ನವದೆಹಲಿ: ಅಂತರಧರ್ಮಿಯ ವಿವಾಹವಾಗಿದ್ದ ದಂಪತಿಗೆ ಪಾಸ್‍ಪೋರ್ಟ್ ನೀಡುವ ವಿಚಾರದಲ್ಲಿ ಟ್ರೋಲ್ ಆಗಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮನ್ನು ಟ್ರೋಲ್ ಮಾಡಿದವರಿಗೆ ಖಡಕ್ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಸುಷ್ಮಾ ಸ್ವರಾಜ್ ಅವರ ನಡೆಯನ್ನು ವಿರೋಧಿಸಿದ್ದ ಸೋನಮ್ ಎಂಬವರು ಟೀಕೆ ಮಾಡಿ ಟ್ವೀಟ್ ಮಾಡಿದ್ದರು. ಆದರೆ ಅವರ ಟ್ವೀಟ್ ಗೆ ತೀಕ್ಷ್ಣ ಪ್ರತಿಕ್ರಿಯೆ ಎಂಬಂತೆ ಅವರನ್ನು ಬ್ಲಾಕ್ ಮಾಡಿ ತಿರುಗೇಟು ನೀಡಿದ್ದರು. ಆದರೆ ಅವರನ್ನು ಬ್ಲಾಕ್ ಮಾಡಿ ಬಳಿಕ ಟ್ವೀಟಿಗರು ಮತ್ತೊಮ್ಮೆ ಟ್ರೋಲ್ ಮಾಡಿದ್ದು, ನಮ್ಮನ್ನು ಬ್ಲಾಕ್ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
Intezaar kyon ? Lijiye block kr diya. https://t.co/DyFy3BSZsM
— Sushma Swaraj (@SushmaSwaraj) July 3, 2018
Advertisement
ಅಂದಹಾಗೇ ಸೋನಮ್ ತಮ್ಮ ಟ್ವೀಟ್ ನಲ್ಲಿ, ಉತ್ತಮ ಆಡಳಿತ ನೀಡಲು ಬಂದಿದ್ದರು. ನೋಡಿ ಸದ್ಯ ಉತ್ತಮ ದಿನಗಳು ಬಂದಿದೆ. ಸುಷ್ಮಾ ಅವರೇ ನಾನು ನಿಮ್ಮ ಅಭಿಮಾನಿಯಾಗಿದ್ದು, ನಿಮ್ಮನ್ನು ವಿರೋಧಿಸುತ್ತೇನೆ. ಈಗ ನೀವು ನನ್ನನ್ನು ಬ್ಲಾಕ್ ಮಾಡುವ ಮೂಲಕ ಉತ್ತಮ ಬಹುಮಾನ ನೀಡಿ. ನಿಮ್ಮ ಪ್ರತಿಕ್ರಿಯೆಗೆ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಈ ಟ್ವೀಟ್ ಗೂ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್, ಇದಕ್ಕಾಗಿ ಏಕೆ ಕಾಯುತ್ತೀರಿ? ನಿಮ್ಮನ್ನು ಬ್ಲಾಕ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡುವ ಮಂದಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.
Advertisement
ಈ ಹಿಂದೆ ಇಸ್ಲಾಮಿಕ್ ಕಿಡ್ನಿ ಪಡೆದಿರುವ ಸುಷ್ಮಾ ಸ್ವರಾಜ್ ಮುಸ್ಲಿಂ ಸಮುದಾಯದ ತುಷ್ಟೀಕರಣಕ್ಕೆ ಮುಂದಾಗಿದ್ದಾರೆ ಎಂದು ಕೆಲ ಮಂದಿ ನಿಂದಿಸಿ ಟ್ರೋಲ್ ಮಾಡಿದ್ದರು. ಈ ವೇಳೆ ಟ್ವಿಟ್ಟರ್ ಪೋಲ್ ನಡೆಸಿದ್ದ ಸುಷ್ಮಾ ಅವರು ಇಂತಹ ಟ್ವೀಟ್‍ಗಳನ್ನು ನೀವು ಇಷ್ಟ ಪಡುತ್ತೀರಾ? ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಮನವಿ ಮಾಡಿದ್ದರು. ಪೋಲ್ ನಲ್ಲಿ ಸುಷ್ಮಾ ಸ್ವರಾಜ್ ಅವರ ಪರ 57% ಮಂದೊ ವೋಟ್ ಹಾಕಿ ಬೆಂಬಲ ಸೂಚಿಸಿದ್ದರು.
Advertisement
https://twitter.com/AsYouNotWish/status/1013771459615813632
ಟ್ರೋಲ್ ಮಾಡುವವರಿಗೆ ಪೋಲ್ ನೀಡುವ ಮೂಲಕ ಸುಷ್ಮಾ ಸ್ವರಾಜ್ ಉತ್ತರ ನೀಡಿದ ಬಳಿಕವೂ ಅವರ ವಿರುದ್ಧ ಹಲವರು ಟ್ರೋಲ್ ಮಾಡುತ್ತಲೇ ಇದ್ದರು. ಈ ಕುರಿತು ಹಲವರು ರಾಜಕೀಯ ನಾಯಕರು ಸುಷ್ಮಾ ಸ್ವರಾಜ್ ಅವರಿಗೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದರು. ಪ್ರಮುಖವಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಹ ಟ್ವೀಟ್ ಮಾಡಿ, ಸುಷ್ಮಾ ಅವರ ಹಿರಿಯ ರಾಜಕಾರಿಣಿ, ಅವರ ವಿರುದ್ಧ ಬಳಕೆ ಮಾಡುತ್ತಿರುವ ಭಾಷೆಯನ್ನು ವಿರೋಧಿಸುವುದಾಗಿ ಹೇಳಿದ್ದರು.
ಕೇಂದ್ರ ಗೃಹ ಸಚಿವ ರಾಜ್‍ನಾಥ್ ಸಿಂಗ್ ಸಹ ತಮ್ಮ ಸಂಪುಟ ಸಚಿವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಳಕೆ ಮಾಡಲಾಗುತ್ತಿದ್ದ ಭಾಷೆಯನ್ನು ಖಂಡಿಸಿ ಸುಷ್ಮಾ ರ ಬೆಂಬಲಕ್ಕೆ ನಿಂತಿದ್ದರು.
Strongly condemn the language used on the social media against @sushmaswaraj Ji . She is a senior politician. We must respect each other and must never indulge in any form of verbal abuse
— Mamata Banerjee (@MamataOfficial) July 2, 2018
No matter the situation or reason, nothing calls for threats of violence, disrespect & abuse. @SushmaSwaraj ji, we applaud your decision to call out the heinous trolls of your own party.https://t.co/qcB0qemRGZ
— Congress (@INCIndia) June 24, 2018
Friends : I have liked some tweets. This is happening for the last few days. Do you approve of such tweets ? Please RT
— Sushma Swaraj (@SushmaSwaraj) June 30, 2018