73 ಪ್ರಕರಣಕ್ಕೆ ಬೇಕಾಗಿದ್ದ ಅಂತರರಾಜ್ಯ ಕಳ್ಳ ಬಂಧನ

Public TV
1 Min Read
BGK Arrest

ಬಾಗಲಕೋಟೆ: ನಟೋರಿಯಸ್ ಅಂತರರಾಜ್ಯ ಕಳ್ಳನನ್ನು ಇಳಕಲ್ ಪೊಲೀಸರು ಬಂಧಿಸಿದ್ದು, ಒಟ್ಟು 1.42 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ಮಿರಜ್ ಜಿಲ್ಲೆಯ ಬೆಳಂಕಿ ಗ್ರಾಮದ ನಿವಾಸಿ ಲೇಮಲ್ಯಾ ಅಲಿಯಾಸ್ ಶೀನು ಬಂಧಿತ ಅಂತರರಾಜ್ಯ ಕಳ್ಳ. ಆರೋಪಿ ಲೇಮಲ್ಯಾ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಕಳ್ಳತನ ಮಾಡುತ್ತಿದ್ದು, ಆತನ ಬಂಧನಕ್ಕಾಗಿ ಬಲೆ ಬೀಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

BGK Arrest 1

ಲೇಮಲ್ಯಾ ವಿರುದ್ಧ ಜಿಲ್ಲೆಯ ವಿವಿಧೆಡೆ 53 ಪ್ರಕರಣ ಸೇರಿದಂತೆ ಒಟ್ಟು 73 ಕೇಸ್‍ಗಳು ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿದ್ದವು. ಹೆಸರು ಹಾಗೂ ಐಡಿ ಕಾರ್ಡ್ ಗಳನ್ನು ಬದಲಿಸಿಕೊಂಡು ಪೊಲೀಸರಿಂದ ತಪ್ಪಿಸಿಕೊಂಡು, ಕಳ್ಳತನ ಮಾಡುತ್ತಿದ್ದ. ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು ಎಸ್‍ಪಿ ಸಿ.ಬಿ.ರಿಷ್ಯಂತ್ ಅವರ ನೇತೃತ್ವ ಹಾಗೂ ಡಿಎಸ್‍ಪಿ ಎಸ್.ಬಿ.ಗಿರೀಶ್ ಮಾರ್ಗದರ್ಶನದಲ್ಲಿ ತಂಡ ರಚಿಸಲಾಗಿತ್ತು. ಚುರುಕು ಕಾರ್ಯಾಚರಣೆ ನಡೆಸುತ್ತಿದ್ದ ತಂಡವು ಇಳಕಲ್ ಪೊಲೀಸರ ಸಹಾಯದಿಂದ ಲೇಮಲ್ಯಾನನ್ನು ಬಂಧಿಸಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿ 4 ಪ್ರಕರಣಗಳನ್ನು ಭೇದಿಸಲಾಗಿದೆ. ಉಳಿದ ಪ್ರಕರಣಗಳ ಕುರಿತು ವಿಚಾರಣೆ ನಡೆಯುತ್ತಿದ್ದು, ಬಂಧಿತನಿಂದ 1,42,800 ರೂ. ಮೌಲ್ಯದ 40 ಗ್ರಾಂ ಚಿನ್ನ, 27 ಗ್ರಾಂ ಬೆಳ್ಳಿ ಆಭರಣ ಹಾಗೂ 20 ಸಾವಿರ ರೂ. ಮೌಲ್ಯದ ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *