ಕ್ಯಾಲಿಫೋರ್ನಿಯಾ: ಇನ್ನು ಮುಂದೆ ನೀವು ಫೇಸ್ ಬುಕ್ ನಲ್ಲಿ ಪಾಸ್‍ವರ್ಡ್ ಗಳನ್ನು ಒತ್ತಿ ಖಾತೆಯನ್ನು ಓಪನ್ ಮಾಡುವ ಅಗತ್ಯ ಇಲ್ಲ. ಬದಲಾಗಿ ಕಂಪ್ಯೂಟರ್/ಮೊಬೈಲ್ ಮುಂದೆ ನೀವು ಮುಖವನ್ನು ತೋರಿಸಿದರೆ ನಿಮ್ಮ ಖಾತೆ ಓಪನ್ ಆಗುತ್ತದೆ.
ಹೌದು. ವಿಶ್ವದ ನಂಬರ್ ಒನ್ ಸಾಮಾಜಿಕ ಜಾಲತಾಣವಾಗಿರುವ ಫೇಸ್‍ಬುಕ್‍ಫೇಸ್‍ಲಾಕ್ ಮೂಲಕ ಬಳಕೆದಾರರ ಖಾತೆ ಓಪನ್ ಆಗುವಂತಹ ವಿಶೇಷತೆಯನ್ನು ಪರೀಕ್ಷೆ ಮಾಡುತ್ತಿದ್ದು, 2018ರ ಮೇ ತಿಂಗಳ ಅಂತ್ಯದಲ್ಲಿ ಈ ಸೇವೆ ಗ್ರಾಹಕರಿಗೆ ಲಭ್ಯವಾಗುವ ಸಾಧ್ಯತೆಯಿದೆ.
Advertisement
Advertisement
ಟೆಕ್ ಸುದ್ದಿಗಳನ್ನು ಪ್ರಕಟಿಸುವ ಟೆಕ್‍ಕ್ರಂಚ್ ವೆಬ್‍ಸೈಟ್, ನಮ್ಮ ಕಂಪನಿಯು ಕೋಟ್ಯಾಂತರ ಬಳಕೆದಾರನ್ನು ಹೊಂದಿದೆ. ದಿನೇ ದಿನೇ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಹೀಗಾಗಿ ನಮ್ಮ ಕಂಪನಿಯ ಬಳಕೆದಾರರ ಖಾತೆಗೆ ಮತ್ತಷ್ಟು ಸುರಕ್ಷೆ ನೀಡಲು ಹೊಸ ಮಾದರಿಯನ್ನು ಪರೀಕ್ಷೆ ಮಾಡಲಾಗುತ್ತಿದೆ ಎಂದು ಫೇಸ್‍ಬುಕ್ ತಿಳಿಸಿದೆ ಎಂದು ವರದಿ ಮಾಡಿದೆ.
Advertisement
ಫೇಸ್‍ಬುಕ್ ಖಾತೆಯನ್ನು ಇಷ್ಟು ದಿನ ಪಾಸ್‍ವರ್ಡ್ ಮೂಲಕ ತೆರೆಯಬೇಕಾಗಿತ್ತು. ಈ ವೇಳೆ ಅನೇಕರು ತಮ್ಮ ಪಾಸ್‍ವರ್ಡ್‍ನ್ನು ನಕಲು ಮಾಡುವ ಸಂಭವವಿತ್ತು. ಹೀಗಾಗಿ ಖಾತೆದಾರರ ಮುಖವೇ ಪಾಸ್‍ವರ್ಡ್ ಮಾಡಲಾಗುತ್ತಿರುವ ಪ್ರಯತ್ನ ಸದ್ಯ ಅನ್ವೇಷಣೆ ಹಂತದಲ್ಲಿದ್ದು, ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದೆ. ಫೇಸ್‍ಬುಕ್ ಖಾತೆದಾರರಿಗೆ ಸುಲಭವಾಗಿ ಬಳಕೆ ಮಾಡುವ ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.
Advertisement
ವರದಿ ಹೇಳುವಂತೆ, ಕೆಲವು ಸಂದರ್ಭಗಳಲ್ಲಿ ಬಳಕೆದಾರರ ಖಾತೆಯನ್ನು ಅನ್‍ಲಾಕ್ ಮಾಡುವ ವೇಳೆ ಬಳಕೆದಾರರ ಗುರುತು ಕೇಳುತ್ತದೆ. ಬಳಕೆದಾರರ ಕೋಡ್‍ನ್ನು ಸ್ವೀಕರಿಸಿ ವಿಶ್ವಾಸಾರ್ಹ ಸ್ನೇಹಿತರನ್ನು ಗುರುತಿಸಲು ಇದು ಸಹಾಯ ಮಾಡುತ್ತದೆ. ಇಷ್ಟೆ ಅಲ್ಲದೇ ಬಳಕೆದಾರರ ಮುಖವನ್ನು ಗುರುತಿಸಲು ವಿಡಿಯೋ ಚಾಟ್ ತರಲು ಫೇಸ್‍ಬುಕ್ ಮುಂದಾಗುತ್ತಿದೆ ಎಂದು ಹೇಳಿದೆ.