ಅಗರ್ತಲಾ: ಇಂಟರ್ ನೆಟ್ ಅನ್ನೋದು ಹೊಸ ಆವಿಷ್ಕಾರವೇನು ಅಲ್ಲ. ಮಹಾಭಾರತದ ಕಾಲದಲ್ಲೂ ಇತ್ತು ಎಂದು ತ್ರಿಪುರಾ ಸಿಎಂ ಬಿಪ್ಲಾಬ್ ಕುಮಾರ್ ದೆಬ್ ಹೇಳಿದ್ದಾರೆ.
ಗಣಕೀಕರಣ ಮತ್ತು ಸುಧಾರಣೆಗಳ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಸಂವಹನ ತಂತ್ರಜ್ಞಾನ ಬೆಳೆದು ಬಂದ ದಾರಿಗೆ ಹೊಸ ತಿರುವನ್ನು ಕೊಟ್ಟಿದ್ದಾರೆ.
Advertisement
ಧೃತರಾಷ್ಟ್ರನಿಗೆ ಕುರುಕ್ಷೇತ್ರದ 14 ದಿನಗಳ ಯುದ್ಧಭೂಮಿಯ ಘಟನೆಯನ್ನು ಸಂಜಯ ನಿರೂಪಿಸಿದ್ದಾನೆ ಅಂದಲ್ಲಿ ಆಗಲೇ ತಂತ್ರಜ್ಞಾನ ಇತ್ತು ಎನ್ನುವುದು ಗೊತ್ತಾಗುತ್ತದೆ. ಅಂದೇ ಇಂಟರ್ ನೆಟ್, ಉಪಗ್ರಹ ಇತ್ತು. ಸಾವಿರ ವರ್ಷಗಳ ಹಿಂದೇನೆ ತಂತ್ರಜ್ಞಾನದ ಆವಿಷ್ಕಾರ ಆಗಿದೆ. ಈಗ ಅದನ್ನು ಈಗ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‍ಐಸಿ) ಬಳಸುತ್ತಿದೆ. ಪ್ರಪಂಚಾದ್ಯಂತ ತಂತ್ರಜ್ಞಾನವನ್ನು ಜನ ಬಳಸುತ್ತಿದ್ದಾರೆ. ತಂತ್ರಜ್ಞಾನ ನಮ್ಮದು. ಭಾರತ ಸಂಸ್ಕ್ರತಿ ಪ್ರಧಾನ ದೇಶವಾಗಿದೆ ಎಂದರು.
Advertisement
ಡಿಜಿಟಲೀಕರಣಕ್ಕೆ ಹೆಚ್ಚು ಒತ್ತು ಕೊಡುತ್ತಿರುವ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ಮೋದಿ ಪ್ರಧಾನಿಯಾದ ನಂತರವೇ ದೇಶದಲ್ಲಿ ತಂತ್ರಜ್ಞಾನದ ಬಳಕೆ ಜಾಸ್ತಿಯಾಗಿದೆ ಎಂದರು.
Advertisement
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಪ್ರಧಾನಿಗಳು ಸಂಸದರನ್ನು, ಮುಖ್ಯಮಂತ್ರಿಗಳನ್ನು ಹೆಚ್ಚು ಬಳಸುವಂತೆ ಪ್ರೇರೇಪಣೆ ನೀಡುವುದು ನಮ್ಮ ಭಾಗ್ಯ ಎಂದು ತಿಳಿಸಿದರು.
Advertisement
ಪಡಿತರ ವ್ಯವಸ್ಥೆಯ ಡಿಜಿಟಲೀಕರಣದಿಂದಾಗಿ ಹೆಚ್ಚು ಪಾರದರ್ಶಕತೆಯನ್ನು ಕಾಣಬಹುದಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ 97.72% ರಷ್ಟು ಪಡಿತರ ಚೀಟಿಗಳನ್ನು ಆಧಾರ್ ಜೊತೆ ಸೇರಿಸಲಾಗಿದೆ ಎಂದರು.
ತಂತ್ರಜ್ಞಾನ ಶ್ರೀಮಂತರಿಗಷ್ಟೆ ಸೀಮಿತವಾಗಬಾರದು. ಬಡವರಿಗೂ ತಲುಪಬೇಕು. ಪಡಿತರ ವ್ಯವಸ್ಥೆ ಡಿಜಿಟಲೀಕರಣದಿಂದಾಗಿ ಬಡವರಿಗೆ ಸಹಾಯವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ತ್ರಿಪುರ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಪಣತೊಟ್ಟಿದ್ದೇವೆ ಎಂದು ತಿಳಿಸಿದರು.
Narrow minded people find it tough to believe this. They want to belittle their own nation & think highly of other countries. Believe the truth. Don't get confused & don't confuse others: Tripura CM Biplab Deb on his claim 'internet & satellite existed since Mahabharata era' pic.twitter.com/pVAMCTZHEo
— ANI (@ANI) April 18, 2018