ನವದೆಹಲಿ: ಪುಟ್ಟ ಬಾಲಕಿಯೊಬ್ಬಳು ದೇಶ ಕಾಯುವ ಸೈನಿಕರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ ಕೈಬರಹದ ಗ್ರೀಟಿಂಗ್ಸ್ ಕಾರ್ಡ್ ಎಲ್ಲರ ಮನ ಗೆದ್ದಿದೆ. ದೆಹಲಿಯ ಚಾಂದಿನಿ ಚೌಕ್ ಮೆಟ್ರೋ ರೈಲು ನಿಲ್ದಾಣದಲ್ಲಿದ್ದ ಭದ್ರತಾ ಸಿಬ್ಬಂದಿಯ ಕೈಗೆ ಪುಟ್ಟ ಬಾಲಕಿ ಮಾನ್ವಿ ತನ್ನದೇ ಕೈ ಬರಹದಲ್ಲಿರುವ ಶುಭಾಶಯ ಪತ್ರ ನೀಡಿದ್ದಾರೆ. ಈ ಪತ್ರವನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿ.ಐ.ಎಸ್.ಎಫ್) ಟ್ವೀಟ್ ಮಾಡಿದ್ದು, ಎಲ್ಲರೂ ಪುಟ್ಟ ಬಾಲಕಿಯ ಮುದ್ದಾದ ಕೈಬರಹದ ಸಂದೇಶವನ್ನು ಹೊಗಳುತ್ತಿದ್ದಾರೆ.
A heartwarming gesture!
A little girl gave Happy #Diwali greeting card to CISF personnel securing Chandni Chowk Metro Station. She thanked all soldiers for serving the nation with dedication. #HappyDiwali #bonding pic.twitter.com/JuXPhFRj5T
— CISF (@CISFHQrs) October 28, 2019
Advertisement
ಶುಭಾಶಯ ಪತ್ರದಲ್ಲೇನಿದೆ…?
‘ಪ್ರೀತಿಯ ಪೊಲೀಸ್ ಅಧಿಕಾರಿಗಳು ಹಾಗೂ ಸೈನಿಕರೇ, ನಿಮ್ಮ ಶೌರ್ಯ ಮತ್ತು ತ್ಯಾಗದ ಬಗ್ಗೆ ನಮಗೆ ಹೆಮ್ಮೆಯಿದೆ. ನೀವು ಏಕಾಂಗಿ ಎಂದು ಯಾವತ್ತೂ ಅಂದುಕೊಳ್ಳಬೇಡಿ. ಇಡೀ ರಾಷ್ಟ್ರ ನಿಮ್ಮ ಹಾಗೂ ನಿಮ್ಮ ಕುಟುಂಬದ ಜೊತೆಗಿದೆ. ನಮ್ಮ ದೇಶದ ಬಗೆಗಿನ ನಿಮ್ಮ ಸಮರ್ಪಣಾ ಮನೋಭಾವಕ್ಕೆ ನಿಮಗೆ ಥ್ಯಾಂಕ್ಸ್. ನನಗೆ ನಿಮ್ಮ ಬಗ್ಗೆ ಹೆಮ್ಮೆಯಿದೆ’ ಎಂದು ಬರೆದಿರುವ ಮಾನ್ವಿ ‘ಶುಭ ದೀಪಾವಳಿ’ ಎಂಬ ಸಂದೇಶವನ್ನೂ ಬರೆದಿದ್ದಾಳೆ. ಈ ಪತ್ರ ಈಗ ಸಿ.ಐ.ಎಸ್.ಎಫ್ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮೂಲಕ ಹೊರಬಂದಿದೆ.
Advertisement
Awww…. that's SO cute and thoughtful of her
— smita mishra ???????? (@missartola) October 28, 2019
Advertisement
ಮಾನ್ವಿಯ ಈ ಪತ್ರವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಈ ಶುಭಾಶಯ ತುಂಬಾ ಮುದ್ದಾಗಿದೆ ಎಂದು ಕೆಲವರು ಹೇಳಿದರೆ, ಸಿಐಎಸ್‍ಎಫ್ ಯೋಧರು ಈ ಶುಭಾಶಯಕ್ಕೆ ಅರ್ಹರು. ಈ ಪತ್ರ ತುಂಬಾ ಖುಷಿ ನೀಡಿತು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
Advertisement
ಎಷ್ಟು ಮುದ್ದಾದ ಬರಹ. ಶುಭ ದೀಪಾವಳಿ, ಜೈ ಹಿಂದ್…. ಪುಟ್ಟ ಹುಡುಗಿಯ ದೀಪಾವಳಿಯ ಶುಭಾಶಯ ನೋಡಿ ಖುಷಿಯಾಯಿತು ಎಂದು ಇನ್ನು ಕೆಲವರು ಬರೆದಿದ್ದಾರೆ.
https://twitter.com/dilip98765/status/1188757712345034753?ref_src=twsrc%5Etfw%7Ctwcamp%5Etweetembed%7Ctwterm%5E1188757712345034753&ref_url=https%3A%2F%2Fwww.indiatoday.in%2Ftrending-news%2Fstory%2Fdelhi-girl-gifts-handmade-greeting-card-with-touching-note-to-cisf-jawan-on-diwali-internet-is-emotional-1613579-2019-10-29