ನಾಗ್ಪುರ: ಕಾಂಗ್ರೆಸ್ ಹೈಕಮಾಂಡ್ ಹಾಗೂ ನಾಯಕರ ತೀವ್ರ ವಿರೋಧದ ನಡುವೆಯೇ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇಂದು ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರ್.ಎಸ್.ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಿದರು.
ಆರ್ ಎಸ್‍ಎಸ್‍ನ ತೃತೀಯ ವರ್ಷದ ಸಂಘ ಶಿಕ್ಷಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರ, ರಾಷ್ಟ್ರೀಯತೆ ಮತ್ತು ರಾಷ್ಟ್ರಭಕ್ತಿಯ ಅಂಶಗಳನ್ನು ಉಲ್ಲೇಖಿಸಿದರು.
Advertisement
ವಸುದೈವ ಕುಟುಂಬಕಂ ಎನ್ನುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ. ರಾಷ್ಟ್ರೀಯತೆ ಮತ್ತು ದೇಶಭಕ್ತಿ ಎರಡೂ ಒಂದೇ. ಸರ್ವೇ ಜನೋ, ಸುಖಿನೋ ಭವಂತು. ಇಡೀ ವಿಶ್ವವೇ ಒಂದು ಕುಟುಂಬ ಎಂಬ ಆಶಯವನ್ನು ವ್ಯಕ್ತಪಡಿಸಿದರು.
Advertisement
I am here amongst you to share my understanding with you of the concepts of nation, nationalism and patriotism in the context of India: Dr Pranab Mukherjee at RSS's Tritiya Varsh event in Nagpur pic.twitter.com/2muh81g6JZ
— ANI (@ANI) June 7, 2018
Advertisement
ಇದೇ ವೇಳೆ ದೇಶದ ಭವ್ಯ ಇತಿಹಾಸದ ಕುರಿತು ಹಲವು ಘಟನೆಗಳನ್ನು ಸ್ಮರಿಸಿದ ಅವರು, ಚಾಣಕ್ಯನ ಅರ್ಥ ಶಾಸ್ತ್ರ, ಅಶೋಕ, ಮೌರ್ಯರ ಆಡಳಿತ ಸೇರಿದಂತೆ ಬ್ರಿಟಿಷ್ ಆಳ್ವಿಕೆ, ದೇಶಭಕ್ತರು, ರಾಜಕಾರಣಿಗಳು, ಸ್ವಾತಂತ್ರ್ಯ ಹೋರಾಟದ ಅಂಶಗಳನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು.
Advertisement
ರಾಷ್ಟ್ರೀಯತೆ ಕುರಿತು ನೆಹರೂ ಅವರ `ಡಿಸ್ಕವರಿ ಆಫ್ ಇಂಡಿಯಾ’ ಪುಸ್ತಕವನ್ನು ಪ್ರಸ್ತಾಪಿಸಿದ ಅವರು, ರಾಷ್ಟ್ರೀಯ ಎಂಬುವುದು, ಹಿಂದೂ, ಮುಸ್ಲಿಂ, ಸಿಖ್ ಹಾಗೂ ಭಾರತದ ಇತರ ಧರ್ಮಗಳ ಸೈದ್ಧಾಂತಿಕ ಸಮ್ಮಿಲನದಿಂದ ಮಾತ್ರ ಹೊರಬರಲು ಸಾಧ್ಯ ಎನ್ನುವ ಮನವರಿಕೆಯಾಗಿದೆ ಎಂಬ ಅರ್ಥ ಸಾರುವ ಸಾಲುಗಳನ್ನು ಉಲ್ಲೇಖಿಸಿದರು.
WATCH: Rashtriya Swayamsevak Sangh (RSS) flag being unfurled at RSS's Tritiya Varsh event, in Nagpur, where former President Dr Pranab Mukherjee is the chief guest. pic.twitter.com/A4zKtLiv4f
— ANI (@ANI) June 7, 2018
ಇದೇ ವೇಳೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಮ್ಮನ್ನು ನಡೆಸುತ್ತಿದೆ. ಇವುಗಳು ನಮ್ಮ ಮಾರ್ಗದರ್ಶಿಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುವುದು ಒಂದು ಮಾರ್ಗಸೂತ್ರ. ಒಂದೇ ಸಂವಿಧಾನದ ಅಡಿ, ಒಂದಾಗಿ ಹಲವು ಭಾಷೆ, ಧರ್ಮದವರು ಗುರುತಿಸಿಕೊಳ್ಳುತ್ತಿದ್ದಾರೆ ಎಂದರು.
ಇದಕ್ಕೂ ಮೊದಲು ಅವರು ಆರ್.ಎಸ್.ಎಸ್ ಸಂಸ್ಥಾಪಕ ಕೆ.ಬಿ. ಹೆಡಗೇವಾರ್ ಜನ್ಮಸ್ಥಳಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಇಲ್ಲಿನ ಸಂದರ್ಶಕರ ಪುಸ್ತಕದಲ್ಲಿ, ಭಾರತಮಾತೆಯ ಶ್ರೇಷ್ಟ ಪುತ್ರ ಕೆಬಿ ಹೆಡಗೇವಾರ್ ಅವರಿಗೆ ಗೌರವ ಸಲ್ಲಿಸಲು ಆಗಮಿಸಿದ್ದೇನೆ ಎಂದು ಬರೆದು ತಮ್ಮ ಹಸ್ತಾಕ್ಷರ ಮಾಡಿದರು.
'Today I came here to pay my respect and homage to a great son of Mother India': Former President Dr.Pranab Mukherjee's message in the visitor's book at RSS founder KB Hedgewar's birthplace in Nagpur pic.twitter.com/ax76NCzJMa
— ANI (@ANI) June 7, 2018
ಇದಕ್ಕೂ ಮುನ್ನ ಇಂದು ಬೆಳಗ್ಗೆಯಿಂದಲೇ ಕಾಂಗ್ರೆಸ್ ನಾಯಕರು ಪ್ರಣಬ್ ಮುಖರ್ಜಿ ಭೇಟಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯ ಸಭಾ ಸದಸ್ಯ ಹಾಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರು, ಪ್ರಣಬ್ ದಾ ಇದನ್ನು ನಾವು ನಿಮ್ಮಿಂದ ನಿರೀಕ್ಷಿಸಿರಲಿಲ್ಲ ಎಂದು ಟ್ವೀಟ್ ಮಾಡಿದ್ದರು.
I did not expect this from Pranab da ! https://t.co/VBqXZ8x7SE
— Ahmed Patel Memorial (@ahmedpatel) June 6, 2018
ಪ್ರಣಬ್ ಮುಖರ್ಜಿ ಅವರು ಭಾಷಣ ಆರಂಭಿಸುವುದಕ್ಕೂ ಕೆಲವೇ ಗಂಟೆಗಳ ಮೊದಲು ಕಾಂಗ್ರೆಸ್ ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಆರ್.ಎಸ್.ಎಸ್ ಕೆಲಸ ಕಾರ್ಯಗಳನ್ನು ಟೀಕಿಸಿ ಟ್ವೀಟ್ ಮಾಡಲಾಗಿತ್ತು. ಇಂದಿನ ಭೇಟಿ ವೇಳೆ ಪ್ರಣಬ್ ಮುಖರ್ಜಿ ಅವರು ಏನೆಲ್ಲಾ ಮಾತನಾಡುತ್ತಾರೋ ಎಂದು ಕಾಂಗ್ರೆಸ್ ನಾಯಕರು ಆತಂಕಗೊಳಗಾಗಿದ್ದಂತೂ ಸುಳ್ಳಲ್ಲ.
Today is a very fitting day to bring you all a primer on what the RSS really stands for. pic.twitter.com/m1oQ15nkDJ
— Congress (@INCIndia) June 7, 2018
ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಪ್ರತಿವರ್ಷದಂತೆ ಈ ಬಾರಿಯೂ ನಾಗ್ಪುರದಲ್ಲಿ ಸಂಘ ಶಿಕ್ಷಾ ವರ್ಗದ ಸಮಾರೋಪ ನಡೆಯುತ್ತಿದೆ. ಪ್ರತಿಬಾರಿಯೂ ನಾವು ಈ ದೇಶಕ್ಕೆ ಸೇವೆ ಸಲ್ಲಿಸಿದ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸುತ್ತೇವೆ. ಅದರಂತೆಯೇ ನಾವು ಈ ಬಾರಿ ಪ್ರಣಬ್ ಮುಖರ್ಜಿ ಅವರನ್ನು ಆಹ್ವಾನಿಸಿದ್ದೇವೆ. ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಕ್ಷಣ ಪ್ರಣಬ್ ಬದಲಾಗಲ್ಲ. ಪ್ರಣಬ್ ಅವರು ಪ್ರಣಬ್ ಅವರಾಗಿಯೇ ಉಳಿಯುತ್ತಾರೆ. ಆರ್ ಎಸ್‍ಎಸ್ ಆರ್ ಎಸ್‍ಎಸ್ ಆಗಿಯೇ ಉಳಿಯುತ್ತದೆ ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆಯನ್ನು ನಾವು ಬಹಳ ವರ್ಷಗಳಿಂದಲೂ ಅನುಸರಿಸುತ್ತಿದ್ದೇವೆ. ನಾವು ಭಾರತೀಯರು. ದೇಶವನ್ನು ಸಂಘಟಿಸುವುದೇ ನಮ್ಮ ಗುರಿ. ಹಾಗಾಗಿ ನಾವು ದೇಶಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸೇವೆ ಸಲ್ಲಿಸಿದವರನ್ನು ನಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.
#WATCH:Former President Pranab Mukherjee in conversation with Rashtriya Swayamsevak Sangh (RSS) chief Mohan Bhagwat at RSS founder KB Hedgewar's birthplace in Nagpur. pic.twitter.com/PDXnP5H4lE
— ANI (@ANI) June 7, 2018