ಗುವಾಹಟಿ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿಗಾಗಿ ಲಿಖಿತ ಪರೀಕ್ಷೆಯಲ್ಲಿ ಸಂಭವನೀಯ ದುಷ್ಕೃತ್ಯಗಳನ್ನು ತಡೆಗಟ್ಟಲು ಅಸ್ಸಾಂನ 27 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಭಾನುವಾರ ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಳಿಸಲಾಯಿತು.
ಆಡಳಿತದ ಆದೇಶದ ವಿರುದ್ಧ ಗೌಹಾಟಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಆದರೆ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತು. ಪರೀಕ್ಷಾ ಸಮಯದಲ್ಲಿ ಇಂಟರ್ನೆಟ್ ಸೇವೆಗಳನ್ನು ಅಧಿಕಾರಿಗಳು ಸ್ಥಗಿತಗೊಳಿಸಿದರು. ಇದನ್ನೂ ಓದಿ: 3,700 ಕೆ.ಜಿ ಸ್ಫೋಟಕ, 10 ಸೆಕೆಂಡ್- 1,200 ಕೋಟಿಯ ದೈತ್ಯ ಅವಳಿ ಕಟ್ಟಡ ಉಡೀಸ್
Advertisement
Advertisement
ಪರೀಕ್ಷೆಗಳು ನಡೆಯುತ್ತಿರುವ ಎಲ್ಲಾ 27 ಜಿಲ್ಲೆಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಸಹ ವಿಧಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಸರ್ಕಾರದ ವಿವಿಧ ಇಲಾಖೆಗಳ (ಆಗಸ್ಟ್ 21, 28 ಮತ್ತು ಸೆಪ್ಟೆಂಬರ್ 11) ಸುಮಾರು 30,000 ಗ್ರೇಡ್-III ಮತ್ತು -IV ಹುದ್ದೆಗಳ ನೇಮಕಾತಿಗೆ 14.30 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ರಾಷ್ಟ್ರಕ್ಕಾಗಿ ಖಾದಿ, ಆದ್ರೆ ರಾಷ್ಟ್ರಧ್ವಜಕ್ಕೆ ಚೈನೀಸ್ ಪಾಲಿಸ್ಟರ್ : ಮೋದಿ ವಿರುದ್ಧ ರಾಹುಲ್ ಟೀಕೆ
Advertisement
ಗ್ರೇಡ್-IV ಪರೀಕ್ಷೆಗಳು ಆಗಸ್ಟ್ 21 ರಂದು ಎರಡು ಪಾಳಿಗಳಲ್ಲಿ ನಡೆಯಿತು. ಗ್ರೇಡ್-III ಪರೀಕ್ಷೆಗಳು ಇಂದು ನಡೆಯುತ್ತಿವೆ. ಗ್ರೇಡ್-III ಅಡಿಯಲ್ಲಿ ಹೆಚ್ಚಿನ ಹುದ್ದೆಗಳಿಗೆ ಪರೀಕ್ಷೆಗಳನ್ನು ಸೆಪ್ಟೆಂಬರ್ 11 ರಂದು ನಿಗದಿಪಡಿಸಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಅಸ್ಸಾಂನ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ನಡೆಸುತ್ತಿದೆ.