ಇಂಟರ್‌ನೆಟ್ ಸ್ಥಗಿತ ಅಪಾಯಕಾರಿ, ನಿರ್ಬಂಧ ಹೇರುವುದನ್ನು ನಿಲ್ಲಿಸಿ: ವಿಶ್ವಸಂಸ್ಥೆ

Public TV
1 Min Read
MOBILE PHONE TOWER

ನ್ಯೂಯಾರ್ಕ್: ಇಂಟರ್‌ನೆಟ್ ಸ್ಥಗಿತಗೊಳಿಸುವುದು ಅಥವಾ ಅಡೆತಡೆಗಳನ್ನು ಹೇರುವುದರಿಂದ ತೀವ್ರವಾದ ಪರಿಣಾಮಗಳು ಉಂಟಾಗಬಹುದು. ಹೀಗಾಗಿ ದೇಶಗಳು ಇಂಟರ್‌ನೆಟ್ ಮೇಲೆ ನಿರ್ಬಂಧ ಹೇರುವುದನ್ನು ಕೂಡಲೇ ನಿಲ್ಲಿಸಬೇಕೆಂದು ವಿಶ್ವಸಂಸ್ಥೆ ಕರೆ ನೀಡಿದೆ.

ಇಂಟರ್‌ನೆಟ್ ಸ್ಥಗಿತಗೊಳಿಸುವಿಕೆಯಿಂದ ಲಕ್ಷಾಂತರ ಜನರ ಜೀವನ ಹಾಗೂ ಮಾನವ ಹಕ್ಕುಗಳ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಶೋರೂಂ ಬೆಂಕಿಗಾಹುತಿ

United Nations 4

ಇಂಟರ್‌ನೆಟ್ ಹಾಗೂ ದೂರಸಂಪರ್ಕ ಸೇವೆಗಳು ಸ್ಥಗಿತಗೊಂಡರೆ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳು ತಮ್ಮ ವೈದ್ಯರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದು, ಮತದಾರರು ಅಭ್ಯರ್ಥಿಗಳ ಮಾಹಿತಿಯಿಂದ ವಂಚಿತರಾಗುವುದು, ಕರಕುಶಲ ತಯಾರಕರು ಗ್ರಾಹಕರಿಂದ ದೂರ ಉಳಿಯುವುದು ಹಾಗೂ ಹಿಂಸಾತ್ಮಕ ದಾಳಿಯ ಸಂದರ್ಭ ಶಾಂತಿಯನ್ನು ಸ್ಥಾಪಿಸಲು ಸಹಾಯಕ್ಕೆ ಅಧಿಕಾರಿಗಳನ್ನು ಕರೆಸುವುದು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಈ ಬಗ್ಗೆ ವಿಶ್ವಸಂಸ್ಥೆ ಹಕ್ಕುಗಳ ಮುಖ್ಯಸ್ಥ ಮಿಚೆಲ್ ಬ್ಯಾಚೆಲೆಟ್, ಡಿಜಿಟಲ್ ಜಗತ್ತು ಮಾನವ ಜಗತ್ತಿಗೆ ಅತ್ಯಗತ್ಯವಾಗಿದೆ. ಇಂತಹ ಸಮಯದಲ್ಲಿ ಸ್ಥಗಿತಗಳಾದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ. ಇದನ್ನೂ ಓದಿ: ಪ್ರತಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹಾಗೆ ಝೆಡ್ ಶ್ರೇಣಿ ಭದ್ರತೆ

Malaysia Internet

ಇಂಟರ್‌ನೆಟ್ ಸ್ಥಗಿತಗೊಂಡರೆ, ಲೆಕ್ಕಿಸಲಾಗದಷ್ಟು ಹಾನಿ ಉಂಟಾಗುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಜಾಗತಿಕ ಗಮನವನ್ನು ಸೆಳೆದ ಮೊದಲ ಮುಖ್ಯ ಇಂಟರ್‌ನೆಟ್ ಸ್ಥಗಿತ 2011ರಲ್ಲಿ ಈಜಿಪ್ಟ್‌ನಲ್ಲಿ ನಡೆದಿತ್ತು. ತಹ್ರೀರ್ ಸ್ಕ್ವೇರ್ ಪ್ರದರ್ಶನದ ಸಮಯದಲ್ಲಿ ಇಂಟರ್‌ನೆಟ್ ಸ್ಥಗಿತಗೊಂಡು, ಹಿಂಸಾತ್ಮಕ ಘಟನೆಗಳು ನಡೆದವು. ಹಲವು ಹತ್ಯೆಗಳು ನಡೆದು, ನೂರಾರು ಜನರು ಬಂಧನಕ್ಕೊಳಗಾಗಿದ್ದರು ಎಂದು ತಿಳಿಸಿದರು.

ಇಂತಹ ಸ್ಥಗಿತಗಳು ಸಂಭವಿಸಿತು ಎಂದಾದಲ್ಲಿ, ಜನರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾರೆ. ಇದರಿಂದ ಜನರನ್ನು ನಿಯಂತ್ರಿಸಲಾಗದಷ್ಟು ಮಟ್ಟದಲ್ಲಿ ಹಕ್ಕುಗಳ ಉಲ್ಲಂಘನೆ, ಹತ್ಯೆಗಳು ನಡೆಯಬಹುದು ಎಂದು ಹೇಳಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *