ಬೆಂಗಳೂರು: ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಇನ್ವೆಸ್ಟ್ ಕರ್ನಾಟಕಕ್ಕೆ (Invest Karnataka) ಅದ್ಧೂರಿ ಚಾಲನೆ ಸಿಕ್ಕಿದೆ. ನಾಲ್ಕು ದಿನ ನಡೆಯುವ ಸಮಾವೇಶವನ್ನು ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ (Rajnath Singh) ಸಿಎಂ ಸಿದ್ದರಾಮಯ್ಯ (CM Siddaramaiah) ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಉದ್ಯಮಿಗಳಾದ ಆನಂದ್ ಮಹೀಂದ್ರ 40 ಸಾವಿರ ಕೋಟಿ ರೂ., ಸಜ್ಜನ್ ಜಿಂದಾಲ್ 56 ಸಾವಿರ ಕೋಟಿ ರೂ. ಹೂಡಿಕೆಯ ಘೋಷಣೆ ಮಾಡಿದ್ದರು. ಸಿಎಂ ಜೊತೆ ಒಪ್ಪಂದಕ್ಕೆ ಸಹಿಯನ್ನು ಹಾಕಿದ್ದರು.
Advertisement
ಈ ಮೂಲಕ ಮೊದಲ ದಿನವೇ 1 ಲಕ್ಷ ಕೋಟಿ ಹೂಡಿಕೆ ಹರಿದು ಬಂದಿದೆ. ನಾಳೆಯಿಂದ ಶುಕ್ರವಾರದವರೆಗೆ ನಡೆಯಲಿರುವ ವಿವಿಧ ವಿಚಾರಗೋಷ್ಠಿಗಳಲ್ಲಿ ವಿವಿಧ ಕ್ಷೇತ್ರಗಳ ದಿಗ್ಗಜರು ಉದ್ದಿಮೆ ಲೋಕದ ಭವಿಷ್ಯದ ಬಗೆಗಿನ ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಪ್ರಮುಖ ಹೂಡಿಕೆ ಒಪ್ಪಂದಗಳಿಗೆ ಸಹಿ ಬೀಳಲಿದೆ. 10 ಲಕ್ಷ ಕೋಟಿ ಹೂಡಿಕೆಯನ್ನು ಸರ್ಕಾರ ನಿರೀಕ್ಷೆ ಮಾಡಿದೆ
Advertisement
ಇನ್ವೆಸ್ಟ್ ಕರ್ನಾಟಕದಲ್ಲಿ ಇಂದು 21 ಕಂಪನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ.
Advertisement
ಆಸಕ್ತಿ ತೋರಿಸಿದ ಕಂಪನಿಗಳ ಪಟ್ಟಿ:
1.ಜೆಎಸ್‌ಡಡಬ್ಲ್ಯು ನಿಯೊ ಎನರ್ಜಿ ಲಿಮಿಟೆಡ್ – ಸೌರ ಯೋಜನೆ , ಗಾಳಿ ಶಕ್ತಿ ಯೋಜನೆಗಳು, ಬ್ಯಾಟರಿ ಶಕ್ತಿ ಸಂಗ್ರಹಣೆ, ಬ್ಲೇಡ್ ತಯಾರಿಕೆ ಮತ್ತು ವಿಂಡ್ ಟರ್ಬೈನ್ ಜನರೇಟರ್ ಸ್ಥಾವರ ಸ್ಥಾಪನೆಗೆ 56,000 ಕೋಟಿ ರೂ. ಹೂಡಿಕೆ.
Advertisement
2.ಬಲ್ಡೋಟಾ ಸ್ಟೀಲ್ ಆ್ಯಂಡ್ ಪವರ್ ಲಿಮಿಟೆಡ್ – ಸಮಗ್ರ ಉಕ್ಕು ತಯಾರಿಕಾ ಸ್ಥಾವರಕ್ಕೆ ರೂ 54,000 ಕೋಟಿ ರೂ. ಹೂಡಿಕೆ.
3.ಟಾಟಾ ಪವರ್ ರಿನ್ಯೂವೇಬಲ್ ಎನರ್ಜಿ ಲಿಮಿಟೆಡ್ – ರಾಜ್ಯದಾದ್ಯಂತ ನವೀಕರಿಸಬಹುದಾದ ಇಂಧನ ವಿದ್ಯುತ್ ಯೋಜನೆಗಳು ಮತ್ತು ಮೇಲ್ಚಾವಣಿ ವಿದ್ಯುತ್ ಪರಿಹಾರಗಳ ಅಭಿವೃದ್ಧಿಗೆ 50,000 ಕೋಟಿ ರೂ. ಹೂಡಿಕೆ.
At #InvestKarnataka2025, Mrs. Geetanjali Vikram Kirloskar (@GeetanjaliKir), Chairperson & MD, Kirloskar Systems, highlighted Karnataka government’s enabling support, ease of doing business and state’s quality-driven ecosystem — all of which strengthen investor confidence.
“By… pic.twitter.com/WHNUI8qFF6
— Invest Karnataka (@investkarnataka) February 11, 2025
4.ರೆನ್ಯೂ ಪ್ರೈವೇಟ್ ಲಿಮಿಟೆಡ್ – 4 ಗಿಗಾವಾಟ್ ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು 50,000 ಕೋಟಿ ರೂ. ಹೂಡಿಕೆ.
5.ಸೆರೆಂಟಿಕಾ ರಿನ್ಯೂವೇಬಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳ ಅಭಿವೃದ್ಧಿಗಾಗಿ 43,975 ಕೋಟಿ ರೂ. ಹೂಡಿಕೆ.
6.ಜೆಎಸ್‌ಡಬ್ಲ್ಯು ಗ್ರೂಪ್ – ಜೆಎಸ್‌ಡಬ್ಲ್ಯು ಸಿಮೆಂಟ್ ಆ್ಯಂಡ್ ಸ್ಟೀಲ್ ಮತ್ತು ಅದರ ಅಂಗಸಂಸ್ಥೆಗಳಿಗೆ 43,900 ಕೋಟಿ ರೂ. ಹೂಡಿಕೆ.
7.ಮಹೀಂದ್ರಾ ಸಸ್ಟೆನ್ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಸ್ಥಾಪಿಸಲು 35,000 ಕೋಟಿ ರೂ. ಹೂಡಿಕೆ. ಇದನ್ನೂ ಓದಿ: ಏರ್ ಶೋ ಹೊತ್ತಲ್ಲೇ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ
8.ಹೀರೋ ಫ್ಯೂಚರ್ ಎನರ್ಜಿಸ್ – ನವೀಕರಿಸಬಹುದಾದ ಇಂಧನ, ಪರಿಶುದ್ಧ ಜಲಜನಕ ಮತ್ತು ಅದರ ಉತ್ಪನ್ನಗಳ ಯೋಜನೆಗಳಿಗೆ 22,200 ಕೋಟಿ ರೂ. ಹೂಡಿಕೆ.
9. ಸುಜ್ಲಾನ್ ಎನರ್ಜಿ ಲಿಮಿಟೆಡ್ – ಪವನ ವಿದ್ಯುತ್ ಯೋಜನೆಗಳಿಗೆ 21,950 ಕೋಟಿ ರೂ. ಹೂಡಿಕೆ.
Mr. @rahulmunjal14, Chairman & MD, @HeroFuture_HFE, at Invest Karnataka 2025 – Global Investors Meet, applauded Karnataka’s spectacular growth in renewable energy! With 22 GW of wind & solar capacity, Karnataka stands among India’s top states. Committed to a greener future, Hero… pic.twitter.com/Rm1VgCiKUu
— Invest Karnataka (@investkarnataka) February 11, 2025
10. ಎಸ್ಸಾರ್ ರಿನ್ಯೂವೇಬಲ್ಸ್ ಲಿಮಿಟೆಡ್- 20,000 ಕೋಟಿ ರೂ. ಹೂಡಿಕೆ.
11.ಅವಾಡಾ ಎನರ್ಜಿ ಪ್ರೈವೇಟ್ ಲಿಮಿಟೆಡ್ – 18,000 ಕೋಟಿ ರೂ. ಹೂಡಿಕೆ.
12.ಎಪ್ಸಿಲಾನ್ ಗ್ರೂಪ್ – ಆನೋಡ್ ಮತ್ತು ಕ್ಯಾಥೋಡ್ ಪದಾರ್ಥಗಳ ತಯಾರಿಕೆಗೆ 15,350 ಕೋಟಿ ರೂ. ಹೂಡಿಕೆ.
13. ಎಂವೀ ಎನರ್ಜಿ ಪ್ರೈವೇಟ್ ಲಿಮಿಟೆಡ್ – ಸೋಲಾರ ಫೊಟೊವೊಲ್ಟ್ಯಾಕ್ ಸೆಲ್ಸ್ ಮತ್ತು ಮಾಡ್ಯೂಲ್‌ಗಳ ತಯಾರಿಕೆಗೆ 15,000 ಕೋಟಿ ರೂ. ಹೂಡಿಕೆ.
14. ಲ್ಯಾಮ್ ರಿಸರ್ಚ್ – ಸೆಮಿಕಂಡಕ್ಟರ್ ಉಪಕರಣಗಳ ತಯಾರಿಕೆಗೆ 10,000 ಕೋಟಿ ರೂ. ಹೂಡಿಕೆ
15. ಆಂಪಿನ್ ಎನರ್ಜಿ ಟ್ರಾನ್ಸಿಷನ್ ಪ್ರೈವೇಟ್ ಲಿಮಿಟೆಡ್ – 10,000 ಕೋಟಿ ರೂ. ಹೂಡಿಕೆ.
Mr. Sesha Varadarajan, Senior Vice President, @LamResearch, at Invest Karnataka 2025 – Global Investors Meet, announced a major investment in Karnataka! ⚡️ We have signed an MoU with KIADB and, through this partnership, will be investing over ₹10,000 Cr in specific projects over… pic.twitter.com/S0QUZqJzgC
— Invest Karnataka (@investkarnataka) February 11, 2025
16. ಎಸಿಎಂಇ ಸೋಲಾರ್ ಹೋಲ್ಡಿಂಗ್ಸ್ ಲಿಮಿಟೆಡ್ – 10,000 ಕೋಟಿ ರೂ. ಹೂಡಿಕೆ.
17. ಔ2 ಪವರ್ ಪ್ರೈವೇಟ್ ಲಿಮಿಟೆಡ್ – ನವೀಕರಿಸಬಹುದಾದ ಇಂಧನ ಸೌರ ಮತ್ತು ಪವನ ಯೋಜನೆಗಳ ಸ್ಥಾಪನೆಗೆ 10,000 ಕೋಟಿ ರೂ. ಹೂಡಿಕೆ
18. ಕಾಂಟಿನುಮ್ ಗ್ರೀನ್ ಎನರ್ಜಿ ಜಿಪಿ – ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅಭಿವೃದ್ಧಿಪಡಿಸಲು 10,000 ಕೋಟಿ ರೂ. ಹೂಡಿಕೆ.
19. ಸೋಟೆಫಿನ್ ಭಾರತ್ – ಸಂಪೂರ್ಣ ಸ್ವಯಂಚಾಲಿತ ರೊಬೊಟಿಕ್ ಬಹುಮಹಡಿ ಕಾರ್ ಮತ್ತು ಬಸ್ ಪಾರ್ಕಿಂಗ್ ವ್ಯವಸ್ಥೆಗಳ ನಿರ್ಮಾಣ ಮತ್ತು ಸ್ಥಾಪನೆಗೆ 8,500 ಕೋಟಿ ರೂ. ಹೂಡಿಕೆ.
20. ಶ್ರೀ ಸಿಮೆಂಟ್ ಲಿಮಿಟೆಡ್ – ಇಂಟೆಗ್ರೇಟೆಡ್ ಸ್ಥಾವರ ಮತ್ತು ಕ್ಲಿಂಕರ್ ಗ್ರೈಂಡಿಂಗ್ ಘಟಕಕ್ಕೆ 8,350 ಕೋಟಿ ರೂ. ಹೂಡಿಕೆ.
21. ಹೆಕ್ಸಾ ಕ್ಲೈಮೇಟ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ – 8,000 ಕೋಟಿ ರೂ. ಹೂಡಿಕೆ.