ನವದೆಹಲಿ: ಎಸ್‍ಬಿಐ ಗ್ರಾಹಕರೇ ನೀವು ಇಂಟರ್ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಬೇಕೆಂದರೆ ನಿಮ್ಮ ಮೊಬೈಲ್ ನಂಬರ್ ನನ್ನು ನಿಮ್ಮ ಎಸ್‍ಬಿಐ ಬ್ಯಾಂಕಿನ ಖಾತೆಗೆ ರಿಜಿಸ್ಟರ್ ಮಾಡಿಸಬೇಕು.
ಗ್ರಾಹಕರು ತಮ್ಮ ತಮ್ಮ ಶಾಖೆಗಳಿಗೆ ಹೋಗಿ ತಮ್ಮ ಮೊಬೈಲ್ ನಂಬರ್ ನ್ನು ಡಿಸೆಂಬರ್ 1ರ ಒಳಗೆ ರಿಜಿಸ್ಟರ್ ಮಾಡಿಸಿ ಎಂದು ದೇಶದ ಎಲ್ಲ ಗ್ರಾಹಕರಿಗೆ ಎಸ್‍ಬಿಐ ಸೂಚಿಸಿದೆ. ಒಂದು ವೇಳೆ ಡಿಸೆಂಬರ್ ಒಳಗೆ ನಂಬರ್ ರಿಜಿಸ್ಟರ್ ಮಾಡಿಸದಿದ್ದರೆ ಮುಂದೆ ತಮ್ಮ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ನಿರ್ಬಂಧಿಸಲಾಗುತ್ತದೆ ಎಂದು ಎಸ್‍ಬಿಐ ಸೂಚಿಸಿದೆ.
Advertisement
Advertisement
ನೋಟಿಸ್‍ನಲ್ಲಿ ಏನಿದೆ?
“ದಯವಿಟ್ಟು ನಿಮ್ಮ ಮೊಬೈಲ್ ನಂಬರ್ ನನ್ನು ತಕ್ಷಣವೇ ನಿಮ್ಮ ಖಾತೆಗೆ ನೊಂದಾಯಿಸಿ. ಇದು 2018 ಜನವರಿ 1 ರಿಂದ ಯಾರು ಇಂಟರ್ ನೆಟ್ ಸೇವೆ ಸೌಲಭ್ಯವನ್ನು ಹೊದಿರುತ್ತಾರೋ ಅವರ ಸೇವೆಗಳನ್ನು ನಿರ್ಬಧಿಸಲಾಗುತ್ತದೆ” ಎಸ್‍ಬಿಐ ತನ್ನ ವೆಬ್ ಸೈಟಿನಲ್ಲಿ ನೋಟಿಫಿಕೇಶನ್ ಪ್ರಕಟಿಸಿದೆ.
Advertisement
ನಿಮ್ಮ ಮೊಬೈಲ್ ನಂಬರ್ ಬ್ಯಾಂಕಿಗೆ ನೋಂದಣಿಯಾಗಿದೆ ಎಂದು ಪರಿಶೀಲಿಸುವುದು ಹೇಗೆ?
Advertisement
* ಮೊದಲು ಎಸ್‍ಬಿಐ ವೆಬ್‍ಸೈಟ್ ಲಾಗಿನ್ ಆಗಿ. (www.onlinesbi.com)
* ಬಳಿಕ ‘ನನ್ನ ಖಾತೆ’ (My account) ಟ್ಯಾಬಿಗೆ ಹೋಗಿ ಅಲ್ಲಿ ‘ಪ್ರೊಫೈಲ್'(Profile) ಗೆ ಕ್ಲಿಕ್ ಮಾಡಿ.
* ನಂತರ, ‘ವೈಯಕ್ತಿಕ ವಿವರಗಳನ್ನು’ (Personal details) ಕ್ಲಿಕ್ ಮಾಡಿ.
* ಪ್ರೊಫೈಲ್ ಪಾಸ್ ವರ್ಡ್ ಹಾಕಿ(ಇದು ಲಾಗಿನ್ ಪಾಸ್ ವಾರ್ಡ್ ಗಿಂತ ವಿಭಿನ್ನವಾಗಿರುತ್ತದೆ).
* ಪಾಸ್ ವರ್ಡ್ ಅನ್ನು ಸರಿಯಾಗಿ ಹಾಕಿದ ನಂತರ, ನೋಂದಾಯಿತ ಮೊಬೈಲ್ ನಂಬರ್ ನ್ನು ಡಿಸ್ ಪ್ಲೇ ಮಾಡಲಾಗುತ್ತದೆ.
ಮೊಬೈಲ್ ನಂಬರ್ ನ್ನು ಬ್ಯಾಂಕಿನ ಖಾತೆಯೊಂದಿಗೆ ನೋಂದಣಿ ಮಾಡಿಲ್ಲವೋ ಅವರು ತಕ್ಷಣವೇ ನಿಮ್ಮ ಶಾಖೆಗೆ ಭೇಟಿ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv