಗ್ಗೆ ಗೃಹ ಸಚಿವರ ಗಮನಕ್ಕೂ ತರುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: Gruha Lakshmi Scheme: ಪ್ರತ್ಯೇಕ ಆಪ್‍ಗೆ ಕ್ಯಾಬಿನೆಟ್‌ನಲ್ಲಿ ಗ್ರೀನ್ ಸಿಗ್ನಲ್
Web Stories