ಜೈಪುರ: 10ನೇ ತರಗತಿಯ ವಿದ್ಯಾರ್ಥಿಗೆ (10 Class Student) ಸಹಪಾಠಿಯೊಬ್ಬ ಶಾಲೆಯಲ್ಲೇ ಚಾಕುವಿನಿಂದ ಇರಿದ ಶಾಕಿಂಗ್ ಘಟನೆ ರಾಜಸ್ಥಾನದ ಉದಯಪುರದ (Udaipur) ಮಧುಬನ್ ಪ್ರದೇಶದಲ್ಲಿ ನಡೆದಿದೆ.
ಆರೋಪಿ ಬಾಲಕನನ್ನು ಪೊಲೀಸರು (Police) ಬಂಧಿಸಿದ್ದಾರೆ. ಈ ವಿಚಾರ ತಿಳಿದ ಬೆನ್ನಲ್ಲೇ ಹಿಂಸಾಚಾರ ನಡೆದಿದ್ದು ಜಿಲ್ಲಾಡಳಿತ ಈಗ 144 ಸೆಕ್ಷನ್ ಜಾರಿ ಮಾಡಿದೆ. ಅಷ್ಟೇ ಅಲ್ಲದೇ ಉದಯ್‌ಪುರದಲ್ಲಿ ಶುಕ್ರವಾರ ರಾತ್ರಿ 10 ಗಂಟೆಯಿಂದ 24 ಗಂಟೆಗಳ ಕಾಲ ಇಂಟರ್‌ನೆಟ್ ಸೇವೆಯನ್ನು (Internet Suspended) ಸ್ಥಗಿತ ಮಾಡಿದೆ. ಇದನ್ನೂ ಓದಿ: ಐಫೋನ್ ತಯಾರಕ ಫಾಕ್ಸ್‌ಕಾನ್ ಕಂಪನಿ ಮುಖ್ಯಸ್ಥನ ಜೊತೆ ಸಿಎಂ, ಡಿಸಿಎಂ ಡಿನ್ನರ್
Advertisement
Advertisement
#WATCH | Rajasthan: Arvind Poswal, District Collector Udaipur says, “This incident took place in the early hours today. We received info about a fight between two children, in which one child was attacked on his thighs with a knife. The wound was deep and the child was… pic.twitter.com/m3fL0GE6Ig
— ANI MP/CG/Rajasthan (@ANI_MP_CG_RJ) August 16, 2024
Advertisement
ಹಿಂದೂ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದ ಕನಿಷ್ಠ ಮೂರು ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಇದನ್ನೂ ಓದಿ: ರಾಜ್ಯದ 2 ಮೆಟ್ರೋ ಕಾರಿಡಾರ್‌ಗಳಿಗೆ ಕೇಂದ್ರ ಅನುಮೋದನೆ: ಪ್ರಹ್ಲಾದ್ ಜೋಶಿ
Advertisement
Udaipur stabbing case | District administration issues order to shut down the internet for the next 24 hours from 10:00 pm tonight: Rajasthan Government pic.twitter.com/GzvLdbX7me
— ANI MP/CG/Rajasthan (@ANI_MP_CG_RJ) August 16, 2024
ವಿದ್ಯಾರ್ಥಿಗಳ ಮಧ್ಯೆ ಸಣ್ಣ ವಿಚಾರಕ್ಕೆ ನಡೆದ ಗಲಾಟೆ ನಡೆದಾಗ ಮತ್ತೊಬ್ಬ ವಿದ್ಯಾರ್ಥಿ ಚಾಕು ಇರಿದಿದ್ದಾನೆ. ಸಂತ್ರಸ್ತ ಬಾಲಕ ಈಗ ತುರ್ತು ನಿಗಾ ಘಟಕದಲ್ಲಿದ್ದು, ಸ್ಥಿತಿ ಗಂಭೀರವಾಗಿದೆ. ಗಾಯಾಳು ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸ್ಥಳೀಯ ರಾಜಕೀಯ ಮುಖಂಡರು ಆಗಮಿಸುತ್ತಿದ್ದಾರೆ