Invest Karnataka 2025 | ರಾಜ್ಯಕ್ಕೆ ಹರಿದುಬಂತು 10.27 ಲಕ್ಷ ಕೋಟಿ ಬಂಡವಾಳ

Public TV
2 Min Read
Invest Karnataka

– 6 ಲಕ್ಷ ಉದ್ಯೋಗ ಸೃಷ್ಟಿ – ಎಂಬಿಪಿ ಮಾಹಿತಿ

ಬೆಂಗಳೂರು: ಮೂರು ದಿನಗಳ ಕಾಲ ನಡೆದ ಬಂಡವಾಳ ಹೂಡಿಕೆ ಸಮಾವೇಶ 2025 (Invest Karnataka 2025) ಅತ್ಯಂತ ಯಶಸ್ವಿ ಕಂಡಿದೆ. ಸುಮಾರು 10 ಲಕ್ಷದ 27 ಸಾವಿರ 378 ಕೋಟಿ ರೂ. ಬಂಡವಾಳ ಹೂಡಿಕೆ (Investment) ಹರಿದುಬಂದಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 11 ರಿಂದ 14ರ ವರೆಗೆ ಇನ್ವೆಸ್ಟ್ ಕರ್ನಾಟಕ ಸಮಾವೇಶ ನಡೀತು. ಜೆಎಸ್‌ಡಬ್ಲ್ಯೂ, ಲಾಮ್, ವೋಲ್ವೋ, ಹೋಂಡಾ ಹೀಗೆ ಅನೇಕ ಕಂಪನಿಗಳು ದೊಡ್ಡ ಮೊತ್ತ ಹೂಡಿಕೆ ಮಾಡಿವೆ. ಬಂಡವಾಳ ಹೂಡಿಕೆ ಸಮಾವೇಶದ ಕೊನೆಯ ದಿನ ಹಲವು ಮಹತ್ವದ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆದವು. ಇದರಲ್ಲಿ ಸಂಸದ ಶಶಿ ತರೂರ್ ವಿಚಾರಗೋಷ್ಠಿ ಎಲ್ಲರ ಗಮನ ಸೆಳೆಯಿತು. ಗ್ರೀಸ್‌ನ ಮಾಜಿ ಪ್ರಧಾನಿ ಜಾರ್ಜ್ ಪಾಪಂಡ್ರೂ, ತಿರುವನಂತಪುರಂ ಸಂಸದ ಶಶಿ ತರೂರ್ ಗೋಷ್ಠಿಯಲ್ಲಿ ಭಾಗವಹಿಸಿದ್ರು.

MB Patil

ವಿಚಾರಗೋಷ್ಠಿಯಲ್ಲಿ ರಾಷ್ಟ್ರಗಳು ಹೇಗೆ ಸವಾಲುಗಳನ್ನ ಎದುರಿಸುವುದು ಮತ್ತು ನಿರಂತರವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಮತ್ತು ಆರ್ಥಿಕ ಭೂದೃಶ್ಯದಲ್ಲಿ ಸ್ಥಿತಿ ಸ್ಥಾಪಕತ್ವವನ್ನು ಹೇಗೆ ನಿರ್ಮಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿತ್ತು. ಅಲ್ಲದೇ ಆಡಳಿತ, ನೀತಿ-ನಿರ್ಮಾಣ ಮತ್ತು ದೀರ್ಘಾವಧಿಯ ಸ್ಥಿರತೆಗಾಗಿ ಕಾರ್ಯತಂತ್ರಗಳ ಒಳನೋಟಗಳನ್ನು ಒಳಗೊಂಡಿತ್ತು. ಇದನ್ನೂ ಓದಿ: ಫೆ.18ಕ್ಕೆ ರಾಜೀವ್ ಕುಮಾರ್ ನಿವೃತ್ತಿ – ಯಾರಾಗ್ತಾರೆ ಮುಂದಿನ ಮುಖ್ಯ ಚುನಾವಣಾ ಆಯುಕ್ತ?

MB Patil 2

ಇದೇ ವೇಳೆ ಮಾತನಾಡಿದ ಶಶಿ ತರೂರ್ (Shashi Tharoor), ಬಹುಧ್ರುವೀಕರಣದ ಜಗತ್ತಿನಲ್ಲಿ ವಿಶ್ವಸಂಸ್ಥೆ ಕೂಡಾ ಮೂಲ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ. ಅಸಮಾನತೆ,ತಾರತಮ್ಯಗಳು ಅಲ್ಲೂ ಇದ್ದು, ಅದನ್ನು ಅರ್ಥ ಮಾಡಿಕೊಂಡರಷ್ಟೇ ಪರ್ಯಾಯ ಜಾಗತಿಕ ವ್ಯವಸ್ಥೆಯ ಬಗ್ಗೆ ಚಿಂತಿಸಬಹುದು ಎಂದು ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ತಿಳಿಸಿದರು. ಇದನ್ನೂ ಓದಿ: ಜಯಲಲಿತಾರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ, ಆಸ್ತಿ ಪತ್ರ ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ

Invest Karnataka 22

ಸಮಾವೇಶದ ನಂತರ ಸುದ್ದಿಗೋಷ್ಠಿ ನಡಸಿದ ಎಂಬಿ ಪಾಟೀಲ್, ಸಮಾವೇಶಕ್ಕೆ 6 ತಿಂಗಳಿಂದ ಸಿದ್ಧತೆ ಮಾಡಿದ್ದೆವು. ವಿಶ್ವದಾದ್ಯಂತ ಸುತ್ತಾಟ ಮಾಡಿದ್ವಿ. ಅಮೆರಿಕ, ಜಪಾನ್, ಯುರೋಪ್ ಸೇರಿ ಹಲವು ಕಡೆ ಪ್ರವಾಸ ಮಾಡಿ ಇನ್ವೆಸ್ಟ್ ಮೆಂಟ್ ಸಮಾವೇಶದ ಬಗ್ಗೆ ಮಾಹಿತಿ ಕೊಟ್ಟಿದ್ವಿ. ಸುಮಾರು 10 ಲಕ್ಷ 27 ಸಾವಿರ 378 ಕೋಟಿ ಬಂಡವಾಳ ಹೂಡಿಕೆ ಆಗಿದೆ. 6 ಲಕ್ಷ ಉದ್ಯೋಗ ಸೃಷ್ಟಿ ಆಗಲಿದೆ. 75% ಹೂಡಿಕೆ ಬಿಹಾಂಡ್ ಬೆಂಗಳೂರಿಗೆ ಹೂಡಿಕೆ ಆಗಿದೆ. ಉತ್ತರ ಕರ್ನಾಟಕ- 45% ಹೂಡಿಕೆ ಆಗಿದೆ ಅಂತಾ ತಿಳಿಸಿದ್ರು. ಇದನ್ನೂ ಓದಿ: ಜಿಯೋ ಹಾಟ್‌ಸ್ಟಾರ್‌ ವಿಲೀನ | ಇನ್ಮುಂದೆ ಐಪಿಎಲ್‌ ಉಚಿತ ವೀಕ್ಷಣೆ ಇಲ್ಲ- ಎರಡನ್ನೂ ಸಬ್‌ಸ್ಕ್ರೈಬ್‌ ಮಾಡಿದವರ ಕಥೆ ಏನು? 

Share This Article