ಕಾಬೂಲ್: ಬುಡಕಟ್ಟು ಜನಾಂಗದ ತಂದೆಯೊಬ್ಬರು ತನ್ನ ಮಗಳನ್ನು ವೈದ್ಯೆಯನ್ನಾಗಿ ಮಾಡಲು ಪ್ರತಿದಿನ 12 ಕಿ.ಮೀ ಬೈಕಿನಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಶಾಲೆ ಮುಗಿಯುವವರೆಗೂ 4 ಗಂಟೆಗಳ ಅಲ್ಲಿಯೇ ಕಾದು ಮಗಳನ್ನು ಮತ್ತೆ ತನ್ನ ಜೊತೆಯಲ್ಲಿ ಕರೆದುಕೊಂಡು ಬರುತ್ತಿದ್ದಾರೆ. ತಂದೆಯ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸೈಫ್ ಅಲಿ ಎಂಬವರು ತಮ್ಮ ಟ್ವಿಟ್ಟರಿನಲ್ಲಿ ತಂದೆ ಮಿಯಾ ಖಾನ್ ಅವರ ಕತೆಯನ್ನು ಹಂಚಿಕೊಂಡಿದ್ದಾರೆ. ಮಿಯಾ ತನ್ನ ಮಗಳ ಜೊತೆಗಿರುವ ಫೋಟೋವನ್ನು ಕೂಡ ಟ್ವೀಟ್ ಮಾಡಿದ್ದಾರೆ. ಮಿಯಾ ಖಾನ್ ಪ್ರತಿದಿನ 12 ಕಿ.ಮೀ ಬೈಕಿನಲ್ಲಿ ಸಂಚರಿಸುವ ಮೂಲಕ ತನ್ನ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಾರೆ. ಇದರ ಜೊತೆಗೆ ಶಾಲೆ ಮುಗಿಯುವವರೆಗೂ ನಾಲ್ಕು ಗಂಟೆ ಅಲ್ಲಿಯೇ ಕಾದು ಕುಳಿತು ತಮ್ಮ ಮಗಳನ್ನು ಜೊತೆಯಲ್ಲಿ ಕರೆದುಕೊಂಡು ಬರುತ್ತಾರೆ. ಇದನ್ನೂ ಓದಿ: ಐಎಎಸ್ ಕನಸು ಕಂಡಿರುವ ಮಗನ ವಿದ್ಯಾಭ್ಯಾಸಕ್ಕೆ ತಾಯಿಯ ಹೆಗಲೇ ಆಸರೆ
Advertisement
https://twitter.com/SafiAli94/status/1201937353725677570?ref_src=twsrc%5Etfw%7Ctwcamp%5Etweetembed%7Ctwterm%5E1201937353725677570&ref_url=https%3A%2F%2Fwww.indiatoday.in%2Ftrending-news%2Fstory%2Fpashtun-father-hailed-as-real-hero-by-the-internet-for-a-delightful-reason-you-must-read-1625106-2019-12-04
Advertisement
ಮಿಯಾ ಖಾನ್ ವಿದ್ಯಾಭ್ಯಾಸ ಮಾಡಿಲ್ಲ. ತಮ್ಮ ಗ್ರಾಮದಲ್ಲಿ ಯಾವುದೇ ವೈದ್ಯರಿಲ್ಲದ ಕಾರಣ ಅವರು ತಮ್ಮ ಮಗಳಿಗೆ ವೈದ್ಯೆಯನ್ನಾಗಿ ಮಾಡಬೇಕು ಎಂದು ಬಯಸಿದ್ದಾರೆ. ಇವರೇ ನಿಜವಾದ ಹೀರೋ ಎಂದು ಸೈಫ್ ಅಲಿ ತನ್ನ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ. ಸೈಫ್ ಅವರ ಈ ಪೋಸ್ಟ್‍ಗೆ ಹಲವು ಮಂದಿ ರೀ-ಟ್ವೀಟ್ ಮಾಡುವ ಮೂಲಕ ಮಿಯಾ ಖಾನ್ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ಚಿತ್ರದುರ್ಗದ ‘ಮಹಾತಾಯಿ’ ಸಹಾಯಕ್ಕೆ ನಿಂತ ಶಾಸಕ
Advertisement
ಶಿಕ್ಷಣ ಪಡೆಯಲು ಮತ್ತೊಂದು ಊರಿಗೆ ಬರಬೇಕು. ಆದ್ರೆ ಗ್ರಾಮಕ್ಕೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಮಿಯಾ ಖಾನ್ ಮಗಳನ್ನು ಶಾಲೆಗೆ ಕರೆ ತರುತ್ತಾರೆ. ಶಾಲೆ ಮುಗಿಯವರೆಗೂ ಅಲ್ಲಿಯೇ ಕುಳಿತು ಮಗಳನ್ನು ವಾಪಸ್ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಾರೆ ಎಂದು ವರದಿಯಾಗಿದೆ.