ಬೆಂಗಳೂರು: ನಗರದಲ್ಲಿ ಮೊಬೈಲ್ ಫೋನ್ ಸುಲಿಗೆ ಹಾಗೂ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಜಾಲದ ಒಟ್ಟು 10 ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕಿಜರ್ ಪಾಷಾ, ಆರೀಫ್, ನವಾಜ್ ಶರೀಫ್, ಅಫ್ಜಲ್ ಶರೀಫ್, ಆಸ್ಸಾಂ, ಕಲೀಂ, ಸಲ್ಮಾನ್, ಸಯ್ಯದ್ ಅಕ್ಬರ್ ಹಾಗೂ ಅಮೀರ್ ಜಮೀರ್ ಬಂಧಿತ ಆರೋಪಿಗಳು. ಬಂಧಿತರಿಂದ 1.25 ಕೋಟಿ ರೂ. ಮೌಲ್ಯದ ಒಟ್ಟು 563 ಮೊಬೈಲ್ ಫೋನ್‍ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Advertisement
Advertisement
ಈ ಜಾಲದಲ್ಲಿ ಕಿಜರ್ ಪಾಷಾ, ನವಾಜ್, ಅಫ್ಜಲ್ ಹಾಗೂ ಕಲೀಂ ಬೈಕ್ ಹಾಗೂ ಆಟೋ ಬಳಸಿ ನಗರದ ವಿವಿಧ ಭಾಗದಲ್ಲಿ ಸುತ್ತಾಡುತ್ತಿದ್ದರು. ಈ ವೇಳೆ ಒಂಟಿಯಾಗಿ ಸಿಗುತ್ತಿದ್ದ ಮಹಿಳೆಯರು ಹಾಗೂ ಯುವಕರನ್ನು ಹೆದರಿಸಿ ಮೊಬೈಲ್ ಫೋನ್‍ಗಳನ್ನು ಸುಲಿಗೆ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಜನದಟ್ಟನೆ ಪ್ರದೇಶದಲ್ಲಿ ಮೊಬೈಲ್ ಫೋನ್‍ಗಳನ್ನು ಎಗರಿಸುತ್ತಿದ್ದರು.
Advertisement
ಬೆಂಗಳೂರಿನಲ್ಲಿ ಕದ್ದ ಮೊಬೈಗಳನ್ನು ಆರೀಫ್, ಆಸೀಫ್, ಸಯ್ಯದ್ ಅಕ್ಬರ್ ಕಡಿಮೆ ಬೆಲೆಗೆ ಖರೀದಿಸಿ ಹೊರ ರಾಜ್ಯಕ್ಕೆ ರವಾನೆ ಮಾಡುತ್ತಿದ್ದರು. ಹೈದರಾಬಾದ್ ಮೂಲದ ಅಮೀರ್ ಜಮೀರ್ ಕಡಿಮೆ ಬೆಲೆಗೆ ಮೊಬೈಲ್‍ಗಳನ್ನು ಪಡೆದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ಜಾಲದ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಆರೋಪಿಗಳ ಬಂಧನಕ್ಕೆ ಪ್ಲಾನ್ ರೂಪಿಸಿದ್ದರು.
Advertisement
ಈ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ಪೊಲೀಸ್ ಪೇದೆ ರಂಗನಾಥ್ ಹೊತ್ತಿದ್ದರು. ಈ ಮೂಲಕ ಮೊಬೈಲ್ ಕಳೆದುಕೊಂಡ ವ್ಯಕ್ತಿಗಳನ್ನು ನೀಡಿದ್ದ ದೂರಿನ ಮಾಹಿತಿ ಮೇರೆಗೆ ರಂಗನಾಥ್ ಮೊಬೈಲ್ ಟ್ರ್ಯಾಪ್ ಮಾಡಿದ್ದರು. ಹೆಚ್ಚಿನ ಮೊಬೈಲ್‍ಗಳು ಹೈದರಾಬಾದ್ ಲೋಕೇಶನ್ ತೋರಿಸುತ್ತಿದ್ದವು. ಬಳಿಕ ಕಾರ್ಯಾಚರಣೆ ಚುರುಕುಗೊಳಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರ ಬಳಿ ಎಂಐ ಕಂಪನಿಯ 92 ಮೊಬೈಲ್, ವಿವೋ ಕಂಪನಿಯ 57 ಮೊಬೈಲ್, ಒಪ್ಪೋ ಕಂಪನಿಯ 44 ಮೊಬೈಲ್, ಆ್ಯಪಲ್ ಕಂಪನಿಯ 12, ಸ್ಯಾಮ್ಸಂಗ್ ಕಂಪನಿಯ 81 ಮೊಬೈಲ್, ರೆಡ್‍ಮಿ 29 ಮೊಬೈಲ್ ಸೇರಿ ಒಟ್ಟು 563 ಮೊಬೈಲ್‍ಗಳು ಸಿಕ್ಕಿದ್ದು, ಅವುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿಚಾರಣೆಯನ್ನು ಮುಂದುವರಿಸಿದ್ದಾರೆ.